ಕೆಪಿಎಸ್‌ಸಿಯ ಎಫ್‌ಡಿಎ, ಎಸ್‌ಡಿಎ ಪರೀಕ್ಷೆ ಪ್ರವೇಶ ಪತ್ರ ಪ್ರಕಟ
ಬೆಂಗಳೂರು, ಫೆಬ್ರವರಿ 02: ಕೆಪಿಎಸ್‌ಸಿಯ ಎಸ್‌ಡಿಎ, ಎಫ್‌ಡಿಎ ಉದ್ಯೋಗ ಪರೀಕ್ಷೆಗಳ ಪ್ರವೇಶ ಪತ್ರ ಬಿಡುಗಡೆ ಆಗಿದ್ದು, ಅಭ್ಯರ್ಥಿಗಳು ಕೆಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಕೆಪಿಎಸ್‌ಸಿಯು ಕಳೆದ ವರ್ಷ ಸೆಪ್ಟೆಂಬರ್ 9 ರಂದು ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿತ್ತು. ಈಗ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆಗಳು ಫೆಬ್ರವರಿ 4 ಮತ್ತು 11ರಂದು ರಾಜ್ಯಾದ್ಯಂತ ನಡೆಯಲಿದೆ.
ಎಫ್‌ಡಿಎ ಪರೀಕ್ಷೆ ಇದೇ ಭಾನುವಾರ ಫೆಬ್ರವರಿ 4 ರಂದು ನಡೆದರೆ ಎಸ್‌ಡಿಎ ಪರೀಕ್ಷೆ ಮುಂದಿನ ಭಾನುವಾರ ಫೆಬ್ರವರಿ 11ರಂದು ನಡೆಯಲಿದೆ.

ಫೆಬ್ರವರಿ 4ರಂದು ಬೆಂಗಳೂರು ಬಂದ್ ಮಾಡುವುದಾಗಿ ಕನ್ನಡ ಒಕ್ಕೂಟ ಘೋಷಣೆ ನೀಡಿದ್ದು, ಪರೀಕ್ಷೆಗಳು ಮುಂದಕ್ಕೆ ಹೋಗುತ್ತವೆಯೊ ಅಥವಾ ಬಂದ್ ರದ್ದಾಗುತ್ತದೆಯೊ ಕಾದು ನೋಡಬೇಕು.












Click it and Unblock the Notifications