Koppal Govt Jobs: ಆರೋಗ್ಯ & ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಸರ್ಕಾರಿ ಕೆಲಸ, ಕೈತುಂಬ ಸಂಬಳ

ಕೊಪ್ಪಳ, ಅಕ್ಟೋಬರ್ 23: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು (DHFWS) ತಲ್ಲಿರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಸರ್ಕಾರಿ ಉದ್ಯೋಗ ಪಡೆಯಬೇಕೆಂದುಕೊಂಡು ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ಮಾಹಿತಿ ನೋಡಿಕೊಂಡು ಕೂಡಲೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30ರಂದು ಕೊನೆಯ ದಿನವಾಗಿದೆ.

ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಭರ್ತಿ ತಜ್ಞ ವೈದ್ಯರು, ನರ್ಸಿಂಗ್ ಸೇರಿದಂತೆ ಒಟ್ಟು 14 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಸಿಲಾಗಿದೆ. ಆಸಕ್ತರು ಕೊನೆಯ ದಿನಾಂಕದವರೆಗೆ ಕಾಯದೇ ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕೆಂದು ಸೊಸೈಟಿ ತಿಳಿಸಿದೆ.

Koppal Health and Family Welfare Society 14 Job Posts Recruitment Details Inside

ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಕುರಿತು, ಆನ್‌ಲೈನ್ ಲಿಂಕ್, ಮಾಸಿಕ ವೇತನ, ವಯೋಮಿತಿ ಇತರ ಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಕೊಪ್ಪಳ

ಹುದ್ದೆ ಹೆಸರು: ತಜ್ಞ ವೈದ್ಯರು, ನರ್ಸಿಂಗ್

ಒಟ್ಟು ಹುದ್ದೆ: 14

ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 30

ವಯೋಮಿತಿ: ಕನಿಷ್ಠ 18- ಗರಿಷ್ಠ 45 ವರ್ಷ

ಪೋಸ್ಟಿಂಗ್ ಎಲ್ಲಿ: ಕೊಪ್ಪಳ

ಅರ್ಜಿ ಸಲ್ಲಿಕೆ: ಆನ್‌ಲೈನ್

ಹುದ್ದೆಗಳ ಇತರ ಮಾಹಿತಿ ನೋಡುವುದಾದರೆ, ಈ ಸೊಸೈಟಿಯಲ್ಲಿ ಅರಿವಳಿಕೆ ತಜ್ಞ, ಶಿಶುವೈದ್ಯ, ವಿಕಿರಣ ಸಂಬಂಧಿ ಹುದ್ದೆ ಸೇರಿ ತಲಾ 01, ನರ್ಸಿಂಗ್ ಅಧಿಕಾರಿ 11 ಸೇರಿ ಒಟ್ಟು 14 ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ಅರ್ಹತೆ ಏನಿರಬೇಕು?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅರ್ಹ ಆಸಕ್ತ ಅಭ್ಯರ್ಥಿಗಳು DA, DNB, MD, DCH, BSC, GN ಕೋರ್ಸ ಮಾಡಿರಬೇಕು ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ. ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಎಂದು ಸೊಸೈಟಿ ಮಾಹಿತಿ ನೀಡಿದೆ.

ವಯಸ್ಸಿನ ಮಿತಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಪ್ಪಳ ನೇಮಕಾತಿ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಕೆ ಕೊನೆ ದಿನಾಂಕಕ್ಕೆ (ಅಕ್ಟೋಬರ್ 30) ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ದಾಟಿರಬಾರದು. ಜಾತಿ ಮೀಸಲಾತಿ ನೋಡಿಕೊಂಡು ಆಯಾ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಸಿಗಲಿದೆ.

ಮಾಸಿಕ ವೇತನದ ಮಾಹಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರು ಪಡೆದ ಮೆರಿಟ್ ಪಟ್ಟಿ ಆಧಾರದ ಪರಿಗಣಿಸಿ ನಂತರ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಈ ಹುದ್ದೆಗಳಿಗೆ ಮಾಸಿಕ ರೂಪಾಯಿ 15,555 ರಿಂದ 1,30,000 ರೂ.ವರೆಗೆ ನೀಡಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಮೂಲಕ ಕೂಡಲೇ ಇಲ್ಲಿರುವ ಆನ್‌ಲೈನ್ ಲಿಂಕ್ https://sevasindhuservices.karnataka.gov.in/ ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+