Teacher Recruitment; ಶಿಕ್ಷಕರ ಸ್ಥಳ ನಿಯೋಜನೆ ಮಾಹಿತಿ
ಬೆಂಗಳೂರು, ನವೆಂಬರ್ 19: 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ಉಪ ನಿರ್ದೇಶಕರ ಕಛೇರಿಯಲ್ಲಿ ವರದಿ ಮಾಡಿಕೊಳ್ಳುವುದು ಮತ್ತು ಶಿಕ್ಷಕರುಗಳಿಗೆ ಶಾಲೆಗಳಿಗೆ ನಿಯೋಜಿಸುವ ಬಗ್ಗೆ ಜ್ಞಾಪನಾ ಪತ್ರವೊಂದನ್ನು ಹೊರಡಿಸಲಾಗಿದೆ.
ಬಿ. ಬಿ. ಕಾವೇರಿ, ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಈ ಪತ್ರ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ಹುದ್ದೆಗೆ ಆಯ್ಕೆಯಾಗಿ ಉಪನಿರ್ದೇಶಕರ ಕಛೇರಿಯನ್ನು ಆಯ್ಕೆ ಮಾಡಿಕೊಂಡು ವರದಿ ಮಾಡಿಕೊಂಡಿರುವ ಶಿಕ್ಷಕರುಗಳಿಗೆ ಶಾಲೆಗೆ ನಿಯೋಜನೆಗೊಳಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಜ್ಞಾಪನಾ ಪತ್ರದ ವಿವರ; 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ಹುದ್ದೆಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಸಂಬಂಧ ಸೂಚನೆಗಳನ್ನು ನೀಡಲಾಗಿತ್ತು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೆಲವೊಂದು ಜಿಲ್ಲೆಗಳಲ್ಲಿ 'ಸಿ' ವಲಯದಲ್ಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದ ಪ್ರಯುಕ್ತ ಅಂತಹ ಶಿಕ್ಷಕರುಗಳಿಗೆ ಆಯಾ ವ್ಯಾಪಿಯ ಉಪನಿರ್ದೇಶಕರ ಕಛೇರಿ (ಆಡಳಿತ)/ ಡಯಟ್ ಕಛೇರಿಯನ್ನು ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಅದರಂತೆ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರುಗಳು ಉನಿರ್ದೇಶಕರ ಕಛೇರಿ (ಆಡಳಿತ)ಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಶಿಕ್ಷಕರನ್ನು ತಕ್ಷಣವೇ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿನ ಖಾಲಿ ಹುದ್ದೆಗಳಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಿಯೋಜಿಸುವ ಸಂಬಂಧ ಕ್ರಮ ವಹಿಸಲು ಸೂಚಿಸಲಾಗಿದೆ.
ಸೂಚನೆಗಳು
* ಸದರಿ ನಿಯೋಜನೆಯು ತಾತ್ಕಾಲಿಕವಾಗಿದ್ದು 'ಸಿ' ವಲಯದಲ್ಲಿ ಖಾಲಿ ಹುದ್ದೆಯನ್ನು ಸ್ಥಳ ನಿಯುಕ್ತಿವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.
* ನಿಯೋಜನೆಗೆ ಶಾಲೆಯನ್ನು ಆಯ್ಕೆ ಮಾಡುವಾಗ ಕಡ್ಡಾಯವಾಗಿ ವ್ಯಾಪ್ತಿಯಲ್ಲಿನ ಅತಿ ಹೆಚ್ಚು ಮಕ್ಕಳ ಸಂಖ್ಯೆ ಇರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪ್ರಥಮ ಆದ್ಯತೆಯನ್ನು ನೀಡುವುದು.
* ಬಹುಮಾಧ್ಯಮ, ದ್ವಿ-ಭಾಷಾ ಮಾಧ್ಯಮ ಶಾಲೆಗಳು/ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಗತ್ಯತೆಗನುಸಾರವಾಗಿ ನಿಯೋಜಿಸುವುದು.
* ಹೀಗೆ ನಿಯೋಜನೆ ಮಾಡುವಾಗ ಹಾಲಿ ಕರ್ತವ್ಯ ನಿರತ ಶಿಕ್ಷಕರುಗಳು ವಿವಿಧ ಕಾರಣಗಳಿಂದಾಗಿ ಧೀರ್ಘಾವಧಿ ರಜೆ ಹಾಗೂ ಇನ್ನಿತರೆ ಕಾರಣಗಳಿಂದ ರಜೆ ಪಡೆದ ಶಾಲೆಗಳಿಗೆ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನಿಸಿ ನಿಯೋಜಿಸುವುದು.
