ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ: ಸಂದರ್ಶನಕ್ಕೆ ಹಾಜರಾಗಿ
ಬೆಂಗಳೂರು, ಆಗಸ್ಟ್ 31: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೆಕ್ನೀಷಿಯನ್ ಎಆರ್ ಎಫ್ಎಫ್ ಹುದ್ದೆ ನೇಮಕಾತಿ ನಡೆಯುತ್ತಿದ್ದು ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 3ರಿಂದ ಅರ್ಹತಾ ಪರೀಕ್ಷೆ ಏರ್ಪಡಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಎಆರ್ ಎಫ್ ಎಫ್ ಟೆಕ್ನೀಷಿಯನ್ ಹುದ್ದೆಗಳಿಗೆ ಮೈಸೂರಿನ ಜೆಎಸ್ ಎಸ್ ಶಾಲೆ ಆವರಣದಲ್ಲಿ ದೈಹಿಕ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನವನ್ನು ಸೆಪ್ಟೆಂಬರ್ 3ರಿಂದ ಸೆಪ್ಟೆಂಬರ್ 5ರವರೆಗೆ ಏರ್ಪಡಿಸಿದೆ.
ಸಂದರ್ಶನಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಡಿಪ್ಲೊಮಾ ಅಥವಾ ಐಟಿಐ ಉತ್ತೀರ್ಣರಾಗಿರಬೇಕು. 165 ಸೆಂ.ಮೀ, ತೂಕ 56ಕೆಜಿ ಇರಬೇಕು.ಸೆಪ್ಟೆಂಬರ್ 3ರಂದು ಬೆಳಗ್ಗೆ 10ಗಂಟೆಯೊಳಗೆ ಹಾಜರಿರಬೇಕು.

ಶೂ ಮತ್ತು ಶಾರ್ಟ್ಸ್ ಧರಿಸಿರಬೇಕು, ಆಧಾರ್ ಕಾರ್ಡ್ ಮತ್ತು ವಿದ್ಯಾರ್ಹತೆ ದಾಖಲಾತಿಯೊಂದಿಗೆ ಹಾಜರಿರಬೇಕು. ಅಭ್ಯರ್ಥಿಗಳಿಗೆ ಈ ಮೂರು ದಿನಗಳಂದು ಶ್ರೀಕ್ಷೇತ್ರದಲ್ಲಿ ಉಚಿತ ವಸತಿ ಮತ್ತು ಪ್ರಸಾದ ವ್ಯವಸ್ಥೆ ಇರುತ್ತದೆ.
ಸಂದರ್ಶನಕ್ಕೆ ಹಾಜರಾಗುವವರು ಸ್ವಂತ ಖರ್ಚಿನಲ್ಲಿ ಬರಬೇಕು ಎಂದು ತಾಂತ್ರಿಕ ಶಿಕ್ಷಣ ವಿಭಾಗ ತಿಳಿಸಿದೆ. ಮಾಹಿತಿಗಾಗಿ-0821-2548273 ಸಂಪರ್ಕಿಸಬಹುದು.












Click it and Unblock the Notifications