7 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಸಿಎಲ್
ಬೆಂಗಳೂರು, ಸೆಪ್ಟೆಂಬರ್ 28 : ಕೆಪಿಸಿಎಲ್ 7 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 25, 2018 ಕೊನೆಯ ದಿನವಾಗಿದೆ.
ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ಅಕೌಂಟ್ ಆಫೀಸರ್, ಡಿಜಿಎಂ ಸೇರಿವಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದವರು ಬೆಂಗಳೂರು, ಬಳ್ಳಾರಿ ಮತ್ತು ರಾಯಚೂರಿನಲ್ಲಿ ಕೆಲಸ ಮಾಡಬೇಕಿದೆ.
ಒಟ್ಟು ಹುದ್ದೆಗಳು 7. ಡಿಪ್ಯೂಟಿ ಜನರಲ್ ಮ್ಯಾನೇಜರ್ (ಸಿಎ&ಸಿಎಸ್) 1, ಫ್ಯಾಕ್ಟರಿ ಮೆಡಿಕಲ್ ಆಫೀಸರ್ 4, ಅಕೌಂಟ್ಸ್ ಆಫೀಸರ್ 2 ಹುದ್ದೆಗಳು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ, ಎಂಬಿಬಿಎಸ್, ಸಿಎ ಅಥವ ಐಸಿಡಬ್ಯುಎ ಕೋರ್ಸ್ ಅನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು.

ವಯೋಮಿತಿಯ ವಿವರಗಳು : ಅರ್ಜಿಗಳನ್ನು ಸಲ್ಲಿಸಲು ಕನಿಷ್ಠ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷದ ಗರಿಷ್ಠ ವಯೋಮಿತಿ. ಓಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಸಾಮಾನ್ಯ ವರ್ಗದವರಿಗೆ 35 ವರ್ಷ, ನಿವೃತ್ತಯೋಧರಿಗೆ 45 ವರ್ಷದ ಗರಿಷ್ಠ ವಯೋಮಿತಿ. ಅಂಗವಿಕಲ, ವಿಧವೆ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇದೆ. 25 ಅಕ್ಟೋಬರ್ 2018ಕ್ಕೆ ಅನ್ವಯವಾಗುವಂತೆ.
ಅರ್ಜಿ ಶುಲ್ಕದ ವಿವರಗಳು
* ನಿವೃತ್ತ ಯೋಧರು, ಅಂಗವಿಕಲ ಅಭ್ಯರ್ಥಿಗಳಿಗೆ 50 ರೂ. ಅಂಚೆ, ಸೇವಾ ಶುಲ್ಕ ಪ್ರತ್ಯೇಕ
* ಎಸ್‌ಸಿ/ಎಸ್‌ಟಿ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 250 ರೂ. ಅಂಚೆ, ಸೇವಾ ಶುಲ್ಕ ಪ್ರತ್ಯೇಕ
* ಉಳಿದ ಅಭ್ಯರ್ಥಿಗಳಿಗೆ 500 ರೂ. ಅಂಚೆ, ಸೇವಾ ಶುಲ್ಕ ಪ್ರತ್ಯೇಕ. ಮೆರಿಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.
ವೇತನ ಶ್ರೇಣಿ
* ಡೆಪ್ಯೂಟಿ ಮ್ಯಾನೇಜರ್ 32725-57,575 ಪ್ರತಿ ತಿಂಗಳು
* ಫ್ಯಾಕ್ಟರಿ ಮೆಡಿಕಲ್ ಆಫೀಸರ್/ಅಕೌಂಟ್ಸ್ ಆಫೀಸರ್ 20895-49895 ಪ್ರತಿ ತಿಂಗಳು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿಗಳನ್ನು ಸಲ್ಲಿಸಲು ವಿಳಾಸ












Click it and Unblock the Notifications