ಕೆಪಿಸಿಎಲ್‌ ಅಪ್ರೆಂಟಿಸ್ ತರಬೇತಿ: ವೇತನ, ಅರ್ಹತೆ ವಿವರಗಳು

ಬಳ್ಳಾರಿ, ಜನವರಿ 14: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಬಳ್ಳಾರಿಯಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆದಿದೆ. ಅಭ್ಯರ್ಥಿಗಳು ಜನವರಿ 20ರ ಸಂಜೆ 5 ಗಂಟೆಗೆ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅದರ ಒಂದು ಪ್ರತಿಯನ್ನು ದಾಖಲೆಗಳೊಂದಿಗೆ ಕಚೇರಿಗೆ ಲಕೋಟೆಯಲ್ಲಿ ಕಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಕುಡತಿನಿಯಲ್ಲಿರುವ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ನಿಗದಿತ ಮಾಸಿಕ ವೇತನದೊಂದಿಗೆ ಒಂದು ವರ್ಷದ ಅವಧಿಯ ಶಿಶಿಕ್ಷು ತರಬೇತಿಯನ್ನು ನೀಡಲಾಗುತ್ತದೆ. ಅರ್ಹ ಇಂಜಿನಿಯರಿಂಗ್, ಡಿಪ್ಲೋಮಾ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Karnataka Power Corporation Limited Apprenticeship Training Details In Ballari

ಆಸಕ್ತ ಅಭ್ಯರ್ಥಿಗಳು https://nats.education.gov.in ಈ ವೆಬ್‌ಸೈಟ್‌ನಲ್ಲಿ KARNATAKA POWER CORPORATION LIMITED [BTPS] ಎಸ್ಟಾಬ್ಲಿಷ್‌ಮೆಂಟ್ [SKABLS000001] ಗೆ ಜನವರಿ 20ರ ಸಂಜೆ 5 ಗಂಟೆಯೊಳಗಾಗಿ ತಮ್ಮ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ಆಯಾ ವೃತ್ತಿಗಳಲ್ಲೇ ಅರ್ಜಿ ಸಲ್ಲಿಸಬೇಕು.

ವೃತ್ತಿ ಸಂಖ್ಯೆ ಮತ್ತು ಶಿಷ್ಯವೇತನ: ಶೈಕ್ಷಣಿಕ ವರ್ಷ 2021 ಮತ್ತು ನಂತರದಲ್ಲಿ ಗ್ರಾಜುಯೇಟ್ (ಇಂಜಿನಿಯರಿಂಗ್), ಡಿಪ್ಲೋಮಾ ಇಂಜಿನಿಯರಿಂಗ್ ಉತ್ತೀರ್ಣ ಹೊಂದಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಬಿಇ ಸಿವಿಲ್-1, ಬಿಇ ಇ&ಇ-2, ಬಿಇ ಮೆಕ್ಯಾನಿಕಲ್-3, ಬಿಇ ಇನ್‌ಸ್ಟ್ರುಂಮೆಂಟೇಶನ್-1, ಬಿಇ ಕಂಪ್ಯೂಟರ್ ಸೈನ್ಸ್-1 ಹುದ್ದೆಗಳಿವೆ. ಮಾಸಿಕ ಶಿಷ್ಯ ವೇತನ 12,000 ರೂ.ಗಳು.

ಡಿಪ್ಲೋಮಾ ಸಿವಿಲ್-1, ಡಿಪ್ಲೋಮಾ ಇ&ಇ-1, ಡಿಪ್ಲೋಮಾ ಮೆಕ್ಯಾನಿಕಲ್-1, ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್-1, ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್ಸ್-1 ಹುದ್ದೆ. ಮಾಸಿಕ ಶಿಷ್ಯ ವೇತನ 10,000 ರೂ.ಗಳು.

ಅಭ್ಯರ್ಥಿಯ ಹೆಸರು, ಆಧಾರ್ ಕಾರ್ಡ್ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದೈಹಿಕಾ ಕ್ಷಮತಾ ಪತ್ರ, ಇತ್ತೀಚಿನ 4 ಭಾವಚಿತ್ರ, ಈ ಮೊದಲು ಶಿಶಿಕ್ಷು ತರಬೇತಿ ಪಡೆದಿದ್ದಲ್ಲಿ ದಾಖಲೆಯ ವಿವರದ ಪ್ರತಿಯನ್ನು ಒದಗಿಸಬೇಕು.

ಅಭ್ಯರ್ಥಿಗಳು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ತಮ್ಮ ಸ್ವಂತ ಇ-ಮೇಲ್ ಐಡಿಯನ್ನು ಮಾತ್ರ ಅರ್ಜಿಯಲ್ಲಿ ಭರ್ತಿ ಮಾಡತಕ್ಕದ್ದು, ತರಬೇತಿಯ ಎಲ್ಲಾ ಪತ್ರ ವ್ಯವಹಾರವನ್ನು ನೀಡಿದಂತಹ ಇ-ಮೇಲ್ ಐಡಿ ಮುಖಾಂತರ ಮಾಡಲಾಗುತ್ತದೆ.

ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅದರ ಒಂದು ಪ್ರತಿಯನ್ನು ದಾಖಲೆಗಳೊಂದಿಗೆ ಕಚೇರಿಗೆ ಲಕೋಟೆಯ ಮೇಲೆ ಶಿಶಿಕ್ಷು ತರಬೇತಿಗಾಗಿ ಅರ್ಜಿ ಎಂದು ನಮೂದಿಸಿ ಸಲ್ಲಿಸತಕ್ಕದ್ದು. ಆಫ್‌ಲೈನ್ ಮೂಲಕ ಸಲ್ಲಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆನ್‌ಲೈನ್ ಅರ್ಜಿಗಳಲ್ಲಿ ಅಭ್ಯರ್ಥಿಗಳ ಮಾಹಿತಿಯು ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.

ಶಿಶಿಕ್ಷು ತರಬೇತಿಗಾಗಿ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಶಿಶಿಕ್ಷು ಅಧಿನಿಯಮದಂತೆ ಕನಿಷ್ಟ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಪ.ಜಾತಿ/ ಪ. ಪಂಗಡಕ್ಕೆ ಶಿಶಿಕ್ಷು ಕಾಯ್ದೆ ಪ್ರಕಾರ ಮೀಸಲಾತಿ ಇರುತ್ತದೆ. ನಿಗಮದ ಉದ್ಯೋಗಿಗಳ ಮಕ್ಕಳಿಗೆ ಶೇ.25 ರಷ್ಟು ಮೀಸಲಾತಿ ಇರುತ್ತದೆ.

ತರಬೇತಿಯ ಅವಧಿ ಮುಗಿದ ನಂತರ ಶಿಶಿಕ್ಷುಗಳನ್ನು ಕೂಡಲೇ ಬಿಡುಗಡೆಗೊಳಿಸಲಾಗುವುದು ಹಾಗೂ ಯಾವುದೇ ಸಂದರ್ಭದಲ್ಲಿ ಶಿಶಿಕ್ಷುಗಳನ್ನು ನಿಗಮದ ಖಾಯಂ ಸೇವೆಗೆ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕುಡತಿನಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಚೇರಿ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9901340029.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+