ಕೆಪಿಎಸ್‌ಸಿ ನೇಮಕಾತಿ; 925 ಹುದ್ದೆಗಳ ಭರ್ತಿ
ಬೆಂಗಳೂರು, ಫೆಬ್ರವರಿ 13: ಕರ್ನಾಟಕ ಲೋಕಸೇವಾ ಆಯೋಗ ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 15 ದಿನಗಳ ತನಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ಕರ್ನಾಟಕ ಸರ್ಕಾರ ವಿಶೇಷ ನೇಮಕಾತಿ ನಿಯಮ ಮತ್ತು ಸಾಮಾನ್ಯ ನೇಮಕಾತಿ ನಿಯಮಗಳಡಿ ಗ್ರೂಪ್ 'ಬಿ' ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಗ್ರೂಪ್ 'ಸಿ' ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
600 ಸಹಾಯಕ ಇಂಜಿನಿಯರ್, 325 ಕಿರಿಯ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯಪತ್ರದ ಮೂಲಕ 10/2/2020ರಂದು ಅಧಿಸೂಚನೆ ಪ್ರಕಟಗೊಂಡಿದ್ದು, 15 ದಿನದಲ್ಲಿ ಆಕ್ಷೇಪಣೆ ಸಲ್ಲಿಸಬಹುದು.
ಆಕ್ಷೇಪಣೆಗಳನ್ನು ಸ್ವೀಕಾರ ಮಾಡಿದ ಬಳಿಕ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಕೆಪಿಎಸ್‌ಸಿ ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ವಿವರಗಳು ಚಿತ್ರದಲ್ಲಿವೆ.

ಆಕ್ಷೇಪಣೆ ಸಲ್ಲಿಸಲು ವಿಳಾಸ
ಇಂಜಿನಿಯರ್ ನೇಮಕಾತಿ ಕುರಿತು ಆಕ್ಷೇಪಣೆ ಸಲ್ಲಿಸಲು ವಿಳಾಸ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಲೊಕೋಪಯೋಗಿ, ಬಂದರು ಮತ್ತು ಒಳನಾಡು ನೀರು ಸರಬರಾಜು ಇಲಾಖೆ, ವಿಕಾಸಸೌಧ ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು 560001.

ಒಟ್ಟು 925 ಹುದ್ದೆಗಳು
ಕರ್ನಾಟಕ ಲೋಕಸೇವಾ ಆಯೋಗ ಅಸಿಸ್ಟೆಂಟ್ ಇಂಜಿನಿಯರ್ (ಗ್ರೇಡ್ -1) 600 ಹುದ್ದೆಗಳು, ಜ್ಯೂನಿಯರ್ ಇಂಜಿನಿಯರ್ 325 ಸೇರಿ ಒಟ್ಟು 925 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ವಿದ್ಯಾರ್ಹತೆ
ಸಹಾಯಕ ಮತ್ತು ಕಿರಿಯ ಇಂಜಿನಿಯರ್ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸುವವರು ಬಿಇ/ಬಿಟೆಕ್ ಪದವಿಗಳನ್ನು ಹುದ್ದೆಗಳಿಗೆ ಅಗತ್ಯ ಇರುವ ಬ್ರಾಂಚ್‌ಗಳಲ್ಲಿ ಪಡೆದಿರಬೇಕು ಎಂದು ನೇಮಕಾತಿ ಆದೇಶ ಹೇಳಿದೆ.

ವಯೋಮಿತಿ ವಿವರ
ಅರ್ಜಿಗಳನ್ನು ಸಲ್ಲಿಸಲು ಕನಿಷ್ಠ 21 ವರ್ಷದ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಗರಿಷ್ಠ ವಯೋಮಿತಿ 35 ವರ್ಷಗಳು. ಅರ್ಹರಿಗೆ ವಯೋಮಿತಿಯಲ್ಲಿ ಸಡಿಲಿಕೆ ಮಾಡುಲಾಗುತ್ತದೆ ಎಂದು ತಿಳಿಸಲಾಗಿದೆ.












Click it and Unblock the Notifications