Microsoft layoffs: ಒಂದಲ್ಲ..ಎರಡಲ್ಲ.. ಬರೋಬ್ಬರಿ 9,000 ಉದ್ಯೋಗಿಗಳ ಕಡಿತಕ್ಕೆ ದೈತ್ಯ ಮೋಕ್ರೋಸಾಫ್ಟ್ ಕಂಪನಿ ನಿರ್ಧಾರ
Microsoft layoffs: ಅಮೆರಿಕಾ ಮೂಲದ ಪ್ರಸಿದ್ಧ ಎಂಎನ್‌ಸಿ (ಮಲ್ಟಿ ನ್ಯಾಷನಲ್ ಕಂಪನಿ) ಮೈಕ್ರೋಸಾಫ್ಟ್ ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಹಾಗಾದ್ರೆ ಕಾರಣ ಏನು ಹಾಗೂ ಎಷ್ಟು ಉದ್ಯೋಗಿಗಳ ತೆಗೆದುಹಾಕಲು ಮುಂದಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇತ್ತೀಚಿನ ದಿನಗಳಲ್ಲಿ ದೈತ್ಯ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸುತ್ತಲಿವೆ. ಹಾಗೆಯೇ ಇದೀಹ ದೈತ್ಯ ಮೈಕ್ರೋಸಾಫ್ಟ್ ಕೂಡ ಒಂದಲ್ಲ, ಎರಡಲ್ಲ ಬರೋಬ್ಬರಿ 9,000 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ. ಇದು ಈ ವರ್ಷದಲ್ಲಿ ದೇಶದಲ್ಲೇ ಅತೀ ದೊಡ್ಡ ಮಟ್ಟದ ಕಡಿತ ಎಂದು ಹೇಳಲಾಗುತ್ತಿದೆ.

ಈ ಹಿಂದೆ 2023ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೈಕ್ರೋಸಾಫ್ಟ್ ಇದೀಗ ಅದಕ್ಕಿಂತ ಅತೀ ದೊಡ್ಡ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದೆ. ಒಟ್ಟು ಉದ್ಯೋಗಿಗಳ ಪೈಕಿ ಶೇಕ 4ರಷ್ಟು ಅಥವಾ 9,100 ಜನರನ್ನು ವಜಾ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ ಎಂದು ವರದಿಯಾಗಿದೆ.
ಇನ್ನು ಮೈಕ್ರೋಸಾಫ್ಟ್ ಜೂನ್ 2024ರ ವೇಳೆಗೆ ವಿಶ್ವಾದ್ಯಂತ ಸುಮಾರು 2,28,000 ಉದ್ಯೋಗಿಗಳನ್ನು ಹೊಂದಿತ್ತು. ಆದರೆ, ಮೇ ತಿಂಗಳಲ್ಲಿ 6,000 ಉದ್ಯೋಗಿಗಳನ್ನು ವಜಾ ಮಾಡಿತ್ತು. ಈ ಬಾರಿ ಅದರಲ್ಲೂ ಮಾರಾಟ ವಿಭಾಗದಲ್ಲಿ ಉದ್ಯೋಗಿಗಳನ್ನು ಕಿತ್ತು ಹಾಕುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಸಾಮಾನ್ಯವಾಗಿ ಉದ್ಯೋಗಿಗಳನ್ನು ಕಡಿತಗೊಳಿಸುವ ಮುನ್ನ ಕಂಪನಿಗಳು ಕೊಡುವ ಕಾರಣವೇ ಆರ್ಥಿಕ ನಷ್ಟ. ಹಾಗೆಯೇ ಇದೀಗ ಮೈಕ್ರೋಸಾಫ್ಟ್ ಕೂಡ ಆರ್ಥಿಕ ಅಸ್ಥಿರತೆಯಿಂದ ಕಳೆದ ವರ್ಷದಿಂದ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಇದರಲ್ಲಿ ನೌಕರರ ವಜಾ ಕ್ರಮ ಸಹ ಸೇರಿದೆ.
