BMRCL Recruitment 2023: ಈ ಉದ್ಯೋಗ ಗಿಟ್ಟಿಸಿಕೊಂಡು ಲಕ್ಷಕ್ಕೂ ಅಧಿಕ ಸಂಬಳ ಪಡೆಯಿರಿ, ಇಲ್ಲಿದೆ ಮಾಹಿತಿ

ಬೆಂಗಳೂರು, ನವೆಂಬರ್‌, 19: ಬೆಂಗಳೂರು ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಲೇ ಇದೆ. ಹಾಗೆಯೇ ಹಾಗಾಗ ಉದ್ಯೋಗಗಳನ್ನು ಕರೆಯುತ್ತಲೇ ಇದೆ. ಇದೀಗ BMRCLನಲ್ಲಿ ಖಾಲಿ ಇರುವ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಮತ್ತು ಸಂಬಳ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇನ್ನು ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಇಲ್ಲಿ ಗಮನಿಸಿ.

Namma metro: Job Vacancy in BMRCL, know salary details

ಉದ್ಯೋಗ ಎಲ್ಲಿ ಹಾಗೂ ಸಂಬಳ ಎಷ್ಟು?

1. ನೇಮಕಾತಿ ಸಂಸ್ಥೆ - ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)

2- ಸಂಬಳ- 63,880 ರಿಂದ 1,22,540 ರೂಪಾಯಿ

3. ಹುದ್ದೆಗಳು - 10

4. ಉದ್ಯೋಗ ಸ್ಥಳ - ಬೆಂಗಳೂರು

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ B.E ಅಥವಾ B.Tech in CSE/ECE/EEE/Mechanical/Civil Engineering ಮುಗಿಸಿರಬೇಕು.

ಹುದ್ದೆಗಳು ಮತ್ತು ಸಂಬಳದ ವಿವರ

1. ಪ್ರಧಾನ ವ್ಯವಸ್ಥಾಪಕ ಹುದ್ದೆಗಳ ಸಂಖ್ಯೆ 4 ಇದ್ದು, ಗರಿಷ್ಠ ವಯೋಮಿತಿ 50 ವರ್ಷ ಆಗಿರಬೇಕು ಮತ್ತು 1,12,610 ರಿಂದ 1,60,620 ರೂಪಾಯಿ ಸಂಬಳ ಇರುತ್ತದೆ.

2. ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗಳ ಸಂಖ್ಯೆ 6 ಇದ್ದು, ಗರಿಷ್ಠ ವಯೋಮಿತಿ 45 ವರ್ಷ ಇರಬೇಕು - 63,880ರಿಂದ 1,22,540 ರೂಪಾಯಿ)

ಆಸಕ್ತ ಅಭ್ಯರ್ಥಿಗಳು 16-11-2023 ರಿಂದ 15-12-2023 ರವರೆಗೆ bmrcl.co.in ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ HR, Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru-560027 ಇವರಿಗೆ 20-12-2023 ರ ಮೊದಲು ಕಳುಹಿಸಬೇಕು.

ದಿನಾಂಕಗಳ ವಿವರ

1. ಅರ್ಜಿ ಸಲ್ಲಿಕೆ ಆರಂಭ: 16-11-2023
2. ಅರ್ಜಿ ಸಲ್ಲಿಕೆ ಕೊನೆಯ ದಿನ: 15-12-2023
3. ಹಾರ್ಡ್‌ ಕಾಫಿ ಸಲ್ಲಿಸಲು ಕೊನೆಯ ದಿನಾಂಕ: 20-12-2023

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+