ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ: ಕೆಸಿಸಿ ಬ್ಯಾಂಕ್ ಸಹಾಯಕ ಕ್ಲರ್ಕ್ ಹುದ್ದೆಗೆ ಅರ್ಜಿ ಹಾಕಿ

|
Google Oneindia Kannada News

ಧಾರವಾಡ, ಸೆಪ್ಟೆಂಬರ್ 11: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಧಾರವಾಡ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಸಹಾಯಕ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ, ಅಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸೆಪ್ಟೆಂಬರ್30, 2022ರೊಳಗೆ ಸಲ್ಲಿಸಬಹುದು.

ಬ್ಯಾಂಕ್ ಕಾರ್ಯ ವ್ಯಾಪ್ತಿಗೆ ಒಳಪಡುವ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.

ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಧಾರವಾಡದ ಕೇಂದ್ರ ಕಚೇರಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಸುಭಾಸ ರಸ್ತೆ, ಧಾರವಾಡ ಇಲ್ಲಿ ಕೇಂದ್ರ ಕಚೇರಿ ಇದೆ. ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಸಕ್ತರು ಸಲ್ಲಿಕೆ ಮಾಡಬಹುದು.

SBI Recruitment 2022: 5008ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿSBI Recruitment 2022: 5008ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿ

ಸಂಸ್ಥೆ ಹೆಸರು: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಉದ್ಯೋಗ ಸ್ಥಳ: ಧಾರವಾಡದ ಕೇಂದ್ರ ಕಚೇರಿ
ಹುದ್ದೆ ಹೆಸರು: ಸಹಾಯಕ (ಕ್ಲರ್ಕ್)
ಹುದ್ದೆ ಸಂಖ್ಯೆ: 87
ಸಂಬಳ ವಿವರ: 16,000 ರಿಂದ 29,600 ರು ಪ್ರತಿ ತಿಂಗಳು

Karnataka Central Co Operative Bank Recruitment: Apply For 87 Clerk Posts At Dharwad

ವಿದ್ಯಾರ್ಹತೆ: ಸಹಾಯಕ ಕ್ಲರ್ಕ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

* ಕನ್ನಡ ಭಾಷೆ ಓದಲು, ಬರೆಯಲು ಹಾಗೂ ಮಾತನಾಡಲು ಬಲ್ಲವರಿಗೆ ಆದ್ಯತೆ
* ಕಂಪ್ಯೂಟರ್ ಆಪರೇಟಿಂಗ್ ಹಾಗೂ ಅಪ್ಲಿಕೇಷನ್ ಬಗ್ಗೆ ತಿಳಿದಿರಬೇಕು.

ವಯೋಮಿತಿ: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ. ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿ ಮಾಡಲಾಗಿದೆ. ಅಧಿಸೂಚನೆಯಂತೆ ಕನಿಷ್ಠ 18ರಿಂದ ಗರಿಷ್ಠ 35 ವರ್ಷಗಳು ಎಂದು ನಿಗದಿಪಡಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ, ಹಿಂದುಳಿದ ವರ್ಗ (ಒಬಿಸಿ) ದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿಯನ್ನು ನಿಯಮಾನುಸಾರ ಸಿಗಲಿದೆ.

BEL Recruitment 2022: ಬಿಇಎಲ್‌ನಲ್ಲಿ 100 ಟ್ರೈನಿ ಇಂಜಿನಿಯರ್ ಹುದ್ದೆಗಳಿವೆBEL Recruitment 2022: ಬಿಇಎಲ್‌ನಲ್ಲಿ 100 ಟ್ರೈನಿ ಇಂಜಿನಿಯರ್ ಹುದ್ದೆಗಳಿವೆ

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿ, ಮಾಜಿ ಯೋಧ: 590 ರು
ಸಾಮಾನ್ಯ. ಹಿಂದುಳಿದ ವರ್ಗ: 1180
ಅರ್ಜಿ ಶುಲ್ಕ ಪಾವತಿ ವಿಧಾನ: NEFT

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಬರೆದು, ಸ್ವಯಂ ದೃಢೀಕರಿಸಿದ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಭ್ಯರ್ಥಿಗಳು ಸಲ್ಲಿಕೆ ಮಾಡಬಹುದಾಗಿದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 06/09/2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30/09/2022

ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ;
Chief Executive Officers, KCC Bank Limited,
Head Office: Post Box No: 21, Subhas Road,
Dharwad, Karnataka.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬ್ಯಾಂಕಿನ ಅಧಿಕಾರಿ ಮೊಬೈಲ್ ನಂಬರ್ 7259014297ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

English summary
Karnataka Central Co-operative Bank Limited Dharwad invited applications for 87 Clerk posts. Candidates can submit applications till September 30, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X