Karnataka Bank: ಕರ್ನಾಟಕ ಬ್ಯಾಂಕ್ ನೇಮಕಾತಿ, 75 ಹುದ್ದೆಗಳು
ಬೆಂಗಳೂರು, ಮಾರ್ಚ್ 25: ಬ್ಯಾಂಕ್ ಕೆಲಸದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಕರ್ನಾಟಕ ಮೂಲದ ಪ್ರಮುಖ ಬ್ಯಾಂಕ್ ಆದ ಕರ್ನಾಟಕ ಬ್ಯಾಂಕ್ ಒಟ್ಟು 75 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಫೀಸರ್ ಸ್ಕೇಲ್ ಗ್ರೇಡ್-1 ಹುದ್ದೆಗಳು ಇದಾಗಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳನ್ನು ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 48,480 ರೂ. ಮಾಸಿಕ ವೇತನವನ್ನು ನಿಗದಿ ಮಾಡಲಾಗಿದೆ.
ಕರ್ನಾಟಕ ಬ್ಯಾಂಕ್ ಚಾರ್ಟರ್ಡ್ ಅಕೌಂಟೆಂಟ್ 25, ಲಾ-ಆಫೀಸರ್ 10, ಸ್ಪೆಷಲಿಸ್ಟ್ ಆಫೀಸರ್ 10, ಐಟಿ ಸ್ಪೆಷಲಿಸ್ಟ್ 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. ಆಸಕ್ತರು, ಅರ್ಹರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಹುದ್ದೆಗಳು ಯಾವ ಯಾವ ನಗರಕ್ಕೆ ಎಂದು ನೇಮಕಾತಿ ಆದೇಶ ತಿಳಿಸಿಲ್ಲ.

ಚಾರ್ಟರ್ಡ್ ಅಕೌಂಟೆಂಟ್ ಹುದ್ದೆಗೆ 2024, 2025ನೇ ಬ್ಯಾಚ್‌ನ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಲಾ-ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವವರು ಎಲ್‌ಎಲ್‌ಎಂ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. 2024/ 25ನೇ ಬ್ಯಾಚ್ ಮಾತ್ರ.
ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಎಂಬಿಎ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಡೆದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿ 2024/ 25ನೇ ಸಾಲಿನಲ್ಲಿ ಶೇ 70ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಐಟಿ ಸ್ಪೆಷಲಿಸ್ಟ್ ಹುದ್ದೆಗೆ ಬಿಇ (ಐಟಿ), ಎಂಸಿಎ, ಎಂಟೆಕ್ (ಐಟಿ) ಪದವಿಯನ್ನು 2024/ 25ನೇ ಸಾಲಿನಲ್ಲಿ ಶೇ 70ರಷ್ಟು ಅಂಕಗಳೊಂದಿಗೆ ಪದವಿ/ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನ ಮಾಹಿತಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಬ್ಯಾಂಕ್ ನೇಮಕಾತಿ ನಿಯಮಗಳ ಅನ್ವಯ ಮಾಸಿಕ 48,480 ರೂ. ವೇತನವನ್ನು ನೀಡಲಾಗುತ್ತದೆ. ಅಭ್ಯರ್ಥಿ ಡಿಎ, ಹೆಚ್‌ಆರ್‌ಎ ಸೇರಿದಂತೆ ಇತರ ಭತ್ಯೆಯನ್ನು ಪಡೆಯಲು ಅರ್ಹರು. ಮೆಟ್ರೋ ನಗರದಲ್ಲಿ ಪ್ರಸ್ತುತ ಸಿಟಿಸಿ ಪ್ರತಿ ತಿಂಗಳಿಗೆ 1,21,000 ರೂ. ಆಗಿರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ ನಿಗದಿ ಪಡಿಸುವ ಸ್ಥಳದಲ್ಲಿ ಅಥವ ಮಂಗಳೂರಿನಲ್ಲಿ ತರಬೇತಿಯನ್ನು ಪಡೆಯಬೇಕು. ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಬ್ಯಾಂಕ್ ಶಾಖೆಗಳಿಗೆ ನಿಯೋಜನೆ ಮಾಡಲಾಗುತ್ತದೆ.
ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳು ಒಂದು ವರ್ಷದ ಕಾಲ ಪ್ರೊಬೆಷನರಿಯಾಗಿರುತ್ತಾರೆ. ಅವರ ಕೆಲಸ ತೃಪ್ತಿಕರವಾಗಿದ್ದರೆ ಮಾತ್ರ ಅಭ್ಯರ್ಥಿಗಳ ಸೇವೆಯನ್ನು ಮುಂದುವರೆಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ಬ್ಯಾಂಕ್ ಚಾರ್ಟರ್ಡ್ ಅಕೌಂಟೆಂಟ್, ಲಾ-ಆಫೀಸರ್, ಸ್ಪೆಷಲಿಸ್ಟ್ ಆಫೀಸರ್, ಐಟಿ ಸ್ಪೆಷಲಿಸ್ಟ್ ಹುದ್ದೆಗಳ ಸಂಖ್ಯೆ, ನೇಮಕಾತಿ ವಿಧಾನ ಸೇರಿದಂತೆ ಅಗತ್ಯ ಬದಲಾವಣೆಯನ್ನು ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿದೆ.
ಆಸಕ್ತ ಮತ್ತು ಅರ್ಹರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಕೆ ಮಾಡುವ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ ಎಂದು ನೇಮಕಾತಿ ಆದೇಶ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications