Namma Metro Job: ಬೆಂಗಳೂರು ಮೆಟ್ರೋದಲ್ಲಿ ಮಾಸಿಕ ಸಂಬಳ ₹1,00,000 ಹುದ್ದೆಗೆ ಅರ್ಜಿ ಆಹ್ವಾನ
Namma Metro Job: ಬೆಂಗಳೂರಿಗರ ಜೀವನಾಡಿಗಳಲ್ಲಿ ಒಂದಾದ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ಆಗಾಗ ವಿಶೇಷ ಯೋಜನೆಗಳನ್ನು ಜಾರಿಗೆ ತರುವುದಲ್ಲದೆ, ಉದ್ಯೋಗವಕಾಶಗಳನ್ನು ಒದಗಿಸುತ್ತಾ ಬಂದಿದೆ. ಹಾಗಾದರೆ ಇದೀಗ ಮಾಸಿಕ 62,500 ರೂಪಾಯಿನಿಂದ 1,06,250 ರೂಪಾಯಿವರೆಗಿನ ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಯಾರೆಲ್ಲಾ ಈ ಹುದ್ದೆಗಳಿಗೆ ಅರ್ಹರು ಹಾಗೂ ಅರ್ಜಿ ಸಲ್ಲಿಸುವ ವಿಧಾನಗಳನ್ನು ಇಲ್ಲಿ ತಿಳಿಯಿರಿ.
ಬಿಇ, ಬಿ.ಟೆಕ್, ಎಂಬಿಎ ಮುಗಿಸಿದವರಿಗೆ ಬೆಂಗಳೂರಿನಲ್ಲಿ ಉದ್ಯೋಗ ಹರಸುತ್ತಿದ್ದರೆ ಅಂತವರಿಗೆ ನಮ್ಮ ಮೆಟ್ರೋ ಉದ್ಯೋಗವಕಾಶಗಳನ್ನು ಕಲ್ಪಿಸಿದೆ. ಹಾಗಾದರೆ ಯಾವೆಲ್ಲ ಹುದ್ದೆಗಳು ಖಾಲಿಯಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬಿಎಂಆರ್‌ಸಿಎಲ್ ಸಂಸ್ಥೆಯು ಸ್ವತ್ತು ಅಭಿವೃದ್ಧಿ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್) 1 ಪೋಸ್ಟ್,ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್) 4, ಅಸಿಸ್ಟೆಂಟ್ ಇಂಜಿನಿಯರ್ (ಇ ಅಂಡ್ ಎಂ) 1, ಅಸಿಸ್ಟೆಂಟ್ ಮ್ಯಾನೇಜರ್ (ಮಾರ್ಕೆಟಿಂಗ್) 1 ಸೇರಿದಂತೆ ಒಟ್ಟು 7 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಇನ್ನು ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ಮಾಸಿಕ ವೇತನ 1,06,250 ರೂಪಾಯಿ, ಅಸಿಸ್ಟಂಟ್ ಇಂಜಿನಿಯರ್ ಹುದ್ದಗೆ 62,500,ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಮಾಸಿಕ ವೇತನ 62,500 ರೂಪಾಯಿ ನೀಡಲಾಗುತ್ತದೆ. ಈ ಹುದ್ದೆಗಳು ಆನ್‌ಲೈನ್‌ನಲ್ಲು ಅರ್ಜಿ ಹಾಕಲು ಕೊನೆಯ ದಿನಾಂಕ ಜುಲೈ, 2, 2024 ಆಗಿದ್ದು, ಅರ್ಜಿಯ ಸಹಿ ಮಾಡಿದ ಪ್ರಿಂಟ್ ಔಟ್ ಅನ್ನು ಜುಲೈ 5 ಸಂಜೆ 04ರೊಳಗೆ ಸಲ್ಲಿಸಬೇಕಾಗುತ್ತದೆ. ಆಯ್ಕೆಯಾದರಿಗೆ 3 ವರ್ಷ ಅಷ್ಟೇ ಹುದ್ದೆಯಲ್ಲಿರಬಹುದಾಗಿದೆ.
ಜೆನೆರಲ್ ಮ್ಯಾನೇಜರ್ (ಹೆಚ್‌ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು- 560027 ಅರ್ಜಿ ಸಲ್ಲಿಕೆಯ ವಿಳಾಸವಾಗಿದೆ.
