ನಬಾರ್ಡ್ ನೇಮಕಾತಿ 2022: 177 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಸೆಪ್ಟೆಂಬರ್ 11: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ನಲ್ಲಿ 2022ನೇ ಸಾಲಿನ ನೇಮಕಾತಿ ಆರಂಭಿಸಲಾಗಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅಭಿವೃದ್ಧಿ ಸಹಾಯಕ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 10, 2022ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಸಂಸ್ಥೆ : National Bank for Agriculture and Rural Development
ಹುದ್ದೆ ಹೆಸರು: Development Assistant
ಒಟ್ಟು ಹುದ್ದೆ: 177
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 10, 2022
ಸಂಬಳ ವಿವರ: 13,150 ರು ನಿಂದ 34,990 ರು
ಹುದ್ದೆಗಳ ವಿವರ
Development Assistant: 173
Development Assistant (Hindi): 4
ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಹಿಂದಿ ಭಾಷೆ ಸಹಿತ ಪದವಿ

ಸಾಮಾನ್ಯ:
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 50% ಅಂಕಗಳೊಂದಿಗೆ (SC/ST/PWBD ಅರ್ಜಿದಾರರು - 45%) ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ (SC/ST/PWBD ಅರ್ಜಿದಾರರು - 45% ) ಒಟ್ಟಾರೆಯಾಗಿ ಅಥವಾ ಪಿಎಚ್‌ಡಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ / ಕಾಸ್ಟ್ ಅಕೌಂಟೆಂಟ್ / ಕಂಪನಿ ಕಾರ್ಯದರ್ಶಿ ಪದವಿಯೊಂದಿಗೆ ಅಥವಾ ಎರಡು ವರ್ಷಗಳ ಪೂರ್ಣ ಸಮಯದ ಪಿ.ಜಿ. ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ / GOI / UGC ನಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪೂರ್ಣ ಸಮಯದ ಎಂಬಿಎ ಪದವಿ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ.
ಅಭ್ಯರ್ಥಿಯು ಗ್ರೇಡ್ 'ಎ' (ಪಿ ಮತ್ತು ಎಸ್‌ಎಸ್) ಹುದ್ದೆಗಳಲ್ಲಿ ನಬಾರ್ಡ್ ಅಧಿಕಾರಿಗೆ ಅರ್ಹತೆ ಪಡೆಯಲು ಮಾನ್ಯವಾದ ಎಕ್ಸ್‌ಸರ್ವಿಸ್‌ಮ್ಯಾನ್ ಗುರುತಿನ ಚೀಟಿಯನ್ನು ಹೊಂದಿರುವ ಸೇನೆ/ನೌಕಾಪಡೆ/ವಾಯುಸೇನೆಯಲ್ಲಿ ಕನಿಷ್ಠ 5 ವರ್ಷಗಳ ಕಮಿಷನ್ಡ್ ಸೇವೆಯನ್ನು ಹೊಂದಿರುವ ಅಧಿಕಾರಿಯ ಅನುಭವವನ್ನು ಹೊಂದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 21 ರಿಂದ 35 ವರ್ಷ ಎಂದು ವಯೋಮಿತಿ ನಿಗದಿ ಮಾಡಲಾಗಿದೆ. ಎಸ್ ಸಿ/ ಎಸ್ಟಿ (5 ವರ್ಷ), ಒಬಿಸಿ (3 ವರ್ಷ), ವಿಶೇಷ ಚೇತನ-ಸಾಮಾನ್ಯ (10 ವರ್ಷ), ವಿಶೇಷ ಚೇತನ ಎಸ್ ಸಿ/ ಎಸ್ಟಿ -(15 ವರ್ಷ), ವಿಶೇಷ ಚೇತನ- ಒಬಿಸಿ (13 ವರ್ಷ)
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ನೇಮಕಾತಿ ಪ್ರಕ್ರಿಯೆ: ಪೂರ್ವಭಾವಿ ಪರೀಕ್ಷೆ(200 ಅಂಕ) ಹಾಗೂ ಮುಖ್ಯ ಪರೀಕ್ಷೆ( 200 ಅಂಕಗಳು) ಸಂದರ್ಶನ 50 ಅಂಕಗಳು ಹಾಗೂ 100 ಅಂಕಗಳು
ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಸೆಪ್ಟೆಂಬರ್ 15, 2022
ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಕ್ಟೋಬರ್ 10, 2022
ಅರ್ಜಿ ಸಲ್ಲಿಸುವುದು ಹೇಗೆ?
* ನಬಾರ್ಡ್ ನೇಮಕಾತಿ 2022 ಅಧಿಸೂಚನೆಯಂತೆ ಅರ್ಹರಾದ ಅಭ್ಯರ್ಥಿಗಳು ನಬಾರ್ಡ್ ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಡಿ.
* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ.
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ
* ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
* Development Assistant ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications