ಜನವರಿ 24ಕ್ಕೆ ಎಫ್‌ಡಿಎ ಪರೀಕ್ಷೆ; ಪ್ರವೇಶ ಪತ್ರ ಪಡೆಯೋದು ಹೇಗೆ?
ಬೆಂಗಳೂರು, ಜನವರಿ 21: ಕರ್ನಾಟಕ ಲೋಕಸೇವಾ ಆಯೋಗ ಸಹಾಯಕ/ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಜನವರಿ 24ರ ಭಾನುವಾರ ಪರೀಕ್ಷೆಗಳು ನಡೆಯಲಿದೆ.
ಕೆಪಿಎಸ್‌ಸಿಯು 2019-20ನೇ ಸಾಲಿನ 1136 (ಉಳಿಕೆ ಮೂಲ ವೃಂದ 998 ಮತ್ತು ಹೈದರಾಬಾದ್ ಕರ್ನಾಟಕ 138) ಹುದ್ದೆಗಳ ಭರ್ತಿಗಾಗಿ ಲಿಖಿತ ಪರೀಕ್ಷೆಗಳನ್ನು ನಡೆಸುತ್ತಿದೆ. ರಾಜ್ಯಾದ್ಯಂತ ಒಟ್ಟು 3,74,124 ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಸಹಾಯಕ/ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ 2020ರ ಜನವರಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಕೋವಿಡ್ ಕಾರಣದಿಂದಾಗಿ ವಿಳಂಬವಾಗಿ ಪರೀಕ್ಷೆಗಳು ನಡೆಯುತ್ತಿವೆ.

ಕೆಪಿಎಸ್‌ಸಿ ತನ್ನ ವೆಬ್ ಸೈಟ್‌ನಲ್ಲಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಅಪ್ ಲೋಡ್ ಮಾಡಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಕೊನೆ ಕ್ಷಣದಲ್ಲಿ ಸರ್ವರ್ ಡೌನ್ ಆಗಿ ಅಭ್ಯರ್ಥಿಗಳು ಪರದಾಡುವ ಬದಲು ಬೇಗನೇ ಪ್ರವೇಶ ಪತ್ರವನ್ನು ಪಡೆಯುವುದು ಉತ್ತಮ.
ಪ್ರವೇಶ ಪತ್ರ ಪಡೆಯುವುದು ಹೇಗೆ?; ಪರೀಕ್ಷೆ ಪ್ರವೇಶ ಪತ್ರವನ್ನು ಪಡೆಯಲು ಮೊದಲು ಅಭ್ಯರ್ಥಿಗಳು ವೆಬ್ ಸೈಟ್‌ಗೆ ಭೇಟಿ ನೀಡಬೇಕು.
ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಆಗ ಅಭ್ಯರ್ಥಿಗಳು ಲಾಗಿನ್ ಡಿಟೇಲ್ಸ್, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಸಹಾಯದಿಂದ ಲಾಗಿನ್ ಆಗಬೇಕು.
ಆಗ ಪ್ರವೇಶ ಪತ್ರ ಸಿಗುತ್ತದೆ. ಅದನ್ನು ಡೌನ್ ಲೋಡ್ ಮಾಡಿಕೊಂಡ ಪ್ರಿಂಟ್ ತೆಗೆದುಕೊಳ್ಳಬೇಕು.












Click it and Unblock the Notifications