ಕಳೆದ ವರ್ಷ ಅಂದ್ರೆ 2024ರಲ್ಲಿ ಇದೇ ರೀತಿಯಲ್ಲಿ ಉದ್ಯೋಗ ಕಡಿತಗೊಳಿಸುವ ಮೂಲಕ ಕಂಪನಿಯು ತನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನಕ್ಕೆ ಮುಂದಾಗಿತ್ತು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುತ್ತಿರುವ ಟೆಕ್ ಕಂಪನಿಗಳು ಉದ್ಯೋಗ ಕಡಿತದ ಅಸ್ತ್ರಕ್ಕೆ ಮುಂದಾಗಿವೆ.
ಈಗಾಗಲೇ ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಶೇಕಡ 5ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಣೆ ಮಾಡಿತ್ತು. ಅದೇ ವೇಳೆ ಗೂಗಲ್ ಸಹ ತುಂಬಾ ಉದ್ಯೋಗಿಗಳನ್ನು ತೆಗೆದುಹಾಕಿತ್ತು. ಅದರಲ್ಲೂ ಎಐ ತಂತ್ರಜ್ಞಾನ ಎಂಟ್ರಿ ಕೊಟ್ಟಾಗಿನಿಂದ ಹೆಚ್ಚಿನ ಪ್ರಮಾಣ ಉದ್ಯೋಗ ಕಡಿತವಾಗಿವೆ ಎಂದು ಹೇಳಲಾಗುತ್ತಿದೆ.
ಎಲ್ಲಿ ನೋಡಿದರೂ ಎಐನದ್ದೇ ಸದ್ದು. ಅಷ್ಟರ ಮಟ್ಟಿಗೆ ದಿನದಿಂದ ದಿನಕ್ಕೆ ತನ್ನ ಜಾಲವನ್ನ ಹೆಚ್ಚಿಕೊಳ್ಳುತ್ತಾ ಎಐ ಕ್ರಾಂತಿ ಮಾಡುತ್ತಿದೆ. ಸಣ್ಣಪುಟ್ಟ ಕಂಪನಿಗಳಿಂದ ಹಿಡಿದು ಐಟಿ-ಬಿಟಿ ಅಷ್ಟೇ ಯಾಕೆ ಆರೋಗ್ಯ ಕ್ಷೇತ್ರದಲ್ಲೂ ಎಐ ನೆಲೆಯೂರಿದೆ. ಅತೀ ಬೇಗನೇ ಮಾಹಿತಿ ಒದಗಿಸುವ ಈ ತಂತ್ರಜ್ಞಾನಕ್ಕೆ ತಕ್ಕಂತೆ ಉದ್ಯೋಗಿಗಳು ಹೊಂದಿಕೊಳ್ಳುವಂತಹ ಪರಿಸ್ಥಿತಿಯೂ ನಿರ್ಮಾಣ ಆಗಿದೆ.
ಬೇಕಾದ ಮಾಹಿತಿಯನ್ನು ಅತೀ ಬೇಗನೆ ಒದಗಿಸುವುದರಿಂದ ಇದನ್ನು ಹೆಚ್ಚು ಮಂದ ಬಳಕೆ ಮಾಡುತ್ತಿದ್ದಾರೆ. ಕಂಪನಿಗಳು ಸಹ ಇದನ್ನೇ ಅಳವಡಿಸಿಕೊಳ್ಳುವ ಮೂಲಕ ಉದ್ಯೋಗಿಗಳನ್ನು ವಜಾಗೊಳಿಸಿ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿವೆ. ದೈತ್ಯ ಮೈಕ್ರೋಸಾಫ್ಟ್ ಸಹ ಇದೇ ಹಾದಿ ಹಿಡಿದಿದೆ.












Click it and Unblock the Notifications