KEA: ಸರ್ಕಾರಿ ಉದ್ಯೋಗ ನೇಮಕಾತಿ: ಅರ್ಹತಾ ಪಟ್ಟಿ ಪ್ರಕಟ, ದಾಖಲಾತಿ ಪರಿಶೀಲನೆ ಅಪ್ಡೇಟ್
ಬೆಂಗಳೂರು, ನವೆಂಬರ್ 08: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (KFCSC Job Recruitment 2024) ಖಾಲಿ ಇರುವ 386 ಹುದ್ದೆಗಳಿಗೆ ಕಳೆದ ವರ್ಷ 2023ರ ನವೆಂಬರ್ ತಿಂಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪರೀಕ್ಷೆ ನಡೆಸಿತ್ತು. ಇದೀಗ ಅಭ್ಯರ್ಥಿಗಳ ಅರ್ಹತಾ ಪಟ್ಟಿ ಬಿಡುಗಡೆ ಮಾಡಿದೆ. ಶೀಘ್ರವೇ ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು ಎಂದು ನಿಗಮ ತಿಳಿಸಿದೆ.
ಹೌದು, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ ಖಾಲಿ ಇರುವ ನೂರಾರು ವಿವಿಧ ಹುದ್ದೆಗಳಿಗೆ ಒಂದು ವರ್ಷದ ಹಿಂದೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಪ್ರಾಧಿಕಾರವು ಪರೀಕ್ಷೆ ನಡೆಸಿತ್ತು.

ನಂತರ ಕೀ ಉತ್ತರಗಳನ್ನು ಸಹ ಬಿಡುಗಡೆ ಮಾಡಿತ್ತು. ಇದೀಗ 1:3 ಅರ್ಹತೆ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅದನ್ನು ನೀವು ನಿಗಮದ ಅಧಿಕೃತ ವೆಬ್‌ಸೈಟ್ (https://kfcsc.karnataka.gov.in/) ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಿಕೊಳ್ಳುವಂತೆ ಮಾಹಿತಿ ನೀಡಲಾಗಿದೆ.
ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎಲ್ಲ ಹುದ್ದೆಗಳಿಗೆ ಸಾಮಾನ್ಯ ಜ್ಞಾನ, ಕನ್ನಡ, ಕಂಪ್ಯೂಟರ್ ಜ್ಞಾನ ಹೀಗೆ ಅಗತ್ಯ ವಿಷಯಗಳ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2023ರಲ್ಲಿ ನವೆಂಬರ್‌ನಲ್ಲಿ ಪರೀಕ್ಷೆ ನಡೆಸಿತ್ತು.
ಇದೀಗ ಅಧಿಕೃತ ಲಿಂಕ್‌ನಲ್ಲಿ ಪಿಡಿಎಫ್ ನಲ್ಲಿ ಹುದ್ದೆವಾರು ಅರ್ಹತೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಅದನ್ನು ಗಮನಿಸಬೇಕು. ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಯಾವಾಗ ಹಾಜರಾಗಬೇಕು ಎಂಬ ಮಾಹಿತಿ, ದಿನಾಂಕವನ್ನು ಶೀಘ್ರವೇ ಪ್ರಕಟಿಸಲಿದೆ.
KFCSC ಅರ್ಹತಾ ಪಟ್ಟಿ ಪರಿಶೀಲನೆ ಹೇಗೆ?
* ಪರೀಕ್ಷೆ ಬರೆದ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ (https://kfcsc.karnataka.gov.in/)ಗೆ ಭೇಟಿ ನೀಡಬೇಕು.
* ಜಾಲತಾಣ ತೆರೆಯುತ್ತಿದ್ದಂತೆ ಹೆಚ್ಚು ಓದಿ (Reed More) ಮೇಲೆ ಕ್ಲಿಕ್ ಮಾಡಿಕೊಂಡು ಲೇಟೆಸ್ಟ್ ನ್ಯೂಸ್ ಪಟ್ಟಿಯು ಕಾಣಬಹುದಾಗಿದೆ.
* ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಅಧಿಸೂಚನೆ, ಅರ್ಹತಾ ಪಟ್ಟಿ ಮತ್ತು ದಾಖಲೆ ಪರಿಶೀಲನೆ ಆಯ್ಕೆ ಮಾಡಿಕೊಳ್ಳಿ
* ನಂತರ ತೆರೆದುಕೊಳ್ಳಲಿರುವ ಪರದೆಯಲ್ಲಿ 1:3 ಅರ್ಹತಾ ಪಟ್ಟಿ ಕಾಣಲಿದೆ. ಆ ಪಿಡಿಎಫ್ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಬೇಕು.
* ನಂತರ ಕಾಣುವ ಅರ್ಹತಾ ಪಟ್ಟಿ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಅಭ್ಯರ್ಥಿಗಳ ಅರ್ಹತಾ ಪಟ್ಟಿ ಕಾಣುತ್ತದೆ. ಅದನ್ನು ಮುಂದಿನ ಮಾಹಿತಿಗಾಗಿ ಡೌನ್‌ಲೋಡ್ ಮಾಡಿಕೊಳ್ಳಿ.
* ಇದೇ ವೆಬ್‌ಸೈಟ್‌ನಲ್ಲಿ ಶೀಘ್ರವೇ ದಾಖಲಾತಿ ಪರಿಶೀಲನೆ ಯಾವಾಗ ಎಂದು ತಿಳಿಸಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ..
KFCSC ಹುದ್ದೆವಾರು ಪಟ್ಟಿ ಇಲ್ಲಿದೆ
ಸಹಾಯಕ ವ್ಯವಸ್ಥಾಪಕರು : 10
ಗರುಣಮಟ್ಟ ನಿರೀಕ್ಷಕರು: 23
ಹಿರಿಯ ಸಹಾಯಕರು (ಲೆಕ್ಕ): 33
ಹಿರಿಯ ಸಹಾಯಕರು:57
ಕಿರಿಯ ಸಹಾಯಕರು :263
ಒಟ್ಟು ಹುದ್ದೆಗಳೂ: 386 ಹುದ್ದೆಗಳು.












Click it and Unblock the Notifications