ಕೊಡಗು ಜಿಲ್ಲಾ ಪಂಚಾಯತಿಯಲ್ಲಿ ಕೆಲಸ ಖಾಲಿ ಇದೆ. ಜ.23ರ ತನಕ ಅರ್ಜಿ ಹಾಕಿ

ಮಡಿಕೇರಿ, ಜನವರಿ 09; ಕೊಡಗು ಜಿಲ್ಲಾ ಪಂಚಾಯಿತಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಟಾನಕ್ಕಾಗಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 23/1/2023 ಕೊನೆಯ ದಿನವಾಗಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ಸಂಪನ್ಮೂಲ ಸೇವೆ ಒದಗಿಸುತ್ತಿರುವ ಹೊರಗುತ್ತಿಗೆ ಸಂಸ್ಥೆಯಾದ ಮೇ ಮೇಘ ಸರ್ವೀಸಸ್ಸ್, ಪ್ರೈವೇಟ್ ಲಿಮಿಟೆಡ್ ವಿಜಯಪುರ ಅವರಿಂದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಸಕ್ತ ಮತ್ತು ಅರ್ಹರು ವಿದ್ಯಾರ್ಹತೆ/ ಇತರೆ ವಿಷಯಗಳಿಗೆ ಸಂಬಂಧಪಟ್ಟ ಪೂರ್ಣ ದಾಖಲಾತಿಗಳೊಂದಿಗೆ ಆನ್‌ಲೈನ್ ಮೂಲಕ htpp://kodagu.nic.inನಲ್ಲಿ ಲಭ್ಯವಿರುವ ನಿಗದಿತ ನಮೂನೆಯಲ್ಲಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

Kodagu Zilla Panchayat Recruitment Apply For Various Post

ಹುದ್ದೆಗಳ ವಿವರ; ತಾಂತ್ರಿಕ ಸಹಾಯಕರು (ಕೃಷಿ) 2, ತಾಂತ್ರಿಕ ಸಹಾಯಕರು (ತೋಟಗಾರಿಕೆ) 2, ತಾಲೂಕು ಐ. ಇ. ಸಿ. ಸಂಯೋಜಕರು 1 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಎಲ್ಲಾ ಹುದ್ದೆಗಳಿಗೆ 21 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಮಾಸಿಕ ವೇತನ ರೂ. 24,000 ಮತ್ತು ರೂ. 2000 ಟಿಎ.

ತಾಂತ್ರಿಕ ಸಹಾಯಕರು (ಕೃಷಿ) ಹುದ್ದೆಗೆ ಬಿಎಸ್‌ಸಿ/ ಎಂಎಸ್‌ಸಿ ಅಗ್ರಿಕಲ್ಚರ್ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಕನಿಷ್ಟ 2 ವರ್ಷಗಳ ಅನುಭವ ಅಗತ್ಯ.

ತಾಂತ್ರಿಕ ಸಹಾಯಕರು (ತೋಟಗಾರಿಕೆ) ಬಿಎಸ್‌ಸಿ/ ಎಂಎಸ್‌ಸಿ ತೋಟಗಾರಿಕೆ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಕನಿಷ್ಟ 2 ವರ್ಷದ ಅನುಭವ ಹೊಂದಿರಬೇಕು.

ತಾಲೂಕು ಐ. ಇ. ಸಿ. ಸಂಯೋಜಕ ಹುದ್ದೆಗೆ ಮಾಸ್ ಕಮ್ಯುನಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಅಥವ ಯಾವುದೇ ಪದವಿ ವಿತ್ ಡಿಪ್ಲೊಮಾ ಮಾಸ್‌ ಕಮ್ಯುನಿಕೇಶನ್ ಅಥವ ಸಂಬಂಧಿಸಿದ ಕಾರ್ಯ ಕ್ಷೇತ್ರದ ಮಾಹಿತಿ ಹೊಂದಿರಬೇಕು.

ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಿಗದಿಪಡಿಸಿದ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು. ದಾಖಲಾತಿಗಳ ಪರಿಶೀಲನೆ ಬಳಿಕ ಅರ್ಹ ಅಭ್ಯರ್ಥಿಗಳನ್ನು ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಪರಿಗಣಿಸಿ ಮೆರಿಟ್ ಪಟ್ಟಿ ತಯಾರು ಮಾಡಲಾಗುತ್ತದೆ.

ಒಂದು ವೇಳೆ ಮೆರಿಟ್ ಆಧಾರದ ಮೇರೆಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅಂತಹ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಗೊಳಿಸುವುದು ಮತ್ತು ಮೆರಿಟ್ ಆಧಾರದ ಪ್ರತೀಕ್ಷಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+