ಕೆಎಸ್ಆರ್‌ಟಿಸಿ ನೇಮಕಾತಿ, ಜ.15ರೊಳಗೆ ಅರ್ಜಿ ಹಾಕಿ

ಬೆಂಗಳೂರು, ಜನವರಿ 04 : ಕೆಎಸ್ಆರ್‌ಟಿಸಿ ITS Consultant ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಜನವರಿ 15, 2019 ಕೊನೆಯ ದಿನವಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ITS Consultant ಹುದ್ದೆ ಭರ್ತಿ ಮಾಡುತ್ತಿದ್ದು ಆಯ್ಕೆಯಾದ ಅಭ್ಯರ್ಥಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಬೇಕು. ಮೈಸೂರು ಮತ್ತು ಇತರ ಸ್ಥಳಗಳಿಗೆ ಆಗಾಗ ಭೇಟಿ ನೀಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್ (ಎಲೆಕ್ಟ್ರಾನಿಕ್ಸ್&ಕಮ್ಯನಿಕೇಷನ್) ವಿತ್ ಪಿಎಂ ಸರ್ಟಿಫೈಡ್ ವ್ಯಾಸಂಗ ಮಾಡಿರಬೇಕು. ಎರಡು ವರ್ಷಗಳ ಗುತ್ತಿಗೆ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅದನ್ನು ವಿಸ್ತರಣೆಯನ್ನು ಸಹ ಮಾಡಬಹುದಾಗಿದೆ.

KSRTC recruitment : Apply for ITS Consultant post

ಜನವರಿ 3 ರಿಂದ ಜನವರಿ 15ರೊಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ.

ಆನ್‌ಲೈನ್ ಮೂಲಕ ಸಿಗವ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಭ್ಯರ್ಥಿಗಳು ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವಾಗ ಅಂಚೆ ಲಕೋಟೆ ಮೇಲೆ application for ITS Consultant ಎಂದು ನಮೂದಿಸಿರಬೇಕು.

ಅರ್ಜಿಗಳನ್ನು ಸಲ್ಲಿಸಲು ವಿಳಾಸ
ಮ್ಯಾನೇಜಿಂಗ್ ಡೈರೆಕ್ಟರ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಟ್ರಾನ್ಸ್‌ಪೋರ್ಟ್ ಹೌಸ್
ಕೆ.ಎಚ್.ರಸ್ತೆ
ಶಾಂತಿನಗರ

ಬೆಂಗಳೂರು 560027

ನೇಮಕಾತಿ ಆದೇಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+