ಪೌರಾಡಳಿತ ಇಲಾಖೆಯಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಫೆಬ್ರವರಿ 12 : ಪೌರಾಡಳಿತ ನಿರ್ದೇಶನಾಲಯದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 29, 2016.
ಪೌರಾಡಳಿತ ನಿರ್ದೇಶನಾಲಯದಲ್ಲಿ ಸ್ವಚ್ಛ ಭಾರತ ಮಿಶನ್ ಯೋಜನೆಯಡಿಯಲ್ಲಿ ರಚನೆಗೊಂಡಿರುವ 'State Mission Directorate'ಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ : ಎಂ.ಐ.ಎಸ್ (ಮಾಹಿತಿ ನಿರ್ವಹಣಾ ತಜ್ಞರು) ಸ್ಪೆಷಲಿಷ್ಟ್, 1 ಹುದ್ದೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಎಮ್.ಇ/ಎಮ್.ಟೆಕ್/ಎಮ್.ಸಿ.ಎ/ಎಮ್.ಎಸ್.ಸಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದಿರಬೇಕು. [ನೇಮಕಾತಿ ಆದೇಶ]
ಐಇಸಿ ಸ್ಪೆಷಲಿಸ್ಟ್, 1 ಹುದ್ದೆ, ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯೂನಿಕೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ. [RTO ನೇಮಕಾತಿ ವಿವರಗಳು]
ಪ್ರೋಕ್ಯೂರ್‌ಮೆಂಟ್ ಎಕ್ಸ್‌ಪರ್ಟ್, 1 ಹುದ್ದೆ, ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಎಮ್.ಇ/ಎಮ್.ಟೆಕ್ ಪದವಿ. ಅರ್ಜಿಗಳನ್ನು https://www.muncipaladmin.gov.in ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. [846 ಇಂಜಿನಿಯರ್ ಗಳ ನೇಮಕಾತಿ]
ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಳಿಗಾಗಿ ಕಾರ್ಯಪಾಲಕ ಅಭಿಯಂತರರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು - 560010 ಇವರನ್ನು ಸಂಪರ್ಕಿಸಬಹುದು ಅಥವ 080-22868556 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.












Click it and Unblock the Notifications