ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಆನ್ ಲೈನಲ್ಲೇ ಅರ್ಜಿ ಹಾಕಿ
ಬೆಂಗಳೂರು, ನ.19: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸುವ ಕೊನೆ ದಿನಾಂಕ ಡಿಸೆಂಬರ್ 21ರ ತನಕ ವಿಸ್ತರಿಸಲಾಗಿದೆ,
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು (ಸಿವಿಲ್) ಪುರುಷ 155, ಮಹಿಳಾ 40, ಸೇವೆಯಲ್ಲಿರುವವರು 20 ಒಟ್ಟು 215. ಹೈದರಾಬಾದ್-ಕರ್ನಾಟಕ ಮೀಸಲಿಗೊಳಪಡುವ ಬೆಂಗಳೂರು ನಗರದಲ್ಲಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಪುರುಷ 9, ಮಹಿಳೆ 3, ಸೇವೆಯಲ್ಲಿರುವವರು 1 ಒಟ್ಟು 13. ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿನ ಹೈ-ಕ ಮೀಸಲಾತಿಗೊಳಪಡುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಪುರುಷ 4, ಮಹಿಳಾ 1 ಒಟ್ಟು 5.
ವಿದ್ಯಾರ್ಹತೆ: ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ 250 ರು. ಇತರೆ ವರ್ಗಕ್ಕೆ 100ರು ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಥವಾ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದಿನ ಯಾವುದೇ ಶಾಖೆಯಲ್ಲಿ ಚಲನ್ ಮೂಲಕ ಪಾವತಿಸಬಹುದು.

ವಯೋಮಿತಿ : ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪುರುಷ ಮತ್ತು ಮಹಿಳಾ) ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷ. ಪ.ಜಾ/ಪ.ಪಂ/ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 28 ವರ್ಷಗಳು. ಇತರೆ ವರ್ಗದವರಿಗೆ 26 ವರ್ಷಗಳು. [ಅರ್ಜಿ ಸಲ್ಲಿಸಲು ವಿಳಾಸ]
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಪೊಲೀಸ್ ವೆಬ್ ಸೈಟ್ ಗೆ ಭೇಟಿ ಕೊಡಿ
* Current Recruitment ಕ್ಲಿಕ್ ಮಾಡಿ
* ಬೇಕಾದ ಹುದ್ದೆ ಆಯ್ಕೆ ಮಾಡಿಕೊಂಡು New Application ಕ್ಲಿಕ್ ಮಾಡಿ
* ನಿಯಮಗಳನ್ನು ಓದಿಕೊಂಡು ಅರ್ಜಿಯನ್ನು ತುಂಬಿ ಸಲ್ಲಿಸಿ.
* ತುಂಬಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಗೆ ಕೊನೆ ದಿನಾಂಕ : 21/12/2015.
ಹೆಚ್ಚಿನ ಮಾಹಿತಿಗೆ ಕರೆ ಮಾಡಿ: (080) 22943650
(ಒನ್ ಇಂಡಿಯಾ ಸುದ್ದಿ)












Click it and Unblock the Notifications