ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ; ಅರ್ಜಿ ಶುಲ್ಕ ಕಡಿತ

ಬೆಂಗಳೂರು, ಜೂನ್ 30: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ (ಕೆಇಎ) 4 ಸರ್ಕಾರಿ ನಿಗಮಗಳಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಈ ನೇಮಕಾತಿ ನಡೆಯಲಿದೆ. ಈ ನೇಮಕಾತಿಗೆ ಅರ್ಜಿ ಶುಲ್ಕ ಅಧಿಕವಾಯಿತು ಎಂಬ ಮನವಿ ಹಿನ್ನಲೆಯಲ್ಲಿ ಶುಲ್ಕವನ್ನು ಕಡಿತಗೊಳಿಸಿ ಆದೇಶಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.

KEA Recruitment 2023 Application Fee Revised

ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುತ್ತಿದೆ. ಇದಕ್ಕಾಗಿ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈಗ ಅರ್ಜಿ ಶುಲ್ಕವನ್ನು ಪರಿಷ್ಕರಿಸಿ ಆದೇಶಿಸಿದೆ.

ಪರಿಷ್ಕರಣೆಗೊಂಡ ಶುಲ್ಕಗಳು; ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿಗೆ ಅರ್ಜಿ ಶುಲ್ಕವನ್ನು 30/6/2023ರ ಮಧ್ಯಾಹ್ನ 1 ರಿಂದ ಚಲನ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿದೆ.

ಅರ್ಜಿ ಶುಲ್ಕ ಪರಿಷ್ಕರಣೆ ಬಳಿಕ ಸಾಮಾನ್ಯ ವರ್ಗಕ್ಕೆ ಪ್ರತಿ ಹುದ್ದೆಗೆ 500 ರೂ., ಹಿಂದುಳಿದ ವರ್ಗ (2ಎ/ 2ಬಿ/ 3ಎ/ 3ಬಿ) 300 ರೂ.ಗಳು, ಎಸ್‌ಸಿ/ ಎಸ್‌ಟಿ/ ಪ್ರವರ್ಗ-1 200 ರೂ.ಗಳು, ವಿಕಲಚೇತನರು/ ಮಾಜಿ ಸೈನಿಕರಿಗೆ 100 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

700ಕ್ಕೂ ಅಧಿಕ ಹುದ್ದೆಗಳು; ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ (ಕೆಇಎ) ರಾಜ್ಯ ಸರ್ಕಾರದ ಅಡಿಯಲ್ಲಿನ ವಿವಿಧ ನಿಗಮಗಳ 700ಕ್ಕೂ ಅಧಿಕ ಹುದ್ದೆಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ ಈ ಅಧಿಸೂಚನೆಯಲ್ಲಿನ ಅರ್ಜಿ ಶುಲ್ಕ ಹೆಚ್ಚಾಯಿತು, ಅದನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆ ಇತ್ತು.

ಪ್ರತಿ ಹುದ್ದೆಗೆ ಸಾಮಾನ್ಯ ವರ್ಗ, ಹಿಂದುಳಿದ ವರ್ಗ (2ಎ/ 2ಬಿ/ 3ಎ/ 3ಬಿ) 1000 ರೂ.ಗಳು, ಎಸ್‌ಸಿ/ ಎಸ್‌ಟಿ/ ಪ್ರವರ್ಗ-1 750 ರೂ.ಗಳು, ವಿಕಲಚೇತನರು/ ಮಾಜಿ ಸೈನಿಕರಿಗೆ 250 ರೂ. ಶುಲ್ಕವನ್ನು ನಿಗದಿ ಮಾಡಲಾಗಿತ್ತು. ವಿವಿಧ ಸಂಘನೆಗಳು ಅರ್ಜಿ ಶುಲ್ಕ ಕಡಿಮೆ ಮಾಡುವಂತೆ ಮನವಿ ಮಾಡಿದ್ದವು.

ಉದ್ಯೋಗಾಂಕ್ಷಿಗಳು ಪರೀಕ್ಷಾ ಶುಲ್ಕ ಕಡಿಮೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವರು ಮತ್ತು ಕೆಇಎ ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದರು. ಪ್ರತಿ ಹುದ್ದೆಗೆ 1000 ರೂ. ಶುಲ್ಕವಾದರೆ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಶುಲ್ಕಕ್ಕಾಗಿಯೇ ಎಷ್ಟು ಖರ್ಚು ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದರು.

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ಇದೆ. ಆದರೆ ಕೆಇಎ ಮಾತ್ರ ಹೆಚ್ಚು ಶುಲ್ಕವನ್ನು ವಿಧಿಸಿ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಬಡ ಅಭ್ಯರ್ಥಿಯೊಬ್ಬ 10 ಹುದ್ದೆಗೆ ಅರ್ಜಿ ಹಾಕಿದರೆ 10 ಸಾವಿರ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಬೇಕಿದೆ. ಹಣವನ್ನು ಎಲ್ಲಿಂದ ತರುವುದು? ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

ಅಭ್ಯರ್ಥಿಗಳ ಒತ್ತಾಯಕ್ಕೆ ಮಣಿದಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2023ರ ವಿವಿಧ ನೇಮಕಾತಿಯ ಶುಲ್ಕವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+