ವಿಭಾಗವಾರು ಹುದ್ದೆ, ವಯೋಮಿತಿ ವಿರವ
1. ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರಿಗೆ 45 ವರ್ಷ ಮೀರಿರಬಾರದು. ಬಿಇ, ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಪಾಸ್ ಆಗಿರಬೇಕಾಗಿದ್ದು, ಕನಿಷ್ಠ 12 ವರ್ಷ ಕೆಸಲದ ಅನುಭವ ಹೊಂದಿರಬೇಕಾಗುತ್ತದೆ.
2. ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರಿಗೆ 40 ವರ್ಷ ಮೀರಿರಬಾರದು. ಬಿಇ, ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಮುಗಿಸಿರಬೇಕಾಗುತ್ತದೆ. ಕನಿಷ್ಠ 05 ವರ್ಷ ಕಾರ್ಯಾನುಭವ ಇರಬೇಕಾಗುತ್ತದೆ.
3. ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು 40 ವರ್ಷ ಮೀರಿರಬಾರದು. ಬಿಇ, ಬಿ.ಟೆಕ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸ್ ಆಗಿರಬೇಕಾಗುತ್ತದೆ. ಕನಿಷ್ಠ 05 ವರ್ಷ ಕಾರ್ಯಾನುಭವ ಹೊಂದಿರಬೇಕಾಗುತ್ತದೆ.
4. ಅಸಿಸ್ಟೆಂಟ್ ಮ್ಯಾನೇಜರ್ (ಮಾರ್ಕೆಟಿಂಗ್) ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು 40 ವರ್ಷ ಮೀರಿರಬಾರದು. ಬಿಇ, ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್, ಬಿ.ಆರ್ಚ್ / ಎಂಬಿಎ ಮುಗಿಸಿರಬೇಕಾಗುತ್ತದೆ. ಜೊತೆಗೆ ಕನಿಷ್ಠ 05 ವರ್ಷ ಕಾರ್ಯಾನುಭವ ಹೊಂದಿರಬೇಕಾಗುತ್ತದೆ.
ವಿಭಾಗವಾರು ಹುದ್ದೆಗಳ ಸಂಬಳದ ವಿವರ
ಸ್ಟೇಷನ್ ಕಂಟ್ರೋಲರ್ ಅಥವಾ ಟ್ರೈನ್ ಆಪರೇಟರ್‌ಗೆ ಮಾಸಿಕ ವೇತನ 35,000-82660 ರೂಪಾಯಿ, ಸೆಕ್ಷನ್ ಇಂಜಿನಿಯರ್‌ಗೆ 40,000-94500, ಮೇಂಟೇನರ್ಸ್ 25,000-59060 ರೂಪಾಯಿ, ಜೆನೆರಲ್ ಮ್ಯಾನೇಜರ್‌ಗೆ 1,65,000 ರೂಪಾಯಿ, ಹೆಚ್ಚುವರಿ ಜೆನೆರಲ್ ಮ್ಯಾನೇಜರ್‌ಗೆ 1,50,000 ರೂಪಾಯಿ, ಡೆಪ್ಯೂಟಿ ಜೆನೆರಲ್ ಮ್ಯಾನೇಜರ್‌ಗೆ 1,40,000 ರೂಪಾಯಿ, ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್‌ಗೆ 85,000, ಮ್ಯಾನೇಜರ್‌ಗೆ 75,000 ರೂಪಾಯಿ, ಅಸಿಸ್ಟಂಟ್ ಮ್ಯಾನೇಜರ್‌ಗೆ ಮಾಸಿಕ ವೇತನ 50,000 ನೀಡಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಬಿಎಂಆರ್‌ಸಿಎಲ್ ವೆಬ್‌ಸೈಟ್ www.bmrc.co.in/Career Sectionಗೆ ಭೇಟಿ ನೀಡಬಹುದಾಗಿದೆ.
ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಿಗೆ ಜೂನ್ 7ರಂದು ಅರ್ಜಿ ಆಹ್ವಾನಿಸಲಾಗಿದ್ದು, ಕೊನೆಯ ದಿನಾಂಕ ಜುಲೈ 02 ಆಗಿದೆ. ಮಾಸಿಕ ವೇತನ 62,500ದಿಂದ 1,06,250 ರೂಪಾಯಿ ಇರಲಿದೆ.












Click it and Unblock the Notifications