NABARD Recruitment 2023: 150 ಹುದ್ದೆಗಳು ಖಾಲಿ ಇವೆ, ಸೆ.23 ರೊಳಗೆ ಅರ್ಜಿ ಸಲ್ಲಿಸಲು ವಿವರ ತಿಳಿಯಿರಿ

ಬೆಂಗಳೂರು, ಸೆಪ್ಟಂಬರ್ 21: ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆಂಡ್ ರೂರಲ್ ಡೆವಲಪ್​ಮೆಂಟ್ (NABARD) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರ ಹುದ್ದೆ ಪಡೆಯಲು ಇಚ್ಚಿಸುವವರು ಕೂಡಲೇ ಅರ್ಜಿ ಹಾಕಬೇಕಿದೆ.

ನಬಾರ್ಡ್‌ನಲ್ಲಿ ಒಟ್ಟು 150 ಸಹಾಯಕ ವ್ಯವಸ್ಥಾಪಕರ (ಅಸಿಸ್ಟೆಂಟ್ ಮ್ಯಾನೇಜರ್) ಹುದ್ದೆಗಳು ಖಾಲಿ ಇವೆ. ಆಸಕ್ತರು ಆನ್‌ಲೈನ್ ಮೂಲಕ ಸೆಪ್ಟೆಂಬರ್ 23 ಒಳಗಾಗಿ ಅರ್ಜಿ ಸಲ್ಲಿಸಬೇಕಿದೆ. ಈ ಮೂಲಕ ಸರ್ಕಾರಿ ಉದ್ಯೋಗ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಅರ್ಜಿ ಸಲ್ಲಿಕೆಗೂ ಮೊದಲು ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ವಿಧಾನ ತಿಳಿಯಿರಿ.

NABARD Recruitment 2023: Invite Application For Several Posts From Eligible

ನೇಮಕಾತಿ ವಿವರ

ಸಂಸ್ಥೆ ಹೆಸರು: ನಬಾರ್ಡ್

ಹುದ್ದೆ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್

ಖಾಲಿ ಹುದ್ದೆ ಎಷ್ಟು: 150

ಶೈಕ್ಷಣಿಕ ಅರ್ಹತೆ: ಸ್ನಾತಕೋತ್ತರ ಪದವಿ

ಮಾಸಿಕ ಸಂಬಳ: 44,500 ನಿಂದ 89,150 ರೂಪಾಯಿ

ಉದ್ಯೋಗದ ಸ್ಥಳ: ಭಾರತ

ಸಂದರ್ಶನ ದಿನಾಂಕ: ಸೆಪ್ಟೆಂಬರ್ 23

ಹುದ್ದೆಯ ಮಾಹಿತಿ

ಸಿವಿಲ್ ಎಂಜಿನಿಯರಿಂಗ್: 3

ಎಲೆಕ್ಟ್ರಿಕಲ್ ಎಂಜಿನಿಯರಿಂಗ್: 3

ಗಿಯೋ ಇನ್ಫರ್ಮಾಟಿಕ್ಸ್​: 2

ಜನರಲ್​: 77

ಕಂಪ್ಯೂಟರ್/ಇನ್ಫರ್ಮೇಶನ್ ಟೆಕ್ನಾಲಜಿ: 40

ಫೈನಾನ್ಸ್​: 15

ಫುಡ್ ಪ್ರೊಸೆಸಿಂಗ್: 2

ಸ್ಟಾಟಿಸ್ಟಿಕ್ಸ್​: 2

ಮಾಸ್​ ಕಮ್ಯುನಿಕೇಶನ್/ಮೀಡಿಯಾ ಸ್ಪೆಷಲಿಸ್ಟ್: 1

ಕಂಪನಿ ಸೆಕ್ರೆಟರಿ: 3

ಫಾರೆಸ್ಟ್ರಿ: 2

ಶೈಕ್ಷಣಿಕ ಅರ್ಹತೆ

ನಬಾರ್ಡ್ ನ ವಿವಿಧ ಹುದ್ದೆಗಳಿಗೆ ಜನರಲ್​ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿಡಿಎಂ, ಪಿಎಚ್​.ಡಿ, ಕಂಪ್ಯೂಟರ್/ ಪದವಿ, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಟೆಕ್ನಾಲಜಿ/ ಕಂಪ್ಯೂಟರ್ ಅಪ್ಲಿಕೇಶನ್​/ ಇನ್ಫರ್ಮೇಶನ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಫುಡ್ ಪ್ರೊಸೆಸಿಂಗ್/ ಫುಡ್ ಟೆಕ್ನಾಲಜಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾಭ್ಯಾಸ ನಡೆಯಲಿದೆ.

NABARD Recruitment 2023: Invite Application For Several Posts From Eligible

ವಯಸ್ಸಿನ ಮಿತಿ

ಅಭ್ಯರ್ಥಿಗಳ ವಯಸ್ಸು ಇದೇ ಸೆಪ್ಟೆಂಬರ್ 1 ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳು, ಪರಿಶಿಷ್ಟ ಜಾತಿ-ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ, PWBD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PWBD (OBC) ಅಭ್ಯರ್ಥಿಗಳು 13 ವರ್ಷಗಳು, PWBD ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಉದ್ಯೋಗ ಸ್ಥಳ: ವೇತನ

ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆ ಆಗುವವರಿಗೆ ಭಾರತದ ಎಲ್ಲಿಯಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಅವರಿಗೆ ಮಾಸಿಕ ₹ 44,500-89,150 ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಅರ್ಜಿ ಶುಲ್ಕದ ಮಾಹಿತಿ

ಅರ್ಜಿ ಸಲ್ಲಿಕೆಗೆ ನಬಾರ್ಡ್​ ಸ್ಟಾಫ್​ ಅಭ್ಯರ್ಥಿಗಳಿಗೆ ಯಾವದೇ ಶುಲ್ಕ ಇಲ್ಲ. ಇನ್ನು ಎಸ್‌ಸಿ, ಎಸ್‌ಟಿ/PWBD ಅಭ್ಯರ್ಥಿಗಳಿಗೆ 150 ರೂಪಾಯಿ, ಉಳಿದ ಎಲ್ಲ ಅಭ್ಯರ್ಥಿಗಳು 800 ರೂಪಾಯಿ ಇದ್ದು, ಆ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಪೂರ್ವಭಾವಿ ಪರೀಕ್ಷೆ ನಡೆಸಿ ನಂತರ ಮುಖ್ಯ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಆಯ್ಕೆ ಆಗುವವರಿಗೆ ಸಂದರ್ಶನ ನಡೆಸಲಾಗುವುದು. ಇನ್ನೂ ಪೂರ್ವಭಾವಿ ಪರೀಕ್ಷೆ ಹಂತ-1 ಮುಂದಿನ ತಿಂಗಳ ಅಕ್ಟೋಬರ್ 16 ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+