ಮೈಸೂರು ಕೋರ್ಟ್ ನೇಮಕಾತಿ : 80 ಹುದ್ದೆಗಳಿಗೆ ಅರ್ಜಿ ಹಾಕಿ
ಬೆಂಗಳೂರು, ಜನವರಿ 24 : ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 80 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಫೆಬ್ರವರಿ 18 ರಿಂದ ಮಾರ್ಚ್ 20ರ ತನಕ ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಜವಾನ 46, ಟೈಪಿಸ್ಟ್ 24, ಸ್ಟೆನೋ ಗ್ರಾಫರ್ 9, ಆದೇಶ ಜಾರಿಕಾರ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ 7ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ 35 ವರ್ಷಗಳು (20/3/ 2019ಕ್ಕೆ ಅನ್ವಯವಾಗುವಂತೆ) ಅರ್ಜಿಗಳನ್ನು ಸಲ್ಲಿಸಲು ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ. ಲಿಖಿತ ಪರೀಕ್ಷೆ ಮತ್ತು ಸ್ಕಿಲ್ ಟೆಸ್ಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವೇತನ ಶ್ರೇಣಿ
* ಜವಾನ 17000-28950 ರೂ. ವೇತನ ಪ್ರತಿ ತಿಂಗಳು
* ಟೈಪಿಸ್ಟ್ 21400-42000 ರೂ. ವೇತನ ಪ್ರತಿ ತಿಂಗಳು
* ಸ್ಟೆನೋಗ್ರಾಫರ್ 27650-52650 ವೇತನ ಪ್ರತಿ ತಿಂಗಳು
* ಆದೇಶ ಜಾರಿಕಾರರು 19950 - 379000 ವೇತನ ಪ್ರತಿ ತಿಂಗಳು
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ವಿಳಾಸ












Click it and Unblock the Notifications