MSIL recruitment; 71 ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ
ಬೆಂಗಳೂರು, ಏಪ್ರಿಲ್ 09; ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಮೇ 17, 2023 ಕೊನೆಯ ದಿನವಾಗಿದೆ.
ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಬೆಂಗಳೂರು ಇಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಕರೆದಿದೆ. 15/4/2023ರಂದು ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.

ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಸರ್ಕಾರದ ಆದೇಶಗಳಿಗೆ ಒಳಪಟ್ಟಿರುತ್ತದೆ. ಸರ್ಕಾರಿ ಇಲಾಖೆ/ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ವಿಧಾನ, ಶೈಕ್ಷಣಿಕ ವಿದ್ಯಾರ್ಹತೆ, ಹುದ್ದೆಗಳ ವರ್ಗೀಕರಣ, ಸ್ಮರ್ಧಾತ್ಮಕ ಪರೀಕ್ಷೆಯ ವಿಧಾನ ಹಾಗೂ ನೇಮಕಾತಿಗೆ ಸಂಬಂಧಿಸಿದ ಇತರೆ ಷರತ್ತುಗೊಳ್ಳನ್ನು ಒಳಗೊಂಡ ವಿವರವಾದ ಪ್ರಕಟಣೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಯಲಿದೆ.
ಆಸಕ್ತ ಮತ್ತು ಅರ್ಹರು ಕೇವಲ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅಭ್ಯರ್ಥಿಗಳಿಗೆ ಈ ಮೇಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ, ನೇಮಕಾತಿಯು ಸರ್ಕಾರವು ನಿಗದಿಪಡಿಸಬಹುದಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಮೇಲಿನ ಯಾವುದೇ ನಿಯಮಗಳು/ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ವ್ಯತ್ಯಾಸ ಅಥವಾ ಅಸ್ಪಷ್ಟತೆ ಕಂಡು ಬಂದಲ್ಲಿ, ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977/ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 (ತಿದ್ದುಪಡಿಗಳು) ರಲ್ಲಿರುವಂತೆ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.
ಹುದ್ದೆಗಳ ಮಾಹಿತಿ; ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ನಲ್ಲಿರುವ ಸಹಾಯಕ ವ್ಯವಸ್ಥಾಪಕ 23, ಮೇಲ್ವಿಚಾರಕರು 23, ಪದವೀಧರ ಗುಮಾಸ್ತರು 6, ಗುಮಾಸ್ತರು 13 ಮತ್ತು ಮಾರಾಟ ಪ್ರತಿನಿಧಿ/ ಪ್ರೊಗ್ರಾಮರ್ 6 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸಹಾಯಕ ವ್ಯವಸ್ಥಾಪಕ ಹುದ್ದೆ ಉಳಿಕೆ ಮೂಲ ವೃಂದ 20, ಕಲ್ಯಾಣ ಕರ್ನಾಟಕ ವೃಂದ 3. ಮೇಲ್ವಿಚಾರಕರು ಉಳಿಕೆ ಮೂಲ ವೃಂದ 20, ಕಲ್ಯಾಣ ಕರ್ನಾಟಕ ವೃಂದ 3. ಪದವೀಧರ ಗುಮಾಸ್ತರು ಉಳಿಕೆ ಮೂಲ ವೃಂದ 5, ಕಲ್ಯಾಣ ಕರ್ನಾಟಕ ವೃಂದ 1. ಗುಮಾಸ್ತರು ಉಳಿಕೆ ಮೂಲ ವೃಂದ 12, ಕಲ್ಯಾಣ ಕರ್ನಾಟಕ ವೃಂದ 1. ಮಾರಾಟ ಪ್ರತಿನಿಧಿ/ ಪ್ರೊಗ್ರಾಮರ್ ಕಲ್ಯಾಣ ಕರ್ನಾಟಕ ವೃಂದ 1 ಹುದ್ದೆ ತುಂಬಲಾಗುತ್ತಿದೆ.
ವೇತನ ಶ್ರೇಣಿ; ಸಹಾಯಕ ವ್ಯವಸ್ಥಾಪಕ ಹುದ್ದೆ 44,200-80,100 ರೂ.ಗಳು. ಮೇಲ್ವಿಚಾರಕರು 35,150-64,250 ರೂ.ಗಳು. ಪದವೀಧರ ಗುಮಾಸ್ತರು 25,200-50,150 ರೂ.ಗಳು. ಗುಮಾಸ್ತರು 21,900-43,100 ರೂ.ಗಳು. ಮಾರಾಟ ಪ್ರತಿನಿಧಿ/ ಪ್ರೊಗ್ರಾಮರ್ 28,950-55,350 ರೂ.ಗಳು.
ಪ್ರಮುಖ ದಿನಾಂಕಗಳು
* ವಿವರವಾದ ಅಧಿಸೂಚನೆ ಪ್ರಕಟ 15/4/2023
* ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ 17/4/2023
* ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನ 17/5/2023
* ಶುಲ್ಕ ಪಾವತಿಗೆ ಕೊನೆಯ ದಿನ 20/5/2023












Click it and Unblock the Notifications