Karnataka High Court Jobs 2023: ಪದವಿ ಆಗಿದ್ದರೆ ಬೆಂಗಳೂರಿನಲ್ಲೇ ಲಕ್ಷ ಸಂಬಳದ ಸರ್ಕಾರಿ ಉದ್ಯೋಗ, ವಿವರ
ಬೆಂಗಳೂರು, ನವೆಂಬರ್ 01: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು (ಹೈಕೋರ್ಟ್) ತನ್ನಲ್ಲಿ ಖಾಲಿ ಕೆಲವು ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 17ರೊಳಗೆ ಅಲ್ಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ಒಟ್ಟು 14 ಜಿಲ್ಲಾ ನ್ಯಾಯಾಧೀಶ ಹುದ್ದೆಗಳು ಖಾಲಿ ಇವೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಕರ್ನಾಟಕ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ನೇಮಕಾತಿ, ಅರ್ಜಿ ಸಲ್ಲಿಕೆ, ಆಯ್ಕೆ ಮಾಹಿತಿ
ಸಂಸ್ಥೆ ಹೆಸರು: ಕರ್ನಾಟಕ ಹೈಕೋರ್ಟ್
ಹುದ್ದೆ ಹೆಸರು: ಜಿಲ್ಲಾ ನ್ಯಾಯಾಧೀಶ
ಎಷ್ಟು ಖಾಲಿ ಹುದ್ದೆ: ಒಟ್ಟು 14
ಮಾಸಿಕ ಸಂಬಳ: 1,44,840 ರಿಂದ 1,94,660 ರೂಪಾಯಿ
ಪೋಸ್ಟಿಂಗ್: ಬೆಂಗಳೂರು
ಅರ್ಜಿ ಸಲ್ಲಿಕೆಗೆ ಕೊನೆ ದಿನ: ನವೆಂಬರ್ 17
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಕಡ್ಡಾಯವಾಗಿ ಕಾನೂನಿನಲ್ಲಿ ಪದವಿ, LLB ಪೂರ್ಣಗೊಳಿಸಿರಬೇಕು ಎಂದು ಕರ್ನಾಟಕ ಹೈಕೋರ್ಟ್ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ವಯೋಮಿತಿ ವಿವರ
ಅಭ್ಯರ್ಥಿಗಳ ವಯಸ್ಸು ನವೆಂಬರ್ 17ಕ್ಕೆ ಸರಿಯಾಗಿ ಗರಿಷ್ಠ 45 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ. ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಕೆ ಇರಲಿದೆ. ಪೂರ್ವಭಾವಿ ಪರೀಕ್ಷಾ ಶುಲ್ಕವು ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳ/ಪ್ರವರ್ಗ-I ಅಭ್ಯರ್ಥಿಗೆ ತಲಾ 500 ರೂಪಾಯಿ ಹಾಗೂ ಇತರ ಎಲ್ಲ ಅಭ್ಯರ್ಥಿಗಳಿಗೆ 1000 ರೂಪಾಯಿ ವಿಧಿಸಲಾಗಿದೆ. ಅರ್ಜಿ ಶುಲ್ಕ ಪಾವತಿಗೆ ನವೆಂಬರ್ 18 ಕೊನೆಯ ದಿನವಾಗಿದೆ.

ಆಯ್ಕೆ ಹೇಗೆ
ಅರ್ಜಿ ಸಲ್ಲಿಸುವವರಿಗೆ ಮೊದಲು ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ನಂತರ ಮುಖ್ಯ ಪರೀಕ್ಷೆ ನಡೆಸಿ ಅಲ್ಲಿ ಆಯ್ಕೆ ಆಗುವವರಿಗೆ ವೈವಾ-ವೋಸ್ ಟೆಸ್ಟ್ ಇಡಲಾಗುತ್ತದೆ. ಇಲ್ಲಿ ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು ಎಂದು ಹೈಕೋರ್ಟ್ ಅಧಿಸೂಚನೆ ತಿಳಿಸಿದೆ.
ಅಭ್ಯರ್ಥಿಗಳು ಇಲ್ಲಿನ ಲಿಂಕ್ (https://recruitmenthck.kar.nic.in/hck/djr/home.php) ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications