ಅರಣ್ಯ ಇಲಾಖೆಯಲ್ಲಿ 3085 ಹುದ್ದೆಗಳ ಭರ್ತಿಗೆ ಒಪ್ಪಿಗೆ

ಬೆಂಗಳೂರು, ಜೂನ್ 03 : ಅರಣ್ಯ ಇಲಾಖೆಯಲ್ಲಿ ಮುಂದಿನ 5 ವರ್ಷಗಳಲ್ಲಿ 3085 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಒಪ್ಪಿಗೆ ಸಿಕ್ಕಿದೆ. ಆರ್ಥಿಕ ಇಲಾಖೆ ಹೊಸ ಹುದ್ದೆಗಳನ್ನು ಸೃಷ್ಟಿ ಮಾಡುವುದಕ್ಕೆ ಅನುಮೋದನೆ ನೀಡಿದೆ.

ಅರಣ್ಯ ಇಲಾಖೆಯ ಎಲ್ಲಾ ವೃಂದಗಳ ಪುನರಾವಲೋಕನ ಮತ್ತು ಸಂವರ್ಧನೆ ಕುರಿತಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮಾ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿ ನೀಡಿದ ಶಿಫಾರಸಿನ ಅನ್ವಯ ಹೊಸ ಹುದ್ದೆಗಳ ಸೃಷ್ಟಿಗೆ ಒಪ್ಪಿಗೆ ಸಿಕ್ಕಿದೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದೆ. ಮುಂದಿನ 5 ವರ್ಷಗಳಲ್ಲಿ ಅರಣ್ಯ ಇಲಾಖೆಯಲ್ಲಿ ವಿವಿಧ ಸ್ಥರದ 3085 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

2019-20ರಲ್ಲಿ ಸಹಾಯಕ ಸಂರಕ್ಷಣಾಧಿಕಾರಿ 16, ಉಪವಲಯ ಅರಣ್ಯಾಧಿಕಾರಿ 75, ಅರಣ್ಯ ರಕ್ಷಕ 150, ಅರಣ್ಯ ವೀಕ್ಷಕ 75 ಸೇರಿದಂತೆ 323 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಶೀಘ್ರದಲ್ಲೇ ಈ ಕುರಿತು ಅಧಿಸೂಚನೆ ಹೊರಡಿಸಲಾಗುತ್ತದೆ.....

ಹೊಸ ಹುದ್ದೆಗಳ ಸೃಷ್ಟಿ

ಹೊಸ ಹುದ್ದೆಗಳ ಸೃಷ್ಟಿ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮಾ ನೇತೃತ್ವದ ಸಮಿತಿಯು 9/6/2015ರಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಇಲಾಖೆಗೆ ಅಗತ್ಯವಿರುವ ಹುದ್ದೆಗೆಳ ಸೃಜನೆ ಕುರಿತಂತೆ ಶಿಫಾರಸು ಮಾಡಿತ್ತು. ಆರ್ಥಿಕ ಇಲಾಖೆಯು 2019-20ನೇ ಸಾಲಿನಿಂದ ಆರಂಭವಾಗುವಂತೆ 5 ವರ್ಷಗಳಲ್ಲಿ 3085 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಿದೆ.

ಯಾವ-ಯಾವ ಹುದ್ದೆಗಳು

ಯಾವ-ಯಾವ ಹುದ್ದೆಗಳು

ಮುಂದಿನ ಐದು ವರ್ಷಗಳಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 16, ವಲಯ ಅರಣ್ಯಾಧಿಕಾರಿ 67,, ಉಪ ವಲಯ ಅರಣ್ಯಾಧಿಕಾರಿ 751, ಅರಣ್ಯ ರಕ್ಷಕ 1500 ಮತ್ತು ಅರಣ್ಯ ವೀಕ್ಷಕ 51 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

2019-20ರ ನೇಮಕಾತಿ

2019-20ರ ನೇಮಕಾತಿ

2019-20ನೇ ಸಾಲಿನಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 16, ವಲಯ ಅರಣ್ಯಾಧಿಕಾರಿ 7,, ಉಪ ವಲಯ ಅರಣ್ಯಾಧಿಕಾರಿ 75, ಅರಣ್ಯ ರಕ್ಷಕ 150 ಮತ್ತು ಅರಣ್ಯ ವೀಕ್ಷಕ 75 ಸೇರಿ 323 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

323 ಹುದ್ದೆಗಳ ಭರ್ತಿ

323 ಹುದ್ದೆಗಳ ಭರ್ತಿ

ಅರಣ್ಯ ಇಲಾಖೆ 323 ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ. ಹುದ್ದೆಗಳಿಗೆ ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳು ಅಧಿಸೂಚನೆ ಪ್ರಕಟವಾದ ಬಳಿಕ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+