MRPL Recruitment 2023: ಮಂಗಳೂರಿನಲ್ಲಿ 2.80 ಲಕ್ಷ ರೂ. ಉದ್ಯೋಗ, ನೇಮಕಾತಿ ವಿವರ ತಿಳಿದು ಅರ್ಜಿ ಹಾಕಿ

ಬೆಂಗಳೂರು, ಅಕ್ಟೋಬರ್ 25: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿ ಪ್ರಕ್ರಿಯೆ ಆರಂಭಿಸಿರುವ ಸಂಸ್ಥೆಯು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಒಂದು ಡೆಪ್ಯುಟಿ ಜನರಲ್ ಮ್ಯಾನೇಜರ್ (ಸೆಕ್ರೆಟೇರಿಯಲ್) ಹುದ್ದೆ ಖಾಲಿ ಇದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮುಂದಿನ ತಿಂಗಳು ನವೆಂಬರ್ 6ರೊಳಗೆ ಅಂಚೆ ಮೂಲಕ (Offline) ಸೂಕ್ತ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆ ತಿಳಿಸಿದೆ. ಅರ್ಜಿ ಸಲ್ಲಿಕೆಗೂ ಮೊದಲು ಇಲ್ಲಿ ತಿಳಿಸಲಾಗಿರುವ ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.

MRPL Recruitment 2023: MRPL Will Be Appoints Eligible Candidate For Empty Vacant

ಹುದ್ದೆ ನೇಮಕಾತಿ ಪೂರ್ಣ ವಿವರ

ಸಂಸ್ಥೆ ಹೆಸರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)

ಹುದ್ದೆ ಹೆಸರು: ಡೆಪ್ಯುಟಿ ಜನರಲ್ ಮ್ಯಾನೇಜರ್

ಖಾಲಿ ಹುದ್ದೆ ಸಂಖ್ಯೆ: ಒಂದು

ಮಾಸಿಕ ವೇತನ: 1,20,000 ರಿಂದ 2,80,000 ರೂಪಾಯಿ

ಪೋಸ್ಟಿಂಗ್: ಮಂಗಳೂರು

ಸಂದರ್ಶನದ ದಿನಾಂಕ: ನವೆಂಬರ್ 6

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾದ ಸಹಾಯಕ ಸದಸ್ಯತ್ವವನ್ನು ಪೂರ್ಣ ಮಾಡಿರಬೇಕು ಎಂದು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಅಧಿಸೂಚನೆ ತಿಳಿಸಿದೆ.

ವಯಸ್ಸಿನ ಮಿತಿ ವಿವರ

ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಂದಿನ ತಿಂಗಳ ನವೆಂಬರ್ 6ರ ಹೊತ್ತಿಗೆ ಗರಿಷ್ಠ 46 ವರ್ಷ ಮೀರಿರಬಾರದು ಎಂದು ಸಂಸ್ಥೆ ತಿಳಿಸಿದೆ. ಇನ್ನೂ ನಿಯಮಾನುಸಾರ PwBD ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

MRPL Recruitment 2023: MRPL Will Be Appoints Eligible Candidate For Empty Vacant

ಅರ್ಜಿ ಶುಲ್ಕ ಮಾಹಿತಿ

ಅರ್ಜಿ ಸಲ್ಲಿಸುವವ ಅಭ್ಯರ್ಥಿಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡ/PwBD/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಉಳಿದಂತೆ ಸಾಮಾನ್ಯ/OBC (NCL)/EWS ಅಭ್ಯರ್ಥಿಗಳಿಗೆ 118 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಚಲನ್ ಮೂಲಕವೇ ಶುಲ್ಕ ಪಾವತಿಸಬೇಕಿದೆ.

ಆಯ್ಕೆ ಹೇಗೆ ನಡೆಯಲಿದೆ?

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳನ್ನು ನವೆಂಬರ್ 6ರಂದು ನಡೆಯಲಿರುವ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಮಾಸಿಕ 1,20,000 ನಿಂದ 2,80,000 ರೂಪಾಯಿವರೆಗೆ ವೇತನ ಸಹಿತ ಮಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು.

ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಹಿತ ಭರ್ತಿ ಮಾಡಿದ ಅರ್ಜಿಯನ್ನು ''ಜನರಲ್ ಮ್ಯಾನೇಜರ್ (HR), ನೇಮಕಾತಿ ವಿಭಾಗ, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಕುಥೆತ್ತೂರ್ ಪೋಸ್ಟ್, ಮಂಗಳೂರು-575030

ಕರ್ನಾಟಕ' ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು ಎಂದು ಸಂಸ್ಥೆ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+