ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ತರಗತಿ ಪಾಸಾದವರಿಗೆ ಮೈಸೂರು ಕೋರ್ಟಿನಲ್ಲಿ ಉದ್ಯೋಗ

By Mahesh
|
Google Oneindia Kannada News

ಮೈಸೂರು, ಜೂನ್ 28: ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ 7ನೇ ತರಗತಿ ಪಾಸಾದವರಿಗೆ Peon ಉದ್ಯೋಗ ಲಭ್ಯವಿದೆ. ಈ ಕುರಿತಂತೆ, 39 ಸೇವಕ(Peon) ನೇಮಕಾತಿಗಾಗಿ ಕರ್ನಾಟಕ ನ್ಯಾಯಾಂಗವು ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಜುಲೈ 26 ಕೊನೆ ದಿನಾಂಕವಾಗಿದೆ.

ಮಂಡ್ಯ ಜಿಲ್ಲಾ ಕೋರ್ಟಿನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ ಮಂಡ್ಯ ಜಿಲ್ಲಾ ಕೋರ್ಟಿನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು ಘಟಕದಲ್ಲಿ ಖಾಲಿಯಿರುವ 39 ಹುದ್ದೆಗಳಿಗೆ ಸಂಬಂಧಪಟ್ಟ ಅರ್ಜಿ ನಮೂನೆಯನ್ನು ಇಕೋರ್ಟ್ಸ್ ವೆಬ್ ಸೈಟ್[http://ecourts.gov.in/mysuru] ನಿಂದ ಪಡೆದುಕೊಳ್ಳಬಹುದು. ಭಾರತೀಯ ಸ್ಟೇಟ್ ಬ್ಯಾಂಕ್ ಚಲನ್ ಮುಖಾಂತರ ಶುಲ್ಕವನ್ನು ಜುಲೈ 27ರಂದು ಪಾವತಿಸಬಹುದು.

Mysore District Court recruitment Peon post


ಅರ್ಜಿ ಸಲ್ಲಿಸಬೇಕಾದ ವಿಳಾಸ:
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೈಸೂರು 0821-2330452

ಹುದ್ದೆ : ಸೇವಕರು (Peon)
ಹುದ್ದೆಗಳ ಸಂಖ್ಯೆ : 39
ವೇತನ ಶ್ರೇಣಿ : 17000 ರಿಂದ 28950 ರು
ವಿದ್ಯಾರ್ಹತೆ : 7ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದೊಳಗೆ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ: ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ 01 ಹುದ್ದೆಗೆ 10 ಅಭ್ಯರ್ಥಿಗಳಂತೆ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳು (ಎನ್ ಪಿಎಸ್) ನೂತನ ಪಿಂಚಣಿ ಯೋಜನೆಗೆ ಒಳಪಡುತ್ತಾರೆ.

ವಯೋಮಿತಿ : ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ(ಸಾಮಾನ್ಯ ವರ್ಗ), 2ಎ,2ಬಿ, 3ಎ, 3ಬಿ -38 ವರ್ಷ, ಪ. ಜಾತಿ, ಪ. ಪಂಗಡ, ಪ್ರವರ್ಗ -1 -40 ವರ್ಷ

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿ - ಯಾವುದೇ ಶುಲ್ಕವಿಲ್ಲ.
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ- 100
ಸಾಮಾನ್ಯ ವರ್ಗ : 200

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
Mysore District Court Karnataka Judiciary has published recruitment notification for the post of Peon. The last date for submission of online applications is July 26, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X