* ಹೊಸದಾಗಿ ನೇಮಕಗೊಂಡ ಶಿಕ್ಷಕರು ನಿಯೋಜನೆ ಸಂಬಂಧ ಯಾವುದೇ ಪ್ರಭಾವ (ಶಿಫಾರಸ್ಸು ತಂದಲ್ಲಿ ಕರ್ನಾಟಕ ನಾಗರೀಕ ಸೇವಾ ನಡೆತ ನಿಯಮಗಳು-2021 ರನ್ವಯ ಸೂಕ್ತ ಶಿಸ್ತು ಕ್ರಮ ಜರುಗಿಸುವುದು.
* ಹೊಸದಾಗಿ ನೇಮಕವಾದ ಶಿಕ್ಷಕರ ಪಾಠಬೋಧನೆಯ ಕಾರ್ಯ ವೈಖರಿಯನ್ನು ವ್ಯಾಪ್ತಿಯ ಕ್ಷೇತ್ರಶಿಕ್ಷಣಾಧಿಕಾರಿಗಳು ಕಾಲಕಾಲಕ್ಕೆ ನಿಗಾವಹಿಸತಕ್ಕದ್ದು, ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರುಗಳು ಕಡ್ಡಾಯವಾಗಿ ಕಾಲಕಾಲಕ್ಕೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸತಕ್ಕದ್ದು.
* ಈ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಹೊಸದಾಗಿ ನೇಮಕವಾದ ಶಿಕ್ಷಕರ ಆದೇಶವನ್ನು ಪರಿಶೀಲಿಸಿಕೊಂಡು ಕರ್ತವ್ಯಕ್ಕೆ ಹಾಜರಾದ ದಿನಾಂಕ ಮತ್ತು ನಿಯೋಜಿಸಿದ ದಿನಾಂಕ ಮತ್ತು ಹಾಜರಾತಿಯನ್ನು ಕಡ್ಡಾಯವಾಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ನಿರ್ವಹಿಸತಕ್ಕದ್ದು, ಈ ಸಂಬಂಧ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ದಾಖಲೆಯನ್ನು ಸಂರಕ್ಷಿಸತಕ್ಕದ್ದು ಈ ಕುರಿತಂತೆ ವ್ಯಾಪ್ತಿಯ ಉಪನಿರ್ದೇಶಕರು(ಆಡಳಿತ) ಇವರಿಗೆ ವರದಿಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ಸಲ್ಲಿಸುವುದು.
* ಉಪನಿರ್ದೇಶಕರ ಕಛೇರಿ/ ಡಯಟ್ ಕಛೇರಿಗೆ ಸ್ಥಳ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರಿಗೆ ಪ್ರಸ್ತುತ ನಿಯೋಜಿಸುವ ಆದೇಶವು ತಾತ್ಕಾಲಿಕವಾಗಿರುತ್ತದೆ. ಸದರಿ ನಿಯೋಜಿತ ಶಾಲೆಯನ್ನು ಮೂಲ ಶಾಲೆಯೆಂದು ಭಾವಿಸತಕ್ಕದ್ದಲ್ಲ ಎಂಬುದನ್ನು ಶಿಕ್ಷಕರುಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಸ್ಪಷ್ಟಪಡಿಸತಕ್ಕದ್ದು. ಶಿಕ್ಷಕರ ನಿಯೋಜನೆಸಂಬಂಧ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆವಹಿಸತಕ್ಕದ್ದು.
ಶಿಕ್ಷಕರ ನಿಯೋಜನೆ ಕುರಿತು ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಇವರುಗಳಿಗೆ, ರಾಜ್ಯದ ಎಲ್ಲಾ ಡಯಟ್ ಪ್ರಾಂಶುಪಾಲರು ಹಾಗೂ ಪದಮಿನಿತ್ತ ಉಪನಿರ್ದೇಶಕರು (ಅಭಿವೃದ್ಧಿ), ಶಾಲಾ ಶಿಕ್ಷಣ ಇಲಾಖೆ ಇವರುಗಳಿಗೆ ಅಗತ್ಯ ಅನುಪಾಲನೆಗಾಗಿ ಪ್ರತಿಯನ್ನು ಕಳಿಸಲಾಗಿದೆ.












Click it and Unblock the Notifications