KPSC: ಗಮನಿಸಿ ಕೆಪಿಎಸ್‌ಸಿ ನೇಮಕಾತಿಯಲ್ಲಿ 2 ಮಹತ್ವದ ಬದಲಾವಣೆ

ಬೆಂಗಳೂರು, ಮೇ 15: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಎರಡು ಬದಲಾವಣೆ ಮಾಡಿದೆ. ಈಗಾಗಲೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಈ ಬದಲಾವಣೆ ಆಗಿದ್ದು, ಅಭ್ಯರ್ಥಿಗಳು ಗಮನಿಸಬಹುದು.

ಈ ಕುರಿತು ಫ್ಯಾನೇಂದ್ರ ಕುಮಾರ್ ಗಂಗ್ವಾರ್, ಪರೀಕ್ಷಾ ನಿಯಂತ್ರಕರು ಹಾಗೂ ಕಾರ್ಯದರ್ಶಿ (ಪ್ರ), ಕರ್ನಾಟಕ ಲೋಕ ಸೇವಾ ಆಯೋಗ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ದಿನಾಂಕ15/03/2024ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

KPSC Recruitment Two Changes Candidates Must Know

ಬದಲಾವಣೆ ವಿವರ: ಆಯೋಗದಿಂದ ಕಾಲ ಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022ರನ್ವಯ ಉಳಿಕೆ ಮೂಲ ವೃಂದದ ವಿವಿಧ ಗ್ರೂಪ್ 'ಸಿ' ಹುದ್ದೆಗಳನ್ನು ಅಧಿಸೂಚನೆ ಸಂಖ್ಯೆ ಪಿಎಸ್‌ಸಿ 503 ಆರ್‌ಟಿಬಿ(2)/2023-24/3494, ದಿನಾಂಕ 15-03-2024 ರಂದು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ ಎಂದು ಹೇಳಿದೆ.

ಸದರಿ ಅಧಿಸೂಚನೆಯ ಪುಟ ಸಂಖ್ಯೆ 01ರಲ್ಲಿನ ಕ್ರ.ಸಂ.03 ಮತ್ತು 04 ರಲ್ಲಿ ವಿವರಿಸಿರುವ ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್) ಹುದ್ದೆಗಳ ಸಂಖ್ಯೆಯನ್ನು ಕ್ರಮವಾಗಿ 26 ಮತ್ತು 04 ಎಂಬುದರ ಬದಲಾಗಿ 24 ಮತ್ತು 96 ಎಂದು ಓದಿಕೊಳ್ಳತಕ್ಕದು ಎಂದು ತಿಳಿಸಿದೆ.

ಅದೇ ಅಧಿಸೂಚನೆಯ ಕ್ರಮ ಸಂಖ್ಯೆ 02 ಮತ್ತು 04 ರಲ್ಲಿ ವಿವರಿಸಿರುವ ಕಿರಿಯ ಇಂಜಿನಿಯರ್ (ಸಿವಿಲ್)-54 ಹುದ್ದೆಗಳು ಮತ್ತು ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್) 06 ಹುದ್ದೆಗಳನ್ನು ಜಲ ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೇನಾ ನಿರತ ಗ್ರೂಪ್ 'ಸಿ' ಸಿಬ್ಬಂದಿಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮೀಸಲಿರಿಸಲಾಗಿರುತ್ತದೆ. ಪ್ರಸ್ತುತ ಇಲಾಖೆಯ ಸ್ಪಷ್ಟೀಕರಣದನ್ವಯ ಸೇವಾ ನಿರತ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅಂತಹ ಹುದ್ದೆಗಳನ್ನು ನೇರ ನೇಮಕಾತಿ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.

ಮುಂದುವರೆದು, ಅರ್ಜಿ ವಿನ್ಯಾಸವು ಎಲ್ಲಾ ಹುದ್ದೆಗಳಿಗೂ ಸಾಮಾನ್ಯವಾಗಿದ್ದು, ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಆದ್ಯತೆಯನ್ನು ನೀಡಬೇಕಿರುತ್ತದೆ. ಆದರೆ ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ (ಸಿವಿಲ್) ಮತ್ತು ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್) ನೇರ ನೇಮಕಾತಿ ಹಾಗೂ ಸೇವಾ ನಿರತ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ಮೀಸಲಿರಿಸಿದ್ದು, ಒಂದೇ ಇಲಾಖೆಯಾಗಿರುವುದರಿಂದ ಸೇವಾ ನಿರತ ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸುವಾಗ ನಮೂದಿಸುವ ಆದ್ಯತೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ತಿದ್ದುಪಡಿ ಅಧಿಸೂಚನೆ: ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 504 ಆರ್‌ಟಿಬಿ(2)/2023-24/3495, ದಿನಾಂಕ 15-03-2024 ರಂದು ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022 ರನ್ವಯ ಹೈದರಾಬಾದ್ ಕರ್ನಾಟಕ ವೃಂದದ ವಿವಿಧ ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿ ಸಂಬಂಧ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಎಂದು ತಿಳಿಸಿದೆ.

ಸದರಿ ಅಧಿಸೂಚನೆಯ ಕ್ರಮ ಸಂಖ್ಯೆ (03) ರಲ್ಲಿನ ಪೌರಾಡಳಿತ ನಿರ್ದೇಶನಾಲಯದಲ್ಲಿನ (ನಗರ ಸಭೆ/ ಪುರ ಸಭೆ/ ಪಟ್ಟಣ ಪಂಚಾಯಿತಿ) ಕಿರಿಯ ಇಂಜಿನಿಯರ್ (ಸಿವಿಲ್) 8 (ಹೈ.ಕ) ಹುದ್ದೆಗಳಿಗೆ ವಿದ್ಯಾರ್ಹತೆಯನ್ನು Diploma In Civil Engineering ಎಂದು ನಿಗದಿಪಡಿಸಲಾಗಿತ್ತು.

ಪ್ರಸ್ತುತ ಇಲಾಖೆಯ ಸ್ಪಷ್ಟೀಕರಣದನ್ವಯ Must have passed Diploma in Civil Engineering or Diploma in Civil Engineering (Draughtsmanship) from a Govt recognised Institution ಎಂಬುದಾಗಿ ಓದಿಕೊಳ್ಳತಕ್ಕದ್ದು ಎಂದು ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+