KSRLPS Recruitment 2023: ಸರ್ಕಾರಿ ಉದ್ಯೋಗ ನೇಮಕಾತಿ, ಆಯ್ಕೆ, ಪೋಸ್ಟಿಂಗ್ ವಿವರ ಇಲ್ಲಿದೆ
ಬೆಂಗಳೂರು, ನವೆಂಬರ್ 21: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಇಲಾಖೆ (KSRLPS) ತನ್ನಲ್ಲಿ ಖಾಲಿ ಇರುವ ಕೆಲವು ಹುದ್ದೆಗಳ ನೇಮಕಾತಿ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಇಲಾಖೆ (KSRLPS) ವ್ಯಾಪ್ತಿಯಲ್ಲಿ ಡೇಟಾ ಎಂಟ್ರಿ ಆಪರೇಟರ್/MIS ಕೋಆರ್ಡಿನೇಟರ್, ಕ್ಲಸ್ಟರ್ ಸೂಪರ್ವೈಸರ್ ಸೇರಿದಂತೆ ಒಟ್ಟು ಎಂಟು ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಿ ಆಯ್ಕೆ ಆದವರಿಗೆ ಕೈತುಂಬ ವೇತನ ಜೊತೆಗೆ ಚಿಕ್ಕಬಳ್ಳಾಪುರ ಮತ್ತು ರಾಮನಗರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ
ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಇಲಾಖೆ (KSRLPS)
ಹುದ್ದೆ ಹೆಸರು: ಡೇಟಾ ಎಂಟ್ರಿ ಆಪರೇಟರ್/MIS ಕೋ ಆರ್ಡಿನೇಟರ್,
ಖಾಲಿ ಹುದ್ದೆಗಳು: ಎಂಟು
ಪೋಸ್ಟಿಂಗ್: ರಾಮನಗರ, ಚಿಕ್ಕಬಳ್ಳಾಪುರ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: ನವೆಂಬರ್ 22
ಹುದ್ದೆಗಳ ಇನ್ನಿತರ ಮಾಹಿತಿ ನೋಡುವುದಾದರೆ, ಈ ಇಲಾಖೆಯಲ್ಲಿ ಕ್ಲಸ್ಟರ್ ಸೂಪರ್ವೈಸರ್ ಮತ್ತು ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗಳು ತಲಾ 2 ಖಾಲಿ ಇವೆ, ಇತ್ತು ಡೇಟಾ ಎಂಟ್ರಿ ಆಪರೇಟರ್/MIS ಕೋಆರ್ಡಿನೇಟರ್ ಹುದ್ದೆಗಳು ಒಟ್ಟು 4 ಸೇರಿ ಎಂಟು ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ ವಿವರ
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಇಲಾಖೆ ಅಧಿಸೂಚನೆ ಪ್ರಕಾರ, ಕ್ಲಸ್ಟರ್ ಸೂಪರ್ವೈಸರ್ ಹುದ್ದೆಗೆ ಪದವಿ, ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗೆ ಸ್ನಾತಕೋತ್ತರ ಪದವಿ, ಡೇಟಾ ಎಂಟ್ರಿ ಆಪರೇಟರ್/MIS ಕೋಆರ್ಡಿನೇಟರ್ ಹುದ್ದೆಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದವರು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.

ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲಿರುವ ಆಸಕ್ತು ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗಲಿದೆ. ವೇತನ ನಿಗದಿ ಮಾಡಿಲ್ಲ. ಯಾವ ವರ್ಗದ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ನಿಗದಿ ಮಾಡಿಲ್ಲ.
ಆಯ್ಕೆ ಹೇಗೆ ನಡೆಯಲಿದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲಾಖೆಯು ಮೊಲದು ಲಿಖಿತ ಪರೀಕ್ಷೆ ನಡೆಸಲಿದೆ. ನಂತರ ನೇರ ಸಂದರ್ಶನ ಇರಲಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://jobsksrlps.karnataka.gov.in/ ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ನವೆಂಬರ್ 22 ಕೊನೆಯ ದಿನವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications