1064 ಶುಶ್ರೂಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಇಎ
ಬೆಂಗಳೂರು, ನವೆಂಬರ್ 02 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕರ್ನಾಟಕ ಸರ್ಕಾರಿ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ ಶುಶ್ರೂಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 2, 2015. 1064 ಶುಶ್ರೂಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಇಎ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಅಭ್ಯರ್ಥಿಗಳು ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕು. ನವೆಂಬರ್ 2ರ ಸೋಮವಾರದಿಂದ ಡಿಸೆಂಬರ್ 2ರ ಸಂಜೆ 5.30ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.

ಎಲ್ಲಿ ಎಷ್ಟು ಹುದ್ದೆ? : ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 204, ಕಾರವಾರದಲ್ಲಿ 23, ಕೊಪ್ಪಳದಲ್ಲಿ 120, ಕೊಡಗಿನಲ್ಲಿ 28, ಗದಗದಲ್ಲಿ 61, ಗುಲಬರ್ಗದಲ್ಲಿ 27, ಚಾಮರಾಜನಗರದಲ್ಲಿ 40, ಹುಬ್ಬಳ್ಳಿಯಲ್ಲಿ 172, ಹಾಸನದಲ್ಲಿ 126, ಬೀದರ್‌ನಲ್ಲಿ 167, ಇನ್‌ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಜಲಿ ಬೆಂಗಳೂರು 56, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ 40 ಸೇರಿ 1064 ಹುದ್ದೆಗಳು ಖಾಲಿ ಇವೆ. [ನೇಮಕಾತಿ ಆದೇಶ ಓದಿ]
ವಿದ್ಯಾರ್ಹತೆ : ಬಿ.ಎಸ್.ಸಿ. ಶುಶ್ರೂಷಕರಿಗೆ : ಅಂಗೀಕೃತ ಸಂಸ್ಥೆಯಿಂದ ಶುಶ್ರೂಷಕ ವಿಭಾಗದಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯ ಶುಶ್ರೂಷಕರಿಗೆ : ಅಂಗೀಕೃತ ಸಂಸ್ಥೆಯಿಂದ ಕನಿಷ್ಠ ಮೂರು ವರ್ಷಗಳ ಸಾಮಾನ್ಯ ಶುಶ್ರೂಷಕ ಕೋರ್ಸ್ ಮತ್ತು ಕನಿಷ್ಠ ಆರು ತಿಂಗಳ ಮಿಡ್ ವೈಫರಿ/ಸೈಕ್ಯಾಟ್ರಿಕ್ ಕೋರ್ಸ್ ಪಡೆದಿರಬೇಕು. ಈ ಎರಡೂ ಕೋರ್ಸ್ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು. [ಅರ್ಜಿ ಸಲ್ಲಿಸಲು ವಿಳಾಸ]
ವಯೋಮಿತಿ : ಸಾಮಾನ್ಯ ಅರ್ಹತೆ 35 ವರ್ಷಗಳು, ಪ್ರವರ್ಗ 2ಎ/2ಬಿ/3ಎ/3ಬಿ 38 ವರ್ಷಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1 40 ವರ್ಷಗಳು.
ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ ಮತ್ತು ಇತರ ಪ್ರವರ್ಗಗಳು 500 ರೂ., ಪ.ಜಾ/ಪ.ಪಂ/ಪ್ರವರ್ಗ 1 300 ರೂ.ಗಳು. http://kea.kar.nic.in/staffnurse.htm ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ.












Click it and Unblock the Notifications