30 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಮೆಕಾನ್ ಲಿಮಿಟೆಡ್
ಬೆಂಗಳೂರು, ಡಿಸೆಂಬರ್ 07 : ಮೆಕಾನ್ ಲಿಮಿಟೆಡ್ 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜನವರಿ 2, 2019 ಕೊನೆಯ ದಿನವಾಗಿದೆ.
ಮೆಕಾನ್ ಲಿಮಿಟೆಡ್ 30 ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿಸಿದ ಬ್ಯಾಂಚ್‌ನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ಪಿಜಿ ಡಿಗ್ರಿ/ಪಿಜಿ ಡಿಪ್ಲೊಮಾ/ಎಂಬಿಎ/ಎಂಎಸ್‌ಡಬ್ಯ್ಲೂ/ಎಂಎ ವಿತ್ specialization ಎಚ್‌ಆರ್‌ಎಂ/ಪರ್ನನಲ್ ಮ್ಯಾನೇಜ್‌ಮೆಂಟ್/ಐಆರ್/ಲೇಬರ್ ಮ್ಯಾನೇಜ್‌ಮೆಂಟ್/ Organizational Development/ಎಚ್‌ಆರ್‌ಡಿ/ಲೇಬರ್ ವೆಲ್‌ಫೇರ್ ಅಥವ ತತ್ಸಮಾನ (2 ವರ್ಷದ ಅವಧಿ)

ಎಂಬಿಎ/ಪಿಜಿಡಿಎಂ/ಪಿಜಿಡಿಬಿಎಂ ಅಥವ ತತ್ಸಮಾನ ಮಾರ್ಕೆಟಿಂಗ್ (2 ವರ್ಷ), ಪಿಜಿ ಡಿಗ್ರಿ/ಪಿಜಿ ಡಿಪ್ಲೊಮಾ ಇನ್ ಜರ್ನಲಿಸಮ್&ಕಮ್ಯುನಿಕೇಷನ್/ಜರ್ನಲಿಸಂ& ಮಾಸ್ ಕಮ್ಯುನಿಕೇಷನ್/ಕಮ್ಯುನಿಕೇಷನ್/ಜರ್ನಲಿಸಂ/ಮಾಸ್ ಕಮ್ಯುನಿಕೇಷನ್/ಬ್ರಾಡ್ ಕಾಸ್ಟ್ ಜರ್ನಲಿಸಮ್/ಮೀಡಿಯಾ ಕಮ್ಯುನಿಕೇಷನ್/ಪಬ್ಲಿಕ್ ರಿಲೇಷನ್ (2 ವರ್ಷಗಳ ಅವಧಿ)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 28 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ವೇತನ ಶ್ರೇಣಿ : 20600 - 46500 ಪ್ರತಿ ತಿಂಗಳು.
ಅರ್ಜಿ ಶುಲ್ಕ : ಎಸ್‌ಸಿ/ಎಸ್‌ಟಿ/ಅಂಗವಿಕಲ/ನಿವೃತ್ತ ಯೋಧರಿಗೆ ಯಾವುದೇ ಶುಲ್ಕವಿಲ್ಲ. ಇತರ ಅಭ್ಯರ್ಥಿಗಳಿಗೆ 1000 ರೂ.ಗಳು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications