Kolar Zilla Panchayat Jobs 2023: 10ನೇ ತರಗತಿ ಪಾಸಾದವರಿಗೂ ಕೈತುಂಬ ಸಂಬಳದ ಉದ್ಯೋಗ, ವಿವರ

ಬೆಂಗಳೂರು, ಆಗಸ್ಟ್ 21: ಕೋಲಾರ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಪಂಚಾಯಿತಿಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹತ್ತನೇ ತರಗತಿ ಉತ್ತೀರ್ಣವಾದವರಿಗೂ ಕೆಲಸ ಮತ್ತು ಕೈತುಂಬ ಸಂಬಳ ಸಿಗಲಿದೆ. ಈ ಅವಕಾಶ ಸದುಪಯೋಗ ಮಾಡಿಕೊಳ್ಳಬಹುದಾಗಿದೆ.

ಕೋಲಾರ ಜಿಲ್ಲಾ ಪಂಚಾಯತಿಯಲ್ಲಿ ಒಟ್ಟು 6 ಫಾರ್ಮಾಸಿಸ್ಟ್, ಹೋಮಿಯೋಪಥಿ ಸ್ಪೆಷಲಿಸ್ಟ್​ ಡಾಕ್ಟರ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳಿಗೆ ಮುಂದಿನ ತಿಂಗಳ ಸೆಪ್ಟೆಂಬರ್ 16ರೊಳಗೆ ಆಫ್​ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲ ಅಧಿಸೂಚನೆ ಪೂರ್ಣ ಓದಿಕೊಂಡು ಸಲ್ಲಿಸಬೇಕು. ಅರ್ಜಿ ವಿವಿರ, ನೇಮಕಾತಿ ಪ್ರಕ್ರಿಯೆ ಕುರಿತು ಇಲ್ಲಿ ತಿಳಿಯಿರಿ.

Kolar Zilla Panchayat Recruitment 2023: Invite Application For 6 Posts By Eligible

ನೇಮಕಾತಿ ವಿವರ

ಸಂಸ್ಥ- ಕೋಲಾರ ಜಿಲ್ಲಾ ಪಂಚಾಯತ್

ಒಟ್ಟು ಖಾಲಿ ಹುದ್ದೆ- 6

ಹುದ್ದೆ ಹೆಸರು-ಫಾರ್ಮಾಸಿಸ್ಟ್, ಹೋಮಿಯೋಪಥಿ ಸ್ಪೆಷಲಿಸ್ಟ್​ ಡಾಕ್ಟರ್

ವೇತನ ಮಾಸಿಕ- 52,550 ರೂಪಾಯಿ


ಖಾಲಿ ಹುದ್ದೆ ಪೂರ್ತಿ ಮಾಹಿತಿ

ಮಸಾಜಿಸ್ಟ್-1

ಆಯುರ್ವೇದ ಸ್ಪೆಷಲ್ ಡಾಕ್ಟರ್- 1

ಫಾರ್ಮಾಸಿಸ್ಟ್- 2

ಹೋಮಿಯೋಪಥಿ ಸ್ಪೆಷಲಿಸ್ಟ್​ ಡಾಕ್ಟರ್- 1

ಅಲ್ಕಾಲೈನ್ ಅಟೆಂಡೆಂಟ್- 1

ಶೈಕ್ಷಣಿಕ ಅರ್ಹತೆ ಏನಿರಬೇಕು?

ಕೋಲಾ ಜಿ.ಪಂ ಅಧಿಸೂಚನೆ ಪ್ರಕಾರ, ಹೋಮಿಯೋಪಥಿ ಸ್ಪೆಷಲಿಸ್ಟ್​ ಡಾಕ್ಟರ್ ಹುದ್ದೆಗೆ ಹೋಮಿಯೋಪಥಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮುಗಿಸಿರಬೇಕು. ಅಲ್ಕಾಲೈನ್ ಅಟೆಂಡೆಂಟ್ ಹುದ್ದೆಗೆ ಅಭ್ಯರ್ಥಿಯ 10ನೇ ತರಗತಿ, ಮಸಾಜಿಸ್ಟ್- 7ನೇ ತರಗತಿ ಹಾಗೂ ಆಯುರ್ವೇದ ಸ್ಪೆಷಲ್ ಡಾಕ್ಟರ್ ಸ್ಥಾನಕ್ಕೆ ಸ್ನಾತಕೋತ್ತರ ಪದವಿ ಮತ್ತು ಫಾರ್ಮಾಸಿಸ್ಟ್ ಹುದ್ದೆ ಬಯಸುವವರು 10ನೇ ತರಗತಿ, ಡಿಪ್ಲೊಮಾ ಪದವಿಯಲ್ಲಿ ಉತ್ತೀರ್ಣವಾಗಿರಬೇಕು ಎಂದು ತಿಳಿಸಿದೆ.

Kolar Zilla Panchayat Recruitment 2023: Invite Application For 6 Posts By Eligible

ಹುದ್ದೆವಾರು ವೇತನದ ಮಾಹಿತಿ

ಮಸಾಜಿಸ್ಟ್ ಹುದ್ದೆಗೆ ಮಾಸಿಕ 18,500 ರೂಪಾಯಿ, ಆಯುರ್ವೇದ ಸ್ಪೆಷಲ್ ಡಾಕ್ಟರ್ ಹುದ್ದೆಗೆ ತಿಂಗಳಿಗೆ ₹ 52,550, ಫಾರ್ಮಾಸಿಸ್ಟ್ ಹುದ್ದೆಗೆ ₹27,550, ಅಲ್ಕಾಲೈನ್ ಅಟೆಂಡೆಂಟ್ ತಿಂಗಳಿಗೆ ₹18,500 ವೇತನ ಹಾಗೂ ಹೋಮಿಯೋಪಥಿ ಸ್ಪೆಷಲಿಸ್ಟ್​ ಡಾಕ್ಟರ್ ತಿಂಗಳಿಗೆ ₹52,550 ವೇತನ ನೀಡಲಾಗುವುದು ಎಂದು ಜಿ.ಪಂ ತಿಳಿಸಿದೆ.

ವಯಸ್ಸಿನ ಮಿತಿ

ಕೋಲಾರ ಜಿಲ್ಲಾ ಪಂಚಾಯತ್ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ನೇಮಕಾತಿ ಅಧಿಸೂಚನೆ ತಿಳಿಸಿರುವಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಇನ್ನೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಐದು ವರ್ಷ ಸಡಿಲಿಕೆ ಇರಲಿದೆ. ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಅರ್ಜಿ ಸಲ್ಲಿಕೆ ವಿಧಾನ

ಅಭ್ಯರ್ಥಿಗಳು ಸೂಕ್ತ ದಾಖಲೆ ಸಹಿತ ಭರ್ತಿ ಮಾಡಿದ ಅರ್ಜಿಯನ್ನು ಆಫ್‌ಲೈನ್ ಮೂಲಕ ''ಜಿಲ್ಲಾ ಆಯುಷ್ ಅಧಿಕಾರಿಗಳು,

ಜಿಲ್ಲಾ ಆಯುಷ್ ಕಛೇರಿ, ಎಸ್.ಎನ್.ಆರ್ ಆಸ್ಪತ್ರೆ ಆವರಣ, ಕೋಲಾರ-563101 ಇಲ್ಲಿಗೆ ಸೆಪ್ಟಂಬರ್ 16 ರೊಳಗೆ ಸಲ್ಲಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+