Good News: ಕೆಪಿಟಿಸಿಎಲ್ ಪರೀಕ್ಷೆ ಇ-ಸಹಿ ಮತ್ತು ಶುಲ್ಕ ಪಾವತಿಗೆ ಗಡುವು ವಿಸ್ತರಣೆ

ಬೆಂಗಳೂರು ನವೆಂಬರ್ 22: ಕೆಪಿಟಿಸಿಎಲ್ ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದು ಹೊರಬಂದಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಪರೀಕ್ಷೆಯ ಶುಲ್ಕ ಪಾವತಿಯ ಗಡುವನ್ನು ಮುಂದೂಡಲಾಗಿದೆ.

ಹೌದು.. ಕೆಪಿಟಿಸಿಎಲ್ ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಪರೀಕ್ಷೆಗಳಿಗೆ ಇ-ಸಹಿ ಮತ್ತು ಶುಲ್ಕ ಪಾವತಿಯ ಕೊನೆ ದಿನಾಂಕವನ್ನು ವಿಸ್ತರಿಸಿದೆ. ಈ ವಿಚಾರ ಅಭ್ಯರ್ಥಿಗಳಿಗೆ ಸಂತೋಷವನ್ನು ತಂದಿದೆ. ಅಂದಹಾಗೆ ಆಕಾಂಕ್ಷಿ ಅಭ್ಯರ್ಥಿಗಳು ಇ-ಸಹಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದರು. ಇದರಿಂದಾಗಿ ಗಡುವನ್ನು ವಿಸ್ತರಿಸಲಾಗಿದೆ ಎಂದು ಕೆಪಿಟಿಸಿಎಲ್ ಹೇಳಿಕೊಂಡಿದೆ. ಇ-ಸಹಿ ಪ್ರಕ್ರಿಯೆಗೆ ಹೊಸ ಗಡುವು ಡಿಸೆಂಬರ್ 5ರವರೆಗೆ ಇದ್ದರೆ, ಶುಲ್ಕ ಪಾವತಿಯ ಗಡುವನ್ನು ಡಿಸೆಂಬರ್ 10ವರೆಗೂ ವಿಸ್ತರಿಸಲಾಗಿದೆ.

KPTCL exams New date for e-signing and fee payment

"ಅಭ್ಯರ್ಥಿಗಳ ವಿನಂತಿಗಳನ್ನು ಪರಿಗಣಿಸಿ, ಇ-ಸಹಿ ಪ್ರಕ್ರಿಯೆ, ಪೋಸ್ಟಲ್ ಚಲನ್ ಡೌನ್‌ಲೋಡ್ ಮತ್ತು ಶುಲ್ಕ ಪಾವತಿಯ ಗಡುವನ್ನು ವಿಸ್ತರಿಸಲಾಗಿದೆ. ಈ ವಿಸ್ತರಣೆಯು ಈಗಾಗಲೇ ಅರ್ಜಿ ಸಲ್ಲಿಕೆಯ ಪ್ರಾಥಮಿಕ ಹಂತಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ" ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹೇಳಿದ್ದಾರೆ.

ಕೆಪಿಟಿಸಿಎಲ್ ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಪರೀಕ್ಷೆ ದಿನಾಂಕವನ್ನು 14-10-2024 ರಂದು ಬಿಡುಗಡೆಗೊಳಿಸಿತ್ತು. ಈ ಅಧಿಸೂಚನೆಯ ಪ್ರಕಾರ ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ 21-10-2024 ಆಗಿದ್ದರೆ, ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 20-11-2024 ಆಗಿತ್ತು. ಆದರೀಗ ಶುಲ್ಕ ಪಾವತಿಯ ಗಡುವನ್ನು ಡಿಸೆಂಬರ್ 10ವರೆಗೂ ವಿಸ್ತರಿಸಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಕಿರಿಯ ಸ್ಟೇಷನ್‌ ಪರಿಚಾರಕ, ಕಿರಿಯ ಪವರ್‌ಮ್ಯಾನ್‌ ಸೇರಿದಂತೆ ಒಟ್ಟು 2975 ಹುದ್ದೆಗಳ ಭರ್ತಿಗಾಗಿ ನೇಮಕ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಈಗಾಗಲೇ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ.

ಕೆಪಿಟಿಸಿಎಲ್‌ ಹುದ್ದೆಗಳಿಗೆ ವಯಸ್ಸಿನ ಅರ್ಹತೆ

ಅಪ್ಲಿಕೇಶನ್ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು.

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸು ದಾಟಿರಬಾರದು.

ಇತರೆ ಹಿಂದುಳಿದ ವರ್ಗದವರಿಗೆ 38 ವರ್ಷ ದಾಟಿರಬಾರದು.

ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ದಾಟಿರಬಾರದು.

ಕೆಪಿಟಿಸಿಎಲ್‌ ಹುದ್ದೆಗಳಿಗೆ ಅಪ್ಲಿಕೇಶನ್‌ ಶುಲ್ಕ ವಿವರ

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.614.

ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.614

ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.378.

ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಕೆಪಿಟಿಸಿಎಲ್‌ ಹುದ್ದೆಗಳಿಗೆ ಸಂಭಾವನೆ ವಿವರ

ಕ್ರೋಡೀಕೃತ ಸಂಭಾವನೆ (ಮೊದಲ 3 ವರ್ಷಗಳು / ಪ್ರತಿ ಮಾಸಿಕ)

1ನೇ ವರ್ಷ : Rs.17,000.

2ನೇ ವರ್ಷ: Rs.19,000.

3ನೇ ವರ್ಷ: Rs.21,000.

3 ವರ್ಷದ ತರಬೇತಿಯನ್ನು ತೃಪ್ತಿಕರವಾಗಿ ಪೂರೈಸಿದ ನಂತರ ಅಭ್ಯರ್ಥಿಗಳನ್ನು ವೇತನ ಶ್ರೇಣಿ ರೂ.28,550-63000 ರಲ್ಲಿ ನಿಯೋಜಿಸಲಾಗುವುದು. ನಂತರ ಇಲ್ಲಿಯೂ ಎರಡು ವರ್ಷಗಳ ಕಾಲ ಪರೀಕ್ಷಾರ್ಥ ಅವಧಿಯಲ್ಲಿ ಇರಿಸಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+