KSRTC jobs 2024: ಕೌನ್ಸೆಲಿಂಗ್ ದಿನಾಂಕ ಘೋಷಿಸಿದ ನಿಗಮ, ಅಭ್ಯರ್ಥಿಗಳು ಗಮನಿಸಿ

ಬೆಂಗಳೂರು, ಜನವರಿ 16: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಹುದ್ದೆಗಳ ಆಯ್ಕೆಯ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ ಅಭ್ಯರ್ಥಿಗಳಿಗೆ ದಾಖಲಾತಿಗಳ ಪರಿಶೀಲನೆಯ ಕೌನ್ಸೆಲಿಂಗ್ ಗೆ ದಿನಾಂಕ ನಿಗದಿ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತಾಂತ್ರಿಕ ಸಹಾಯಕ ಹುದ್ದೆಯ ಅಂತಿಮ ಆಯ್ಕೆ ಪಟ್ಟಿಯನ್ನು ನಿಗಮದ ಕೇಂದ್ರ ಕಛೇರಿಯ ಸೂಚನಾ ಫಲಕದಲ್ಲಿ ಮತ್ತು ನಿಗಮದ ಅಧಿಕೃತ ವೆಬ್-ಸೈಟ್ ksrtcjobs.com ನಲ್ಲಿ ಪ್ರಕಟಿಸಲಾಗಿದೆ.

KSRTC Recruitment 2024: KSRTC Technical Assistant post Candidates Counseling on Jan 17th

ಸದರಿ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳಿಗೆ ನಾಳೆ ಜನವರಿ 17ರಂದು ನಿಗಮದ ಕೇಂದ್ರ ಕಛೇರಿ, ಶಾಂತಿನಗರ, ಬೆಂಗಳೂರು ಇಲ್ಲಿ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯೋಜನಾ ಆದೇಶ ನೀಡಲಾಗುವುದು ಎಂದು KSRTC ತಿಳಿಸಿದೆ.

ಹಾಜರಾಗುವ ಅಭ್ಯರ್ಥಿಗಳು ಸದರಿ ದಿನ ಬೆಳಗ್ಗೆ 17ರಂದು ಬೆಳಗ್ಗೆ 8.00 ಗಂಟೆಗೆ ತಪ್ಪದೆ ಕರೆಪತ್ರ ಹಾಗೂ ದಾಖಲಾತಿ ಪರಿಶೀಲನಾ ಪಟ್ಟಿ ಸಹಿತ ಹಾಜರಾಗಲು ಸೂಚಿಸಿದೆ. ನಿಗದಿತ ಸಮಯಕ್ಕೆ ಕೌನ್ಸಿಲಿಂಗ್‌ಗೆ ಹಾಜರಾಗದ ಅಭ್ಯರ್ಥಿಗಳಿಗೆ ಹುದ್ದೆ ಖಾಲಿ ಉಳಿಯುವ ವಿಭಾಗ / ಘಟಕಗಳಿಗೆ ನಿಯೋಜಿಸುವ ಅಧಿಕಾರವನ್ನು ನಿಗಮವು ಹೊಂದಿರುತ್ತದೆ.

KSRTC Recruitment 2024: KSRTC Technical Assistant post Candidates Counseling on Jan 17th

ಆದುದರಿಂದ, ಅಭ್ಯರ್ಥಿಗಳು ನಿಗಧಿತ ಸಮಯಕ್ಕೆ ಹಾಜರಾಗಿ ರೋಸ್ಟರ್ ಕಂ ಮೆರಿಟ್ ಅನ್ವಯ ಲಭ್ಯವಿರುವ ಕಾರ್ಯಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ

ಅರ್ಹ ಅಭ್ಯರ್ಥಿಗಳಿಗೆ ಈ ನಿಗದಿತ ದಿನಾಂಕದೊಳಗೆ ನಿಗಮದ ಅಧಿಕಾರಿಗಳು ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಿದ್ದಾರೆ. ಗೈರಾದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಸಂದೇಶ ರವಾನಿಸಲಾಗಿದೆ. ಮೊಬೈಲ್ ಸಂದೇಶ ಪಡೆದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಕರ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವಂತೆ ಈ ಹಿಂದೆ ಸೂಚಿಸಲಾಗಿತ್ತು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಸಹಾಯವಾಣಿ ಸಂಖ್ಯೆಯಾದ 080 22221321-321, 7760990044, 7760990061, 7760981930 ಗೆ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ತಿಳಿಸಲಾಗಿದೆ.

ಅಭ್ಯರ್ಥಿಗಳು ಈ ಕೂಡಲೇ ಅಗತ್ಯ ದಾಖಲೆಗಳ ಸಮೇತರಾಗಿ ನಿಗದಿತ ವಿಳಾಸಕ್ಕೆ ಭೇಟಿ ನೀಡಿ ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ನಿಗಮ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+