ಕೊಡಗು; ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ

ಬೆಂಗಳೂರು, ಜೂನ್ 30 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 30/6/2020 ಕೊನೆಯ ದಿನವಾಗಿದೆ.

ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಣೆ ಮಾಡಲು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ಕೋವಿಡ್ - 19 ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಿದೆ.

ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ 6 ತಿಂಗಳ ಅವಧಿಗೆ ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತಿದೆ.

Apply For Various Post In Kodagu Institute Of Medical Sciences

ಹುದ್ದೆಗಳ ವಿವರ; ತಜ್ಞ ವೈದ್ಯರು (10 ಹುದ್ದೆ), ವಿದ್ಯಾರ್ಹತೆ ಎಂ. ಬಿ. ಬಿ. ಎಸ್, ಮಾಸಿಕ ವೇತನ 60,000. ಶುಶ್ರೂಷಕರು (12 ಹುದ್ದೆ), ವಿದ್ಯಾರ್ಹತೆ ಜೆ. ಎನ್‌. ಎಂ/ ಬಿ. ಎಸ್ಸಿ. ನರ್ಸಿಂಗ್/ ಎಂ. ಎಸ್ಸಿ. ನರ್ಸಿಂಗ್. ವೇತನ 20,000 ರೂ.ಗಳು.

ಅನುಭವ ಮತ್ತು ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು 30/6/2020 ಸಂಜೆ 5 ಗಂಟೆಯ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಗಳನ್ನು ನಿರ್ದೇಶಕರು ಹಾಗೂ ಡೀನ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇವರಿಗೆ ಖುದ್ದಾಗಿ ಅಥವ ಇ-ಮೇಲ್ ಮುಖಾಂತರ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ 08272-298220 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಇ-ಮೇಲ್ [email protected] ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+