8339 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆವಿಎಸ್
ಬೆಂಗಳೂರು, ಆಗಸ್ಟ್ 29 : ಕೇಂದ್ರಿಯ ವಿದ್ಯಾಲಯ ಸಂಘಟನೆ (ಕೆವಿಎಸ್) 8339 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 13, 2018 ಕೊನೆಯ ದಿನವಾಗಿದೆ.
ಕೇಂದ್ರಿಯ ವಿದ್ಯಾಲಯ ಸಂಘಟನೆ ಪದವೀಧರ ಶಿಕ್ಷಕ, ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ದೇಶದ ವಿವಿಧ ರಾಜ್ಯದಲ್ಲಿನ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಆಯ್ಕೆಯಾದವರು ಬೇರೆ ರಾಜ್ಯದಲ್ಲಿಯೂ ಕೆಲಸ ಮಾಡಬೇಕಿದೆ.
ಪದವೀಧರ ಶಿಕ್ಷಕ 1900 ಹುದ್ದೆಗಳಿದ್ದು, ವೇತನ ಶ್ರೇಣಿ 142400 ಪ್ರತಿ ತಿಂಗಳು. ಪ್ರಾಥಮಿಕ ಶಾಲಾ ಶಿಕ್ಷಕ 5300 ಹುದ್ದೆಗಳಿದ್ದು, 35400 ರಿಂದ 112400 ಪ್ರತಿ ತಿಂಗಳು.

ವಿದ್ಯಾರ್ಹತೆ : ಪದವೀಧರ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವವರು ನಿಗದಿತ ವಿಷಯದಲ್ಲಿ ಶೇ 50ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು ಮತ್ತು ಸಿಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಪ್ರಾಥಮಿಕ ಶಿಕ್ಷಕ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸುವವರು 10+2 ಇಂಟರ್ ಮೀಡಿಯಟ್‌ನಲ್ಲಿ ಶೇ 50ರಷ್ಟು ಅಂಕಗಳನ್ನು ಗಳಿಸಿರಬೇಕು. ಸಿಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಎಸ್‌ಸಿ/ಎಸ್‌ಟಿ ಮತ್ತು ಅಂಕವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇತರ ವರ್ಗದ ಅಭ್ಯರ್ಥಿಗಳಿಗೆ 750 ರೂ.ಗಳು. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ











Click it and Unblock the Notifications