SHIMUL Recruitment; 194 ಹುದ್ದೆಗಳಿಗೆ ಅರ್ಜಿ ಹಾಕಿ

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ 194 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆದಿದೆ.

ಶಿವಮೊಗ್ಗ, ಫೆಬ್ರವರಿ 06; ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಮಾಚೇನಹಳ್ಳಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಮಾರ್ಚ್ 3 ಕೊನೆಯ ದಿನವಾಗಿದೆ.

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.ದಲ್ಲಿ ಖಾಲಿ ಇರುವ 194 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಅಧಿಸೂಚನೆ ಪ್ರಕಟಿಸಿರುವ ಹುದ್ದೆಗಳಲ್ಲಿ ಕಿರಿಯ ತಾಂತ್ರಿಕ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು. ಕಂಪ್ಯೂಟರ್ ಸರ್ಟಿಫಿಕೇಟ್ ತರಬೇತಿ ಪ್ರಮಾಣ ಪತ್ರ ಸಲ್ಲಿಸಬೇಕು. ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದಲ್ಲಿ ಕಂಪ್ಯೂಟರ್ ಸರ್ಟಿಫಿಕೇಟ್‌ ಸಲ್ಲಿಸಲು ವಿನಾಯಿತಿ ಇದೆ.

ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. (ಶಿಮುಲ್) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. https://shimul.coop/ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು, ಅರ್ಜಿ ಸಲ್ಲಿಸಬಹುದು.

ಯಾವ-ಯಾವ ಹುದ್ದೆಗಳು

ಯಾವ-ಯಾವ ಹುದ್ದೆಗಳು

ಸಹಾಯಕ ವ್ಯವಸ್ಥಾಪಕರು (ಎಹೆಚ್‌/ಎಐ) 17 ಹುದ್ದೆಗಳು. ಸಹಾಯಕ ವ್ಯವಸ್ಥಾಪಕರು (ಆಡಳಿತ) 1 ಹುದ್ದೆ. ಸಹಾಯಕ ವ್ಯವಸ್ಥಾಪಕರು (ಎಫ್‌ ಅಂಡ್ ಎಫ್) 3 ಹುದ್ದೆಗಳು. ಎಂಐಎಸ್/ ಸಿಸ್ಟಂ ಆಫೀಸರ್ 1 ಹುದ್ದೆ. ಮಾರುಕಟ್ಟೆ ಅಧಿಕಾರಿ 2 ಹುದ್ದೆಗಳು. ತಾಂತ್ರಿಕ ಅಭಿಯಂತರ ಮೆಕಾನಿಕಲ್ 1, ಎಲೆಕ್ಟ್ರಿಕಲ್ 1 ಹುದ್ದೆ.

ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) ಕೆಮಿಸ್ಟ್ರಿ 1, ಮೈಕ್ರೊಬಯಾಲಜಿ 1 ಹುದ್ದೆ. ತಾಂತ್ರಿಕ ಅಧಿಕಾರಿ (ಡಿಟಿ) 14 ಹುದ್ದೆಗಳು. ಕೆಮಿಸ್ಟ್ ದರ್ಜೆ -1 4 ಹುದ್ದೆಗಳು (ಕೆಮಿಸ್ಟ್ರಿ 2, ಮೈಕ್ರೊಬಯಾಲಜಿ 2,).

ಹುದ್ದೆಗಳು, ಯಾರಿಗೆ ಎಷ್ಟು?

ಹುದ್ದೆಗಳು, ಯಾರಿಗೆ ಎಷ್ಟು?

ವಿಸ್ತರಣಾಧಿಕಾರಿ ದರ್ಜೆ-3 ಒಟ್ಟು 17 ಹುದ್ದೆಗಳು. ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರಿಗೆ 5 ಹುದ್ದೆಗಳು. ವಿಸ್ತರಣಾಧಿಕಾರಿ ದರ್ಜೆ-3 ನೇರ ನೇಮಕಾತಿ ಮೂಲಕ 12 ಹುದ್ದೆಗಳು.

ಆಡಳಿತ ಸಹಾಯಕ ದರ್ಜೆ-2 17 ಹುದ್ದೆಗಳು. ಲೆಕ್ಕಸಹಾಯಕ ದರ್ಜೆ -2 12 ಹುದ್ದೆಗಳು. ಮಾರುಕಟ್ಟೆ ಸಹಾಯಕ ದರ್ಜೆ-2 10 ಹುದ್ದೆಗಳು. ಕೆಮಿಸ್ಟ್ ದರ್ಜೆ -2 28 ಹುದ್ದೆಗಳು. ಕರ್ನಾಟಕ ಹಾಲು ಮಹಾಮಂಡಳ/ ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ 4 ಹುದ್ದೆಗಳು.

ಕಿರಿಯ ಸಿಸ್ಟಂ ಆಪರೇಟರ್ 13 ಹುದ್ದೆಗಳು. ಕರ್ನಾಟಕ ಹಾಲು ಮಹಾಮಂಡಳ/ ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ 3 ಹುದ್ದೆಗಳು. ಶೀಘ್ರಲಿಪಿಗಾರ 1 ಹುದ್ದೆ. ಕಿರಿಯ ತಾಂತ್ರಿಕರು 25 ಹುದ್ದೆಗಳು. ಕಿರಿಯ ತಾಂತ್ರಿಕರು 15 ಹುದ್ದೆಗಳು.

ಅಭ್ಯರ್ಥಿಗಳಿಗೆ ಸೂಚನೆಗಳು

ಅಭ್ಯರ್ಥಿಗಳಿಗೆ ಸೂಚನೆಗಳು

ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸ ತಕ್ಕದ್ದು. ಒಂದೇ ಹುದ್ದೆಗೆ ಒಂದಕ್ಕಿಮತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಮೊದಲು ಸಲ್ಲಿಸಿದ ಅರ್ಜಿಯನ್ನು ಮಾತ್ರ ಮಾನ್ಯ ಮಾಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಬಯಸಿದಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಅಭ್ಯರ್ಥಿಗಳು ದಾಖಲೆಗಳು ಸ್ಪಷ್ಟವಾಗಿ ಕಾಣುವಂತೆ ಅಪ್‌ಲೋಡ್ ಮಾಡಬೇಕು. ಅಪೂರ್ಣ, ಅಸ್ಪಷ್ಟ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ.
ನೇಮಕಾತಿ ಪ್ರಕಟಣೆ ಸರಿಯಾಗಿ ತಿಳಿದುಕೊಳ್ಳದೇ ಅಭ್ಯರ್ಥಿಗಳು ತಪ್ಪು ಮಾಡಿದರೆ ಒಕ್ಕೂಟವು ಜವಾಬ್ದಾರಿ ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಶುಲ್ಕದ ವಿವರಗಳು

ಅರ್ಜಿಗಳನ್ನು ಸಲ್ಲಿಕೆ ಮಾಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ 500 ರೂ. ಮತ್ತು ಬ್ಯಾಂಕ್ ಶುಲ್ಕಗಳು ಪ್ರತ್ಯೇಕ. ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ 1000 ರೂ. ಮತ್ತು ಬ್ಯಾಂಕ್ ಶುಲ್ಕ ಪ್ರತ್ಯೇಕ.

ಅರ್ಜಿ ಶುಲ್ಕವನ್ನು ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು 3/3/2023 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಮೂಲಕ ನಿಗದಿತ ಬ್ಯಾಂಕ್ ಶುಲ್ಕದ ಜೊತೆ ಪಾವತಿ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+