ಪೊಲೀಸ್ ಇಲಾಖೆಯಲ್ಲಿ 877 ಹುದ್ದೆ ಭರ್ತಿ, ಗೃಹ ಸಚಿವರ ಟ್ವೀಟ್

ಬೆಂಗಳೂರು, ಜೂನ್ 06 : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 2019-20 ರಿಂದ 2021-22ರ ತನಕ ಒಟ್ಟು 877 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಈ ಕುರಿತು ಗೃಹ ಸಚಿವ ಎಂ.ಬಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿದೆ. 2019-20ನೇ ಸಾಲಿನಲ್ಲಿ 292 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 2019-20, 2020-21 ಮತ್ತು 2021-22ನೇ ಸೇರಿ ಒಟ್ಟು 877 ಹುದ್ದೆಗಳನ್ನು ಭರ್ತಿ ನಡೆಯಲಿದೆ.

'ಕರ್ನಾಟಕ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಸೂಚಿಸಿದ್ದೇನೆ. ಸಾರ್ವಜನಿಕ ಸೇವೆ ಸಲ್ಲಿಸಲು ಉಪಯುಕ್ತವಾದ ಈ ಸದಾವಕಾಶವನ್ನು ಸದ್ಬಳಿಕೆ ಮಾಡಿಕೊಳ್ಳಲು ಕರ್ನಾಟಕದ ಯುವಕರನ್ನು ಪ್ರೋತ್ಸಾಹಿಸುತ್ತೇನೆ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

31/5/2019ರಂದು ಆರ್ಥಿಕ ಇಲಾಖೆ ಈ ಕುರಿತು ಆದೇಶಕ್ಕೆ ಒಪ್ಪಿಗೆ ನೀಡಿದೆ. 2019-20ನೇ ಸಾಲಿನಲ್ಲಿ ವಿವಿಧ ವರ್ಗದ 292 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಈ ಕುರಿತ ಅಧಿಸೂಚನೆ ಶೀಘ್ರದಲ್ಲಿಯೇ ಪ್ರಕಟವಾಗಲಿದೆ......

ಗೃಹ ಸಚಿವರ ಟ್ವೀಟ್

'ಕರ್ನಾಟಕ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಸೂಚಿಸಿದ್ದೇನೆ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಯಾವ-ಯಾವ ಹುದ್ದೆಗಳು?

ಯಾವ-ಯಾವ ಹುದ್ದೆಗಳು?

2019-20, 2020-21 ಮತ್ತು 2021-22ರ ತನಕ ಒಟ್ಟು 877 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳ ವಿವರ ಇಲ್ಲಿವೆ

* ಪಿಎಸ್‌ಐ (ಸಿವಿಲ್) 556
* ಪಿಎಸ್‌ಐ (ಸಿಎಆರ್/ಡಿಎಆರ್) 120
* ಎಸ್‌ಪಿಐ ಆರ್‌ಎಸ್‌ಐ (ಕೆಎಸ್ಆರ್‌ಪಿ) 120
* ಪಿಎಸ್‌ಐ (ವೈರ್‌ಲೆಸ್) 26
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 51
* ಪಿಎಸ್‌ಐ (ಸಿಐಡಿ) 4

ವರ್ಷವಾರು ಹುದ್ದೆಗಳ ಭರ್ತಿ

ವರ್ಷವಾರು ಹುದ್ದೆಗಳ ಭರ್ತಿ

* ಪಿಎಸ್‌ಐ (ಸಿವಿಲ್) 2019-20ರಲ್ಲಿ 200, 2020-21ರಲ್ಲಿ 200, 2021-22ರಲ್ಲಿ 156 ಹುದ್ದೆಗಳು ಭರ್ತಿಯಾಗಲಿವೆ.

* ಪಿಎಸ್‌ಐ (ಸಿಎಆರ್/ಡಿಎಆರ್) 2019-20ರಲ್ಲಿ 40, 2020-21ರಲ್ಲಿ 40, 2021-22ರಲ್ಲಿ 40 ಹುದ್ದೆ ಭರ್ತಿಯಾಗಲಿದೆ.

* ಎಸ್‌ಪಿಐ ಆರ್‌ಎಸ್‌ಐ (ಕೆಎಸ್ಆರ್‌ಪಿ) 2019-20ರಲ್ಲಿ 40, 2020-21ರಲ್ಲಿ 40, 2021-22ರಲ್ಲಿ 40 ಹುದ್ದೆ ಭರ್ತಿಯಾಗಲಿದೆ.

* ಪಿಎಸ್‌ಐ (ವೈರ್‌ಲೆಸ್) 2019-20ರಲ್ಲಿ 5, 2020-21ರಲ್ಲಿ 5, 2021-22ರಲ್ಲಿ 16 ಹುದ್ದೆಗಳ ಭರ್ತಿ

* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 2019-20ರಲ್ಲಿ 5, 2020-21ರಲ್ಲಿ 7, 2021-22ರಲ್ಲಿ 39 ಹುದ್ದೆ

* ಪಿಎಸ್‌ಐ (ಸಿಐಡಿ) 2019-20ರಲ್ಲಿ 2, 2021-22ರಲ್ಲಿ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ಆರ್ಥಿಕ ಇಲಾಖೆ ಮಂಜೂರಾತಿ ನೀಡಿರುವ ಹುದ್ದೆಗಳನ್ನು ಆಯಾ ಸಾಲಿನಲ್ಲಿ ಭರ್ತಿ ಮಾಡಿಕೊಳ್ಳಲು ವೆಚ್ಚವಾಗುವ ಮೊತ್ತ ಹಾಗೂ ಅಗತ್ಯವಿದ್ದರೆ ಕೆಟಿಪಿಪಿ ಅಧಿನಿಯಮದ ಕಲಂ 4ಜಿ ರಡಿ ವಿನಾಯಿತಿ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಹ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+