ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ನೇಮಕಾತಿ : ಅಬಕಾರಿ ಇಲಾಖೆಯಲ್ಲಿ 59 ಹುದ್ದೆಗಳು ಖಾಲಿ

|
Google Oneindia Kannada News

ಬೆಂಗಳೂರು, ನವೆಂಬರ್ 26 : ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಉಪ ನಿರೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 22/12/2018 ಕೊನೆಯ ದಿನವಾಗಿದೆ.

59 ಉಪ ನಿರೀಕ್ಷಕ (ಪುರುಷ/ಮಹಿಳೆ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳಲು ಮನವಿ ಮಾಡಲಾಗಿದೆ.

ಕೆಪಿಎಸ್ಸಿ : 554 ಹುದ್ದೆಗಳಿಗೆ ನೇಮಕಾತಿ, ಇಂದೇ ಅರ್ಜಿ ಹಾಕಿಕೆಪಿಎಸ್ಸಿ : 554 ಹುದ್ದೆಗಳಿಗೆ ನೇಮಕಾತಿ, ಇಂದೇ ಅರ್ಜಿ ಹಾಕಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಬ್ಯಾಚುಲರ್ ಪದವಿಯನ್ನು (ಯಾವುದೇ ವಿಷಯ) ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

KPSC recruitment 2018 : 59 Excise Sub Inspector post

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 31 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ 26 ವರ್ಷದ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಮಾಜಿ ಸೈನಿಕರಿಗೆ ಅವರು ಭಾರತೀಯ ಸೇನೆಯಲ್ಲಿ ಸಲ್ಲಿಸಿರುವ ಸೇವೆಯ ವರ್ಷ ಜೊತೆಗೆ 3 ವರ್ಷದ ಸಡಿಲಿಕೆ ಅನ್ವಯವಾಗುತ್ತದೆ.

ಅರ್ಜಿ ಶುಲ್ಕ : ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ., 2ಎ/2ಬಿ/3ಎ/3ಬಿ ಸೇರಿದ ಅಭ್ಯರ್ಥಿಗಳಿಗೆ 300 ರೂ., ಮಾಜಿ ಸೈನಿಕರು 50 ರೂ.ಗಳನ್ನು ಪಾವತಿ ಮಾಡಬೇಕು.

15 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಡಿಆರ್‌ಡಿಒ15 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಡಿಆರ್‌ಡಿಒ

ಅರ್ಜಿಗಳನ್ನು ಸಲ್ಲಿಸಲು 22/12/2018 ಕೊನೆಯ ದಿನ, ಅರ್ಜಿ ಶುಲ್ಕ ಪಾವತಿ ಮಾಡಲು 24/12/2018 ಕೊನೆಯ ದಿನವಾಗಿದೆ.

ಅರ್ಜಿಗಳನ್ನು ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Karnataka Public Service Commission (KPSC) has invited online applications from qualified candidates for Excise Sub Inspector 59 posts. 22/12/2018 last date for submit application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X