KPTCL ನೇಮಕಾತಿ: ಅರ್ಹ ಅಭ್ಯರ್ಥಿಗಳ ಪಟ್ಟಿ, ವೆಬ್‌ಸೈಟ್ ಕುರಿತ ಮಾಹಿತಿ- ಈ ದಿನಾಂಕದಂದು Answer Key
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಪರೀಕ್ಷೆಗಳ ಅಂತಿಮ ಸರಿ ಉತ್ತರಗಳನ್ನು ಇದೇ ತಿಂಗಳು ಪ್ರಕಟಿಸಲಾಗುತ್ತದೆ ಎಂದು ಇಂಧನ ಸಚಿವರಾದ ವಿ ಸುನೀಲ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ. ಇನ್ನೂ ಏನೇನು ಮಾಹಿತಿ ನೀಡಿದ್ದಾರೆ ಓದಿ.
ಬೆಂಗಳೂರು, ಫೆಬ್ರವರಿ 28: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಪರೀಕ್ಷೆಗಳ ಅಂತಿಮ ಸರಿ ಉತ್ತರಗಳನ್ನು ಇದೇ ತಿಂಗಳು ಪ್ರಕಟಿಸಲಾಗುತ್ತದೆ ಎಂದು ಇಂಧನ ಸಚಿವರಾದ ವಿ ಸುನೀಲ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಅರ್ಹ ಅಭ್ಯರ್ಥಿಗಳ ಪಟ್ಟಿ, ವೆಬ್‌ಸೈಟ್ ಕುರಿತ ಮಾಹಿತಿಗಳನ್ನು ನೀಡಿದ್ದಾರೆ.
'ಕ.ವಿ.ಪ್ರ.ನಿ.ನಿಯಲ್ಲಿ ಒಟ್ಟು 1492 ಹುದ್ದೆಗಳ ನೇಮಕಾತಿಗಾಗಿ ದಿನಾಂಕ 01-02-2022ರಂದು ಅಧಿಸೂಚನೆ ಹೊರಡಿಸಿ, ಎಲ್ಲಾ ಹುದ್ದೆಗಳ ಪರೀಕ್ಷೆಗಳ ಪ್ರಕ್ರಿಯೆಯ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆ.ಇ.ಎ) ವಹಿಸಲಾಗಿತ್ತು' ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

'ಅದರಂತೆ ಕೆ.ಇ.ಎ ಯು ರಾಜ್ಯಾದ್ಯಂತ ಅರ್ಜಿ ಸಲ್ಲಿಸಿದ್ದ ಒಟ್ಟು 3.97 ಲಕ್ಷ ಅಭ್ಯರ್ಥಿಗಳಿಗೆ 2022ರ ಜುಲೈ 23&24 ಹಾಗೂ ಆಗಸ್ಟ್ 07 ರಂದು ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸಿದೆ. ಆ ಬಳಿಕ ಸದರಿ ಪರೀಕ್ಷೆಗಳ ಅಂತಿಮ ಸರಿ ಉತ್ತರಗಳನ್ನು ಇದೇ ತಿಂಗಳ 04 & 07 ರಂದು ಕೆ.ಇ.ಎ ಯ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ' ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಎನ್.ಐ.ಸಿ ಸಂಸ್ಥೆಯು ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗಾಗಿ ಸೂಚಿತ ಹುದ್ದೆಗಳ 1:2 ರ ಅನುಪಾತದಲ್ಲಿ , ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆಯ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಇಂದನ ಸಚಿವರು ಹೇಳಿದ್ದಾರೆ.
'ಅರ್ಹ ಅಭ್ಯರ್ಥಿಗಳ ಹೆಸರುಗಳನ್ನೊಳಗೊಂಡ 1:2 ಅನುಪಾತದ ಪಟ್ಟಿ, ಕಟ್ ಆಫ್ ಅಂಕ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆಗಾಗಿ ದಿನಾಂಕ 01 ಮಾರ್ಚ್, 2023 ರಂದು ಅಧಿಸೂಚನೆ ಹೊರಡಿಸಲಾಗುವುದು. ದಾಖಲಾತಿ ಪರಿಶೀಲನೆಯ ವಿವರಗಳು ಹಾಗೂ ನೇಮಕಾತಿ ಪ್ರಕ್ರಿಯೆ ಮುಂದಿನ ಹಂತಗಳನ್ನು ಕ.ವಿ.ಪ್ರ.ನಿ.ನಿ ವೆಬ್ಸೈಟ್ ನಲ್ಲಿ ನಿಗದಿತವಾಗಿ ಪ್ರಕಟಿಸಲಾಗುವುದು' ಎಂದೂ ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್, ಕರ್ನಾಟಕ ರಾಜ್ಯದ ಏಕೈಕ ವಿದ್ಯುತ್ ಪ್ರಸರಣ ಮತ್ತು ವಿತರಣಾ ಸಂಸ್ಥೆಯಾಗಿದೆ. ಇದನ್ನು ಕೆಪಿಟಿಸಿಎಲ್ ಎಂದು ಕರೆಯಲಾಗುತ್ತದೆ. ಇದರ ಮೊದಲು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿತ್ತು.
2002 ರವರೆಗೆ, ಕರ್ನಾಟಕ ವಿದ್ಯುತ್ ಮಂಡಳಿ (ಕೆಇಬಿ) ರಾಜ್ಯದಾದ್ಯಂತ ವಿದ್ಯುತ್ ಪ್ರಸರಣ ಮತ್ತು ವಿತರಣೆಯನ್ನು ನಿರ್ವಹಿಸುತ್ತಿತ್ತು. ಪ್ರಸರಣ ವ್ಯವಹಾರವನ್ನು ನಿರ್ವಹಿಸಲು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಅನ್ನು ಸ್ಥಾಪಿಸುವುದರೊಂದಿಗೆ ನಂತರ ಅದನ್ನು ಬೇರ್ಪಡಿಸಲಾಯಿತು.
ಈ ವಿದ್ಯುಚ್ಛಕ್ತಿ ಪ್ರಸರಣ ಮತ್ತು ವಿತರಣಾ ಘಟಕವನ್ನು ಕರ್ನಾಟಕ ರಾಜ್ಯದ ಜನರಿಗೆ ಸಮರ್ಥ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಒದಗಿಸಲು ಕಾರ್ಪೊರೇಟ್ ಮಾಡಲಾಗಿದೆ. ಕೆಪಿಟಿಸಿಎಲ್ ಕಾರ್ಯವ್ಯಾಪ್ತಿಯು ಇಂಧನ ಕ್ಷೇತ್ರದಲ್ಲಿ ದೊಡ್ಡ ಯೋಜನೆಗಳ ನಿರ್ವಹಣೆಯನ್ನು ಒಳಗೊಂಡಿದೆ.
ವಿದ್ಯುತ್ ಉತ್ಪಾದಿಸುವ ಕಂಪನಿಗಳಾದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಮತ್ತು GMR, ಜಿಂದಾಲ್, ಲ್ಯಾಂಕೋ (UPCL) ಮುಂತಾದ ಸ್ವತಂತ್ರ ವಿದ್ಯುತ್ ಉತ್ಪಾದಕರಿಂದ KPTCL ವಿದ್ಯುತ್ ಖರೀದಿಸುತ್ತದೆ. ಅವುಗಳನ್ನು ತಮ್ಮ ESCOMS ಗೆ ಮಾರಾಟ ಮಾಡುತ್ತದೆ.












Click it and Unblock the Notifications