1000 ಗ್ರಾಮ ಆಡಳಿತಾಧಿಕಾರಿ ನೇಮಕಾತಿ: ಲಿಖಿತ ಪರೀಕ್ಷೆ ಮಾಹಿತಿ
ಬೆಂಗಳೂರು, ಮೇ 25: ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಕರ್ನಾಟಕದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದಿದೆ. ವಿವಿಧ ಇಲಾಖೆಗಳ ನೇಮಕಾತಿಯನ್ನು ನಡೆಸುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 1,000 ಗ್ರಾಮ ಆಡಳಿತ ಅಧಿಕಾರಿ ಸೇರಿ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಘೋಷಣೆ ಮಾಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ವಿವಿಧ ನೇಮಾಕಾತಿಗಳಿಗೆ ಅರ್ಜಿ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಪರೀಕ್ಷೆಗಳಿಗೆ ತಯಾರಾಗಲು ಅನುಕೂಲವಾಗುವಂತೆ ತಾತ್ಕಾಲಿಕ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ.

ಯಾವ-ಯಾವ ನೇಮಕಾತಿ?: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 17/8/2024ರ 36 ಹುದ್ದೆಗಳ ನೇಮಕಾತಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೇಮಕಾತಿ ದಿನಾಂಕ 5/2/2024ರ 64 ಹುದ್ದೆಗಳು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 3/4/2024ರ ಅಧಿಸೂಚನೆ 2500 ಹುದ್ದೆಗಳು. ಪೊಲೀಸ್ ಇಲಾಖೆಯ 3/3/2021ರ ಅಧಿಸೂಚನೆ 402 ಹುದ್ದೆಗಳು ಮತ್ತು ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಅಧಿಸೂಚನೆ 21/2/2024ರ 1000 ಹುದ್ದೆಗಳ ನೇಮಕಾತಿಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (ಅನ್ವಯಿಸುವ ಹುದ್ದೆಗಳಿಗೆ) ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ದಿನಾಂಕಗಳು (ತಾತ್ಕಾಲಿಕ)
* ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ. (ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಕ. ರಾ. ಸಾ. ಪೇದೆ, ಕುಶಲ ಕರ್ಮಿ, ತಾಂತ್ರಿಕ ಸಹಾಯಕ) ನೇಮಕಾತಿ. ದಿನಾಂಕ 17/8/2024ರ ಅಧಿಸೂಚನೆ 36 ಹುದ್ದೆಗಳು. ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 12/7/2024, 13/7/2024 ಮತ್ತು 14/7/2024.
* ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ. ಸಹಾಯಕ ಇಂಜಿನಿಯರ್ (ಸಿವಿಲ್), ಪ್ರಥಮ ದರ್ಜೆ ಲೆಕ್ಕ ಸಹಾಯಕರು ಗ್ರೂಪ್-ಸಿ) ನೇಮಕಾತಿ. ಅಧಿಸೂಚನೆ ದಿನಾಂಕ 5/2/2024, 64 ಹುದ್ದೆಗಳು. ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 11/8/2024.
* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ). ನಿರ್ವಾಹಕ ದರ್ಜೆ-3 ಮೇಲ್ವಿಚಾರಕೇತರ). ಅಧಿಸೂಚನೆ ದಿನಾಂಕ 3/4/2024. 2500 ಹುದ್ದೆಗಳು. ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 1/9/2024.
* ಪೊಲೀಸ್ ಇಲಾಖೆ. ಪಿಎಸ್‌ಐ. ಅಧಿಸೂಚನೆ ದಿನಾಂಕ 3/3/2021. 402 ಹುದ್ದೆಗಳು. ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 22/9/2024.
PSI (402 ಹುದ್ದೆ), VAO (1000) ಸೇರಿದಂತೆ ಇತರ ಪರೀಕ್ಷೆಗಳ ತಾತ್ಕಾಲಿಕ ವೇಳಪಟ್ಟಿಯನ್ನು ಪ್ರಕಟಿಸಲಾಗಿದೆ.
— KEA (@KEA_karnataka) May 24, 2024
ಈ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು ಎಂದು ಕೆಇಎ ಇ.ಡಿ ಹೆಚ್ ಪ್ರಸನ್ನ ತಿಳಿಸಿದ್ದಾರೆ.@CMofKarnataka @drmcsudhakar #psi402 #vao #examdates pic.twitter.com/gzyXuO1Ns9
* ಕಂದಾಯ ಇಲಾಖೆ. ಗ್ರಾಮ ಆಡಳಿತಾಧಿಕಾರಿ ಹುದ್ದೆ. ಅಧಿಸೂಚನೆ ದಿನಾಂಕ 21/2/2024. 1000 ಹುದ್ದೆಗಳು. ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ 27/10/2024.












Click it and Unblock the Notifications