ಬೆಂಗಳೂರು: ಕ್ಲಸ್ಟರ್ ಪ್ರೋಗ್ರಾಂ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಸೆ. 20: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿರುವ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ತನ್ನ ಹೊಸ ನೇಮಕಾತಿ ಕುರಿತ ಪ್ರಕಟಣೆ ಹೊರಡಿಸಿದೆ. ಕ್ಲಸ್ಟರ್ ಪ್ರೋಗ್ರಾಂ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಅಕ್ಟೋಬರ್ 10,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ
ಹುದ್ದೆ ಹೆಸರು: Cluster Programme Manager
ಒಟ್ಟು ಹುದ್ದೆ: 11
ಉದ್ಯೋಗ ಸ್ಥಳ: ಕರ್ನಾಟಕದೆಲ್ಲೆಡೆ
ಸಂಬಳ ನಿರೀಕ್ಷೆ: ಪ್ರತಿ ತಿಂಗಳಿಗೆ 54,300 ರು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 10,2022
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ, ಸಾರ್ವಜನಿಕ ಆರೋಗ್ಯ/ ಆರೋಗ್ಯ ಸೇವೆ ಮ್ಯಾನೇಜ್ಮೆಂಟ್/ ಆರೋಗ್ಯ ಸೇವೆ ಆಡಳಿತ/ ಸಮಾಜ ವಿಜ್ಞಾನ/ ಸೈಕಾಲಜಿ/ ಎಪಿಡೆಮಿಯೋಲಾಜಿ/ಡೆಮೊಗ್ರಾಫಿ/ ಸ್ಟಾಟಿಸ್ಟಿಕ್ಸ್ ಮುಂತಾದ ವಿಷಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ.

ಮೇಲ್ಕಂಡ ಕ್ಷೇತ್ರಗಳಲ್ಲಿ ಮೂರು ವರ್ಷಗಳ ಅನುಭವ, ಎಚ್ಐವಿ/ ಏಡ್ಸ್ ಸಂಬಂಧಿಸಿದ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ 2 ವರ್ಷಗಳ ಅನುಭವ. ಕಂಪ್ಯೂಟರ್ ಬಗ್ಗೆ ಅರಿವು, ಉತ್ತಮ ಸಂವಹನ ಅಗತ್ಯ.
ಎಸ್ಎಸ್ ಎಲ್ ಸಿಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು.
ವಯೋಮಿತಿ: ಗರಿಷ್ಠ 50 ವರ್ಷ
ಅರ್ಜಿ ಸಲ್ಲಿಸಲು ವಿಳಾಸ
ಪ್ರಾಜೆಕ್ಟ್ ನಿರ್ದೇಶಕರು
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ
ಆರೋಗ್ಯ ಸೌಧ, 4ನೇ ಮಹಡಿ, ಪೂರ್ವ ವಿಭಾಗ, ಲೆಪ್ರಸಿ ಆಸ್ಪತ್ರೆ ಆವರಣ
ಮೊದಲ ಅಡ್ಡರಸ್ತೆ, ಮಾಗಡಿ ರಸ್ತೆ, ಬೆಂಗಳೂರು 560 023
ನೇಮಕಾತಿ: ವೈಯಕ್ತಿಕ ಸಂದರ್ಶನ, ಸಂದರ್ಶನದ ವೇಳೆ ಪ್ರಮಾಣ ಪತ್ರ, ವಿದ್ಯಾರ್ಹತೆ ದಾಖಲೆಗಳನ್ನು ನೀಡಬೇಕಾಗುತ್ತದೆ. ದಾಖಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು KSAPS ವೆಬ್ ತಾಣದಲ್ಲಿ ಪಡೆದುಕೊಳ್ಳಬಹುದು.












Click it and Unblock the Notifications