ಆರೋಗ್ಯ ಇಲಾಖೆ ನೇಮಕಾತಿ; ಮಾರ್ಚ್ 21ರಂದು ನೇರ ಸಂದರ್ಶನ

ಬೆಂಗಳೂರು, ಮಾರ್ಚ್ 18; ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿ ಎನ್‌. ಹೆಚ್. ಎಂ ಅಡಿಯಲ್ಲಿ ನಡೆಸಲಾಗುತ್ತಿರುವ ತರಬೇತಿ ಕಾರ್ಯಕ್ರಮಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಇದಕ್ಕಾಗಿ ಮಾರ್ಚ್ 21ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ತಮ್ಮ ಮೂಲ ದಾಖಲೆಗಳ ಜೊತೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹುದ್ದೆಗಳ ವಿವರಗಳು; ಪಿ. ಜಿ. ಹೆಚ್. ಪಿ. ಇ. ಕೋರ್ಸ್ ತರಬೇತಿಗೆ 1 ಸಂವಹನ ಬೋಧಕ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿಗಳಿಗೆ ವೇತನ 42,000 ರೂ.ಗಳು. ಅಭ್ಯರ್ಥಿಗಳು 3 ರಿಂದ 5 ವರ್ಷಗಳ ಕಾಲ ಸ್ನಾತಕೋತ್ತರ ಪದವೀಧರರಿಗೆ ಬೋಧನೆ ಮಾಡಿರುವ ಅನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 65 ವರ್ಷದೊಳಗಿರಬೇಕು.

Karnataka Health Department Walk In Interview On March 21

ನಿಪುಣ ಕೌಶಲ್ಯ ಪ್ರಯೋಗಾಲಯ1 , ನಿಪುಣ ಕೌಶಲ್ಯ ಪ್ರಯೋಗಾಲಯ 1 (ಜಯನಗರ ಜನರಲ್ ಆಸ್ಪತ್ರೆ) ವೈದ್ಯಾಧಿಕಾರಿ ತರಬೇತಿದಾರರ ಹುದ್ದೆಗೆ ಸಹ ನೇರ ಸಂದರ್ಶನ ನಡೆಯಲಿದೆ. ಆರೋಗ್ಯ ಇಲಾಖೆಯಲ್ಲಿ 5 ವರ್ಷ ಸೇವೆ ಮಾಡಿದ ಅನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 65 ವರ್ಷಗಳು.

ಸಿ. ಪಿ. ಹೆಚ್. ಎನ್. ಕೋರ್ಸ್ ಪ್ರೋಗ್ರಾಮ್‌ ಅಸಿಸ್ಟೆಂಟ್ ಕಮ್ ವಾರ್ಡನ್ 1 ಹುದ್ದೆ. ಮಾಸಿಕ ವೇತನ 20 ಸಾವಿರ ರೂ.ಗಳು. ಅಭ್ಯರ್ಥಿಗಳು ಮೂರು ವರ್ಷದ ಅನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 40 ವರ್ಷಗಳು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆಯ www.karunadu.gov.in.hfw ವೆಬ್‌ಸೈಟ್‌ನಲ್ಲಿ ಆರೋಗ್ಯ ಇಲಾಖೆ ಲಿಂಕ್ ಒತ್ತುವ ಮೂಲಕ ಇತ್ತೀಚಿನ ಮಾಹಿತಿಗಳನ್ನು ಪಡೆಯಬಹುದಾಗಿದೆ. ಕಚೇರಿಯ ಕೆಲಸದ 10 ರಿಂದ 5ರ ಸಮಯದಲ್ಲಿ ದೂರವಾಣಿ ಸಂಖ್ಯೆ 080-23206125/26 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕ; ಕಲ್ಯಾಣ ಕರ್ನಾಟಕ 7 ಜಿಲ್ಲೆಗಳಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿಗಳ) ವೃಂದದ 5000 ಹುದ್ದೆಗಳು ಹಾಗೂ ಉಳಿಕೆ ವೃಂದದ 10,000 ಒಟ್ಟಾರೆ 15,000 ಹುದ್ದೆಗಳನ್ನು ಭರ್ತಿ ಮಾಡಲು ಉಲ್ಲೇಖ 2ರ ಸರ್ಕಾರದ ಅನುಮೋದನೆ ನೀಡಲಾಗಿದೆ.

ಸದರಿ ಕಲ್ಯಾಣ ಕರ್ನಾಟಕ 7 ಜಿಲ್ಲೆಗಳಲ್ಲಿನ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿಗಳ) ವೃಂದದ 5 ಸಾವಿರ ಹುದ್ದೆಗಳು ಹಾಗೂ ಉಳಿಕೆ ವೃಂದದ 10 ಸಾವಿರ ಒಟ್ಟು 15 ಸಾವಿರ ಹುದ್ದೆಗಳನ್ನು ಜಿಲ್ಲಾವಾರು ಹುದ್ದೆಗಳ ಮರು ಹಂಚಿಕೆ ಉಲ್ಲೇಖ 2 ಏಕ ಕಡತದಲ್ಲಿ ಅನುಮೋದನೆ ಕೋರಿ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ನಿರೀಕ್ಷಿಸಿದೆ.

ಅನುಮೋದನೆಯನ್ನು ನಿರೀಕ್ಷಿಸಿ ಪ್ರಸ್ತುತ ಜಿಲ್ಲಾವಾರು/ ವಿಯಷವಾರು ಹುದ್ದೆಗಳ ಜಿಲ್ಲಾ ಹಂಚಿಕೆಯನ್ನು ಅನುಬಂಧದಲ್ಲಿ ಲಗತ್ತಿಸಿದೆ. ಜಿಲ್ಲೆಗಳಿಗೆ ಹಂಚಿಕೆ ಮಾಡಲಾದ ವಿಷಯವಾರು/ ಹುದ್ದೆಗಳಿಗೆ ಅನುಗುಣವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಕಚೇರಿಯ ನೋಡೆಲ್ ಅಧಿಕಾರಿ ಹಾಗೂ ವಿಷಯ ನಿರ್ವಾಹಕರ ಸಭೆಯನ್ನು ಆಯೋಜಿಸಿ ಸಂಬಂಧಪಟ್ಟ ಜಿಲ್ಲೆಗಳಿಂದ ಸೀಟ್ ಮ್ಯಾಟ್ರಿಕ್ಸ್ ಪಡೆದು ಅತಿ ಶೀಘ್ರವಾಗಿ ಜಿಲ್ಲಾವಾರು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ ನೇಮಕಾತಿ ಪ್ರಕ್ರಿಯೆ ಮುಂದುವರೆಸುವ ಸಂಬಂಧ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+