ಕರವೇ ಐಟಿ ಘಟಕದಿಂದ 3ನೇ ಉದ್ಯೋಗ ಮಾರ್ಗದರ್ಶನ ಶಿಬಿರ

ಬೆಂಗಳೂರು, ಜು.01: ಕನ್ನಡಿಗ ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಎರಡು ಬಾರಿ "ಉದ್ಯೋಗ ಮಾರ್ಗದರ್ಶನ ಶಿಬಿರ"ವನ್ನು ಯಶಸ್ಚಿಯಾಗಿ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ "ಐಟಿ ಘಟಕ" ಈಗ ಮೂರನೇ ಬಾರಿಗೆ ಶಿಬಿರ ಹಮ್ಮಿಕೊಂಡಿದೆ.

ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಾಡು ನುಡಿಯ ವಿಚಾರವಾಗಿ ಕಳೆದ 15 ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವುದು ನಾಡಿನ ಜನತೆಗೆ ತಿಳಿದಿದೆ.

ಬೆಂಗಳೂರು ಮಹಾನಗರದಲ್ಲಿ ಸುಮಾರು ಎರಡು ದಶಕಗಳ ಹಿಂದೆ ಐಟಿ ಉದ್ಯಮವು ಸ್ಥಾಪನೆಯಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ದೇಶದ ವಿವಿಧ ಭಾಗಗಳಿಂದ ಜನರು ಐಟಿ ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ. [ಕನ್ನಡಿಗರಿಗೆ ಉದ್ಯೋಗ ಸಿಗಲಿ, ಕರವೇ ಮೆರವಣಿಗೆ]

ಈ ಹೊತ್ತಿನಲ್ಲಿ ರಾಜ್ಯದ ನಾನ ಭಾಗಗಳಲ್ಲಿ ವಿದ್ಯಾಭ್ಯಾಸ ಪಡೆದು ತಮ್ಮ ಅಭಿರುಚಿಗೆ ಸರಿಹೊಂದುವ ಐಟಿ ಉದ್ಯೋಗವನ್ನು ಹುಡುಕುತ್ತಿರುವ ಕನ್ನಡಿಗರಿಗೆ "ಉದ್ಯೋಗ ಮಾರ್ಗದರ್ಶನ ಶಿಬಿರ"ದ ಮೂಲಕ ಮಾರ್ಗದರ್ಶನವನ್ನು ನೀಡುವುದು ಕರ್ನಾಟಕ ರಕ್ಷಣಾ ವೇದಿಕೆಯ "ಐಟಿ ಘಟಕ"ದ ಧ್ಯೇಯೋದ್ದೇಶಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ, ಐಟಿ ಘಟಕದ ಉಪಾಧ್ಯಕ್ಷರಾದ ಅಮರನಾಥ್ ಶಿವಶಂಕರ್ ಹೇಳಿದ್ದಾರೆ.

Karave IT guidance camp

ಈ ನಿಟ್ಟಿನಲ್ಲಿ ಜನವರಿ 10, 2015 ರಂದು ಮೊದಲ ಉದ್ಯೋಗ ಮಾರ್ಗದರ್ಶನ ಶಿಬಿರ ಮತ್ತು ಮಾರ್ಚ್ 14, 2015 ರಂದು ಎರಡನೇ ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಿದ್ದೆವು. ಅದು ಬಹಳ ಯಶಸ್ವಿಯಗಿ ನಡೆಯಿತು. ಇದೀಗ ಮೂರನೇ ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿದೆ.

ವಿವರಗಳು ಹೀಗಿವೆ:
ದಿನಾಂಕ: ಜುಲೈ 12, 2015, ಭಾನುವಾರ
ಸ್ಥಳ: ಮನೋರಮಾ ಹಾಲ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು
ಸಮಯ: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ
ನೊಂದಣಿ: ಮುಂಗಡವಾಗಿ ನೊಂದಾಯಿಸಿಕೊಂಡವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತದೆ. ನೊಂದಾಯಿಸಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಐಟಿ ಘಟಕದ ಧ್ಯೇಯೋದೇಶಗಳು:
1. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮಾರ್ಗದರ್ಶನ ನೀಡುವುದು.
2. ಉದ್ಯೋಗಾಕಾಂಕ್ಷಿಗಳಿಗೆ ಸಹಕಾರಿಯಾಗುವಂತಹ ಉದ್ಯೋಗ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು.
3. ಐಟಿ ಉದ್ಯೋಗ ಅರಸಿ ನಾಡಿಗೆ ಹಲವು ಪರಭಾಷಿಕರು ಬರುತ್ತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಲು "ಕನ್ನಡ ಕಲಿ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಇದು ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕವು ಕನ್ನಡಿಗರ ಅನುಕೂಲಕ್ಕೋಸ್ಕರ ಉಚಿತವಾಗಿ ಆಯೋಜಿಸುತ್ತಿರುವ ಶಿಬಿರವಾಗಿದೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+