KPSC ನೇಮಕಾತಿ 2023: ಸರ್ಕಾರಿ ಉದ್ಯೋಗವಕಾಶ, 386 ಜೂ.ಅಸಿಸ್ಟೆಂಟ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ, ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್ 07: ಕರ್ನಾಟಕ ಲೋಕ ಸೇವಾ ಆಯೋಗವು (KPSC) ತನ್ನಲ್ಲಿ ಖಾಲಿ ಇರುವ ಹತ್ತಾರು ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಕರ್ನಾಟಕ ಲೋಕ ಸೇವಾ ಆಯೋಗವು (KPSC) ಹೀಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ 386 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ನಿರುದ್ಯೋಗಿ ಯುವಕ ಯುವಕರು ಈ ಸರ್ಕಾರಿ ನೌಕರಿ ಸೇರಿಬಹುದಾದ ಈ ಉತ್ತಮ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಆಯೋಗ ಮನವಿ ಮಾಡಿದೆ.

ಆಸಕ್ತರು ಅರ್ಜಿ ಸಲ್ಲಿಸುವ ಮೊದಲು ಹುದ್ದೆಯ ಸಂಪೂರ್ಣ ವಿವರ, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ ಹೇಗಿರಲಿ, ವೇತನ ಎಷ್ಟಿದೆ ಎಂಬೆಲ್ಲ ಇನ್ನಿತರ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.
ನೇಮಕಾತಿ ಪ್ರಕ್ರಿಯೆ ಪೂರ್ಣ ವಿವರ
ಹುದ್ದೆ ಹೆಸರು- ಜೂನಿಯರ್ ಅಸಿಸ್ಟೆಂಟ್
ಕೊನೆ ದಿನಾಂಕ - ಮೇ 17
ಪೋಸ್ಟಿಂಗ್- ಕರ್ನಾಟಕ
ಖಾಲಿ ಹುದ್ದೆಗಳು- 386
ವೇತನ - ಅಧಿಸೂಚನೆ ಪ್ರಕಾರ
ಅರ್ಜಿ ಸಲ್ಲಿಕೆ ಹೇಗೆ?
ಸರ್ಕಾರಿ ನೌಕರಿಯನ್ನು ಸೇರಬಯಸುವ ಅಭ್ಯರ್ಥಿಗಳು ಮೊದಲು ಈ ಅಧಿಕೃತ https://cetonline.karnataka.gov.in/kea/ ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರ ತೆರೆಯು ಮುಖಪುಟದಲ್ಲಿ ಅಗತ್ಯ ದಾಖಲೆ ನಮೂದಿಸಿ, ಸೂಕ್ತ ನಿಮ್ಮ ಮೇಲ್ ಐಡಿ ಹಾಕಿ. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ, ತದನಂತರ ಅಲ್ಲಿ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು ಯಾವವು? ಎಷ್ಟು ತಿಳಿಯಿರಿ
ಹಿರಿಯ ಸಹಾಯಕರು(ಖಾತೆ)- 33
ಗುಣಮಟ್ಟದ ಇನ್ಸ್ಪೆಕ್ಟರ್-23
ಕಿರಿಯ ಸಹಾಯಕರು- 263
ಸಹಾಯಕ ವ್ಯವಸ್ಥಾಪಕ -10
ಹಿರಿಯ ಸಹಾಯಕರು- 57
ಇನ್ನು ಅರ್ಜಿ ಸಲ್ಲಿಸಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ. ಬಳಿಕ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಸಂದರ್ಶನದ ಇರಲಿದ್ದು, ಅಲ್ಲಿ ನೇಮಕಾತಿಗೆ ಅರ್ಹರನ್ನು ಆಯೋಗ ಆಯ್ಕೆ ಮಾಡಿಕೊಳ್ಳಲಿದೆ. ಆದಷ್ಟು ಕೂಡಲೇ ಆಸಕ್ತರು ಅಧಿಸೂಚನೆ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಮುಂದಿನ ತಿಂಗಳ ಮೇ 17ರೊಳಗೆ ಸಲ್ಲಿಸಬೇಕು.












Click it and Unblock the Notifications