KSRLPS Recruitment 2023: ಬಳ್ಳಾರಿಯಲ್ಲಿ ಸರ್ಕಾರಿ ಉದ್ಯೋಗಗಳು ಖಾಲಿ ಇವೆ, ನೇಮಕಾತಿ ವಿವರ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 27: ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿಯು (KSRLPS) ತನ್ನಲ್ಲಿ ಖಾಲ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತು ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ.
ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿಯು (KSRLPS) ಯಲ್ಲಿ ಒಟ್ಟು 10 ಬ್ಲಾಕ್ ಮ್ಯಾನೇಜರ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ನಾಳೆ ಸೆಪ್ಟಂಬರ್ 28ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಅಜಿ ಸಲ್ಲಿಕೆ ಮೊದಲು ಅಭ್ಯರ್ಥಿಗಳು ವಿದ್ಯಾರ್ಹತೆ, ವೇತನ, ಅಯ್ಕೆ ಪ್ರಕ್ರಿಯೆ ಸೇರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ
ಹುದ್ದೆ ಹೆಸರು: ಬ್ಲಾಕ್ ವ್ಯವಸ್ಥಾಪಕರು, ಕಚೇರಿ ಸಹಾಯಕರು
ಖಾಲಿ ಹುದ್ದೆ ಸಂಖ್ಯೆ: 10
ಪೋಸ್ಟಿಂಗ್: ಬಳ್ಳಾರಿ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: ನಾಳೆ ಸೆಪ್ಟೆಂಬರ್ 28
ನೇಮಕಾತಿ ಹುದ್ದೆಗಳ ಇತರ ಮಾಹಿತಿ
ಕ್ಲಸ್ಟರ್ ಸೂಪರ್ವೈಸರ್- 02
ಕಚೇರಿ ಸಹಾಯಕರು- 01
ಡಿಸ್ಟ್ರಿಕ್ಟ್ ಮ್ಯಾನೇಜರ್- 01
ಬ್ಲಾಕ್ ವ್ಯವಸ್ಥಾಪಕರು- 06
ಈ ಒಟ್ಟು ಹತ್ತು ಹುದ್ದೆಗಳನ್ನು ಅಲಂಕರಿಸುವವರು ಆಯಾ ಹುದ್ದೆಗಳ ಅನ್ವಯ ಎಂ.ಎಸ್ಸಿ, ಬಿ.ಎಸ್ಸಿ, ಎಂ.ಎಸ್ಸಿ, ಸ್ನಾತಕೋತ್ತರ ಪದವಿ, ಪದವಿ ಉತ್ತೀರ್ಣವಾಗಿರುವುದು ಕಡ್ಡಾಯಗೊಳಿಸಲಾಗಿದೆ.

ವಯೋಮಿತಿ ವಿವರ
ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ನಿಗದಿ ಮಾಡಲಾಗಿದೆ. ಆಯ್ಕೆ ಆಗುವವರಿಗೆ ಬಳ್ಳಾರಿಯಲ್ಲಿ ಪೋಸ್ಟಿಂಗ್ ನೀಡಲಾಗುವುದು. ವೇತನ ನಿಗದ ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ ಮಾಹಿತಿ ನೀಡಿದೆ.
ಆಯ್ಕೆ ಹೇಗೆ ನಡೆಯಲಿದೆ?
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಸಂಸ್ಥೆ ಮೊದಲು ಲಿಖಿತ ಪರೀಕ್ಷೆ ನಡೆಸಲಿದೆ. ಅಲ್ಲಿ ಆಯ್ಕೆ ಆಗುವವರಿಗೆ ನಂತರ ನೇರ ಸಂದರ್ಶನ ನಡೆಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications