KEA AO Recruitment: ಕೃಷಿ ಇಲಾಖೆಯಲ್ಲಿ ಬರೋಬ್ಬರಿ 890 ಹುದ್ದೆಗಳ ಭರ್ತಿ, ಮೇ 10ರೊಳಗೆ ಅರ್ಜಿ ಸಲ್ಲಿಸಿ

ಬೆಂಗಳೂರು: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕೃಷಿ ಇಲಾಖೆಯ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆ ಇತರ ಪ್ರಕ್ರಿಯೆಯ ಹೊಣೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಹಿಸಿಕೊಂಡಿದೆ. ಕೆಇಎ ಅಧಿಕೃತ ವೆಬ್‌‌ಸೈಟ್‌ನಲ್ಲಿ ಕೃಷಿ ಇಲಾಖೆಯ ನೇಮಕಾತಿ ಅಧಿಸೂಚನೆ, ಪಠ್ಯಕ್ರಮ, ಹುದ್ದೆಗಳ ವರ್ಗೀಕರಣಕ್ಕೆ ಸಂಬಂಧಿಸಿದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಇದೀಗ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಇಲಾಖೆಯ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ತಯಾರಿ ನಡೆಸುತ್ತಿರುವ ಕೃಷಿ ಪದವೀಧರರು ಗಮನಿಸುವಂತೆ ತಿಳಿಸಲಾಗಿದೆ.

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಶುರುವಾಗಿದೆ. ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಇಲಾಖೆಯ ಒಟ್ಟು 890 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೇ 10ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಅವರು ತಿಳಿಸಿದ್ದಾರೆ.

KEA AO Recruitment 2026

ಹುದ್ದೆಗಳ ವರ್ಗೀಕರಣ, ಪರೀಕ್ಷೆ ವೇಳಾಪಟ್ಟಿ

ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದ ಸೇರಿ ಎಲ್ಲರಿಗೂ ಅರ್ಜಿ ಸಲ್ಲಿಸಲು ಮೇ 10 ಕೊನೆ ದಿನ. ಶುಲ್ಕ ಪಾವತಿಗೆ ಮೇ 12 ಕೊನೆಯ ದಿನವಾಗಿದೆ. ಉಳಿಕೆ ಮೂಲ ವೃಂದದ ಗ್ರೂಪ್- ಬಿ ಗೆ ಸೇರಿದ ಒಟ್ಟು 632 ಹುದ್ದೆಗಳಿಗೆ (ಅದರಲ್ಲಿ81 ಕೃಷಿ ಅಧಿಕಾರಿ ಹಾಗೂ 551 ಸಹಾಯಕ ಕೃಷಿ ಅಧಿಕಾರಿ ಹುದ್ದೆ ಸೇರಿ) ಜೂನ್ 7ರಂದು ಪರೀಕ್ಷೆ ನಡೆಯಲಿವೆ.

ಅದೇ ರೀತಿ ಕಲ್ಯಾಣ ಕರ್ನಾಟಕ ವೃಂದದ ಒಟ್ಟು 258 ಹುದ್ದೆಗಳಿಗೆ (40 ಕೃಷಿ ಅಧಿಕಾರಿ ಹಾಗೂ 218 ಸಹಾಯಕ ಕೃಷಿ ಅಧಿಕಾರಿ) ಜೂನ್ 14ರಂದು ಲಿಖಿತ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿರುತ್ತದೆ. ಎರಡೂ ವೃಂದದವರಿಗೆ ಕನ್ನಡ ಪರೀಕ್ಷೆ ಜೂನ್ 6ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಹತೆ, ಮಾಸಿಕ ವೇತನ ವಿವರ

* ಕೃಷಿ ಅಧಿಕಾರಿ (12 ಹುದ್ದೆಗಳು): ಮಾಸಿಕ ವೇತನ 69,250-1,34,200 ರೂಪಾಯಿ, ಈ ಹುದ್ದೆಗಳಿಗೆ ಕೃಷಿಯಲ್ಲಿ ಬಿಎಸ್‌ಸಿ/ಬಿಎಸ್‌ಸಿ ಆನರ್ಸ್ ವಿದ್ಯಾರ್ಹತೆ ಇರಬೇಕು

* ಸಹಾಯಕ ಕೃಷಿ ಅಧಿಕಾರಿ (469 ಹುದ್ದೆಗಳ): 65,950-1,24,900 ರೂಪಾಯಿ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಕೃಷಿಯಲ್ಲಿ ಬಿಎಸ್‌ಸಿ/ಬಿಎಸ್‌ಸಿ ಆನರ್ಸ್, ಬಿಟೆಕ್ (ಜೈವಿಕ ತಂತ್ರಜ್ಞಾನ, ಆಹಾರ ಮತ್ತು ತಂತ್ರಜ್ಞಾನ), ಕೃಷಿ ಮಾರುಕಟ್ಟೆ ಸಹಕಾರ/ಅಗ್ರಿ ಬಿಸಿನೆಸ್ ಮ್ಯಾನೇಜ್ ಮೆಂಟ್/ಅಗ್ರಿ ಇಂಜಿನಿಯರಿಂಗ್/ಅಥವಾ ಬಿಎಸ್‌ಸಿ ಮುಗಿಸಿರಬೇಕೆಂದು ತಿಳಿಸಲಾಗಿದೆ.

ವಯೋಮಿತಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 40 ತುಂಬಿರಬೇಕು. ಜಾತಿ ಮೀಸಲಾತಿಗೆ ಅನುಗುಣವಾಗಿ ಒಬಿಸಿ, ಎಸ್‌ಸಿ,ಎಸ್‌ಟಿ ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ ವಿವರ

ಅರ್ಜಿ ಶುಲ್ಕವಾಗಿ ಸಾಮಾನ್ಯ ಮತ್ತು 2ಎ, 2ಬಿ, 3ಎ, 3ಬಿ ಪ್ರವರ್ಗದ ಅಭ್ಯರ್ಥಿಗಳಿಗೆ 750 ರೂ. ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ. ಶುಲ್ಕವಿದೆ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಹುದ್ದೆಗಳ ಆಯ್ಕೆಯು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆಯನ್ನು ಆಧರಿಸಿ ನಡೆಯಲಿದೆ. ಪರೀಕ್ಷಾ ಪಠ್ಯಕ್ರಮ ಮತ್ತು ವೇಳಾಪಟ್ಟಿಯನ್ನು ಕೆಇಎ ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ನಲ್ಲಿ ಪ್ರಕಟಿಸಲಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ, ಇತರೆ ಮಾನದಂಡಗಳು ಮತ್ತು ಪ್ರಮುಖ ಸೂಚನೆಗಳಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೂ ಮೇಲೆ ತಿಳಿಸಿ ವಿದ್ಯಾರ್ಹತೆ, ವಯೋಮಿತಿ, ಮಾಸಿಕ ವೇತನ ಒಂದೇ ಆಗಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+