Meta Layoffs: ವಾಟ್ಸಾಪ್, ಇನ್ಸ್‌ಸ್ಟಾಗ್ರಾಮ್ ಟೀಂ ಉದ್ಯೋಗಿಗಳು ವಜಾ
ಬೆಂಗಳೂರು, ಅಕ್ಟೋಬರ್ 17: ಸೋಷಿಯಲ್ ಮೆಟಾವರ್ಸ್ ಕಂಪನಿ (Meta) ತನ್ನದೇ ಆದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ರಿಯಾಲಿಟಿ ಲ್ಯಾಬ್‌ಗಳು ಸೇರಿದಂತೆ ಇನ್ನಿತರ ವೇದಿಕೆ ಹೊಂದಿದೆ. ಈ ಪೈಕಿ ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ರಿಯಾಲಿಟಿ ಲ್ಯಾಬ್‌ಗಳು ಯುನಿಟ್ ಗಳಲ್ಲಿ ತನ್ನ ಕೆಲವು ನೌಕರರನ್ನು ಮೆಟಾ ವಜಾಗೊಳಿಸಿದೆ.
ಹೌದು, ಮೆಟಾ ಕಂಪನಿಯು ಮೇಲೆ ತಿಳಿಸಲಾದ ಯೂನಿಟ್‌ಗಳಲ್ಲಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ ಎಂದು ವರ್ಜ್ (Verge) ಬುಧವಾರ ವರದಿ ಮಾಡಿದೆ. ಈಗಾಗಲೇ ಈ ಕುರಿತು ರಾಯಿಟರ್ಸ್‌ಗೆ ಪ್ರತಿಕ್ರಿಯಿಸಿದ್ದ ಮೆಟಾ ಕಂಪನಿ ವಕ್ತಾರರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಉದ್ಯೋಗ ಕಡಿತಕ್ಕೆ ಕಾರಣಗಳೇನು?
ಮೆಟಾ ವಕ್ತಾರರ ಪ್ರಕಾರ, ಅನಿವಾರ್ಯವಾಗಿ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಕೆಲವು ಟೀಂಗಳು ಹಾಗೂ ಸುದೀರ್ಘ ಅವಧಿಯ ಕಾರ್ಯ ಯೋಜನೆಗು, ಗುರಿಗಳು, ಉದ್ಯೋಗ ಸ್ಥಳದ ವಿಚಾರವಾಗಿ ಕಂಪನಿ ಹೊಂದಾಣಿಕೆ ಮಾಡಿಕೊಳ್ಳಲಿದೆ. ಈ ಕಾರಣದಿಂದ ಕೆಲವು ನೌಕರರ ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ಮೂಲಗಳ ಪ್ರಕಾರ, ಮೆಟಾ ಕಂಪನಿಯು ಉದ್ಯೋಗಿಗಳ ಕೆಲ ತಂಡಗಳನ್ನು ಬೇರೆ ಬೇರೆ ಶಾಖಾ ಸ್ಥಳಗಳಿಗೆ ಸ್ಥಳಾಂತರಿಸಲು ಮುಂದಾಗಿದೆ. ಅದರಲ್ಲಿ ಕೆಲವು ಉದ್ಯೋಗಿಗಳಿಗೆ ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸುತ್ತಿದೆ. ಒಟ್ಟಾರೆ ಉದ್ಯೋಗದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇದು ಸಹ ನೌಕರರ ವಜಾಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಮೆಟಾದಲ್ಲಿ ಮಹತ್ವದ ಬದಲಾವಣೆ
ಕೇವಲ ಉದ್ಯೋಗಿಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಇದಲ್ಲ. ಇದರೊಂದಿಗೆ ಕೌಶಲ್ಯಯುವ, ಪ್ರಭಾವಿ ಉದ್ಯೋಗಿಗಳಿಗೆ ಇತರ ಅವಕಾಶಗಳನ್ನು ಕಂಪನಿಯು ನೀಡುತ್ತಿದೆ. ಪರೋಕ್ಷವಾಗಿ ಬಡ್ತಿ ವಿಚಾರವನ್ನು ತಿಳಿಸಿದೆ ಮೆಟಾ ಕಂಪನಿಯು ಈ ಮೂಲಕ ತನ್ನ ಕೆಲವು ಯೂನಿಟ್‌ಗಳಲ್ಲಿ ಮಹತ್ವದ ಬದಲಾವಣೆ ತರಲು ಶ್ರಮಿಸುತ್ತಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದರು.
ಆದರೆ ಮೆಟಾ ಕಂಪನಿಯು ಎಷ್ಟು ಮಂದಿಯನ್ನು ಕೆಲಸದಿಂದ ಕಿತ್ತು ಹಾಕುತ್ತಿದೆ ಎಂಬುದರ ಅಂಕಿ ಸಂಖ್ಯೆ ನಿಖರ ಲಭ್ಯವಾಗಿಲ್ಲ. ಆದರೆ ಈ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಇಲ್ಲ ಎಂಬುದರೆ ಸತ್ಯದ ಖುಷಿ ವಿಚಾರವಾಗಿದೆ. ಸದ್ಯ ಅಂಕಿ ಸಂಖ್ಯೆಗಳ ಬಗ್ಗೆ ಮಾಹಿತಿ ಸಿಗಬೇಕಿದೆ.
ವಜಾಗೊಳಿಸಲು ಉದ್ದೇಶಿಸಿರುವ ಈ ಉದ್ಯೋಗಿಗಳು, ಮೊಡವೆ ಪ್ಯಾಡ್‌ಗಳು, ವೈನ್ ಗ್ಲಾಸ್‌ಗಳು ಮತ್ತು ಲಾಂಡ್ರಿ ಡಿಟರ್ಜೆಂಟ್ ನಂತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಗೆ ಅವರು ನಿತ್ಯ $25 ವ್ಯಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಮೆಟಾ ಕಂಪನಿಯು ಲಾಸ್ ಏಂಜಲೀಸ್‌ನಲ್ಲಿ ಇನ್ನೂ ಎರಡು ಡಜನ್ ಸಿಬ್ಬಂದಿ ವಜಾ ಮಾಡಿದೆ ಎಂದು ವರದಿ ಆಗಿದೆ.
ಈ ಆರೋಪ ಕುರಿತು ಮೆಟಾ ಕಂಪನಿಯು ಯಾರೊಬ್ಬರು ಪ್ರತಿಕ್ರಿಯಿಸಿಲ್ಲ. ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು 2023 ಅನ್ನು "ದಕ್ಷತೆಯ ವರ್ಷ" ಎಂದು ಕರೆದಿದ್ದಾರೆ. ಈ ಮೂಲಕ ಕಂಪನಿ ವೆಚ್ಚ ಕಡಿಮೆ ಮಾಡುವ ಜೊತೆಗೆ ಅದರ ಹಿಂದಿನ ವರ್ಷ 2022 ರ ನವೆಂಬರ್ ನಲ್ಲಿ ಮೆಟಾ 21,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಪ್ರಸಕ್ತ ವರ್ಷ ಷೇರು ಮಾರುಕಟ್ಟೆಯಲ್ಲಿ ಮೆಟಾ ಕಂಪನಿ ಷೇರುಗಳು ಶೇಕಡಾ 60ಕ್ಕೂ ಪಟ್ಟು ಜಿಗಿದಿವೆ. ಈ ಮೂಲಕ ಎರಡನೇ ತ್ರೈಮಾಸಿಕ ಆದಾಯವು ನಿರೀಕ್ಷೆಗೂ ಮೀರಿದೆ ಎನ್ನಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications