ಕರ್ನಾಟಕ ಕಾರಾಗೃಹಗಳ ಇಲಾಖೆ ನೇಮಕಾತಿ, 662 ಹುದ್ದೆಗಳು
ಬೆಂಗಳೂರು, ಫೆಬ್ರವರಿ 22 : ಕರ್ನಾಟಕ ರಾಜ್ಯ ಕಾರಾಗೃಹಗಳ ಇಲಾಖೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 9/3/2019 ಕೊನೆಯ ದಿನವಾಗಿದೆ.
ಕರ್ನಾಟಕ ರಾಜ್ಯ ಕಾರಾಗೃಹಗಳ ಇಲಾಖೆ 80/ನೇಮಕಾತಿ-2/2018-19 ಆದೇಶದ ಅನ್ವಯ 662 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಇವುಗಳಲ್ಲಿ 12 ಜೈಲರ್ ಮತ್ತು 650 ವಾರ್ಡರ್ ಹುದ್ದೆಗಳು.
ಜೈಲರ್ ಮತ್ತು ವಾರ್ಡರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಕಾತಿ ಆದೇಶವನ್ನು ಸ್ಪಷ್ಟವಾಗಿ ಓದಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು 9/3/2019ರ ಸಂಜೆ 6 ಗಂಟೆಯ ತನಕ ಅವಕಾಶವಿದೆ. ಅಂಚೆ ಕಚೇರಿಯಲ್ಲಿ ಶುಲ್ಕವನ್ನು ಪಾವತಿಸಲು 11/3/2019 ಕೊನೆಯ ದಿನಾಂಕವಾಗಿದೆ. ನೇಮಕಾತಿ ಆದೇಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆಯ ವಿವರ
* ಜೈಲರ್ ಹುದ್ದೆಗೆ ಕನಿಷ್ಠ ಯಾವುದಾದರೂ ಒಂದು ಪದವಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಹೊಂದಿರತಕ್ಕದ್ದು.
* ವಾರ್ಡರ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಹೊಂದಿರತಕ್ಕದ್ದು.

ವಯೋಮಿತಿ ವಿವರಗಳು
ಜೈಲರ್ ಮತ್ತು ವಾರ್ಡರ್ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಕನಿಷ್ಠ ವಯೋಮಿತಿ 20 ವರ್ಷಗಳು. ಸಾಮಾನ್ಯ ಅಭ್ಯರ್ಥಿಗಳಿಗೆ 26 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 28 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕದ ವಿವರ
* ಸಾಮಾನ್ಯ ವರ್ಗ, ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 250 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 100 ಶುಲ್ಕ ನಿಗದಿ ಮಾಡಲಾಗಿದೆ.

ಪ್ರಮುಖ ದಿನಾಂಕಗಳು
* ಫೆ.21ರಿಂದ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
* ಮಾರ್ಚ್ 9/3/2019ರ ಸಂಜೆ 6 ಗಂಟೆ ತನಕ ಅರ್ಜಿ ಸಲ್ಲಿಸಬಹುದಾಗಿದೆ.
* ಅರ್ಜಿ ಶುಲ್ಕವನ್ನು ಪಾವತಿ ಮಾಡಲು 11/3/2019 ಕೊನೆಯ ದಿನವಾಗಿದೆ.












Click it and Unblock the Notifications