Karnataka Bank Recruitment: ಕರ್ನಾಟಕ ಬ್ಯಾಂಕ್ ನೇಮಕಾತಿ, ವೇತನ ವಿವರ
ಬೆಂಗಳೂರು, ಡಿಸೆಂಬರ್ 03: ಕರ್ನಾಟಕ ಬ್ಯಾಂಕ್ ದೇಶಾದ್ಯಂತ ತನ್ನ ಕಛೇರಿ/ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗೆ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆದಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು, ಶುಲ್ಕ ಪಾವತಿ ಮಾಡಲು 10/12/2024 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗೆ ಪರೀಕ್ಷೆಗಳು ನಡೆಯುವ ತಾತ್ಕಾಲಿಕ ದಿನಾಂಕ 22/12/2024.
ಕರ್ನಾಟಕ ಬ್ಯಾಂಕ್ Probationary Officer (PO) ಸ್ಕೇಲ್-1 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ/ ಅಗ್ರಿಕಲ್ಚರ್ ಸೈನ್ಸ್‌ನಲ್ಲಿ ಪದವಿ/ ಕಾನೂನು ವಿಷಯದಲ್ಲಿ ಪದವಿ ಅಥವ ಸಿಎ, ಸಿಎಸ್, ಸಿಎಂಎ, ಐಸಿಡಬ್ಲ್ಯುಎ ಕೋರ್ಸ್‌ಗಳನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಬೋರ್ಡ್ ಅಥವ ಸಂಸ್ಥೆಗಳಿಂದ ಪಡೆದಿರಬೇಕು.

ಅಭ್ಯರ್ಥಿಗಳು 1/11/2024ಕ್ಕೆ ಅನ್ವಯವಾಗುವಂತೆ ಪ್ರಮಾಣ ಪತ್ರಗಳನ್ನು ಹೊಂದಿರಬೇಕು. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುವಂತಿಲ್ಲ. ಅಭ್ಯರ್ಥಿಗಳಿಗೆ ವಯೋಮಿತಿ 28 ವರ್ಷಗಳು (1/11/2024ಕ್ಕೆ ಅನ್ವಯ). ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕದ ಮಾಹಿತಿ: ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ/ ಮೀಸಲಾತಿ ರಹಿತ/ ಒಬಿಸಿ ಮತ್ತು ಇತರ ಅಭ್ಯರ್ಥಿಗಳು 800 ರೂ. ಮತ್ತು ಇತರ ತೆರಿಗೆಯನ್ನು ಸೇರಿಸಿ ಶುಲ್ಕ ಪಾವತಿಸಬೇಕು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳು 700 ರೂ. ಮತ್ತು ಇತರ ತೆರಿಗೆ ಸೇರಿ ಶುಲ್ಕ ಕಟ್ಟಬೇಕು, ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ.
Probationary Officer ಹುದ್ದೆಗೆ ವೇತನ 48,480 ಪ್ರತಿ ತಿಂಗಳು. ಅಭ್ಯರ್ಥಿಗಳೂ ಡಿಎ, ಹೆಆರ್‌ಎ ಮತ್ತು ಇತರ ಭತ್ಯೆಗೆ ಸಹ ಅರ್ಹರು. ಮೆಟ್ರೋ ನಗರಗಳಲ್ಲಿ ಈ ಹುದ್ದೆಗೆ ಸಿಟಿಸಿ ವೇತನ ಪ್ರತಿ ತಿಂಗಳು 1,17,000 ರೂ.ಗಳು.
ಆನ್‌ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಿ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಗಳ ತಾತ್ಕಾಲಿಕ ದಿನಾಂಕ 22/12/2024. ಪರೀಕ್ಷೆಗಳು ಬೆಂಗಳೂರು, ಚೆನ್ನೈ, ಮುಂಬೈ, ನವದೆಹಲಿ, ಹೈದರಾಬಾದ್, ಕೋಲ್ಕತ್ತಾ, ಪುಣೆ, ಮಂಗಳೂರು, ಧಾರವಾಡ/ ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ, ಕಲಬುರಗಿಯಲ್ಲಿ ನಡೆಯಲಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮಂಗಳೂರಿನಲ್ಲಿ ನಡೆಯುವ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ಅಥವ ಬ್ಯಾಂಕ್ ತೀರ್ಮಾನಿಸುವ ಸ್ಥಳದಲ್ಲಿ ನಡೆಯುವ ಇಂಡಕ್ಷನ್ ಟ್ರೈನಿಂಗ್ ಪ್ರೋಗಾಮ್‌ನಲ್ಲಿ ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಬ್ಯಾಂಕ್ ಕಛೇರಿ/ ಶಾಖೆಗೆ ನಿಯೋಜನೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಒಂದು ವರ್ಷ ಪ್ರೊಬೆಷನರಿಯಾಗಿ ಕೆಲಸ ಮಾಡಬೇಕು. ಬ್ಯಾಂಕ್ ನೇಮಕಾತಿ ನಿಯಮಗಳ ಅನ್ವಯ ಪ್ರೊಬೆಷನರಿ ಸಮಯದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡಿದವರನ್ನು ಖಾಯಂಗೊಳಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಸರಿಯಾದ ಇ-ಮೇಲ್ ಐಡಿ, ಮೊಬೈಲ್ ನಂಬರ್ ನೀಡಬೇಕು. ಸಂಪೂರ್ಣ ಆಯ್ಕೆ ಪ್ರಕ್ರಿಯೆಗೆ ಇದನ್ನು ಬಳಕೆ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://karnatakabank.com/ ವೆಬ್‌ಸೈಟ್‌ಗೆ ಭೇಟಿ ನೀಡಿ.












Click it and Unblock the Notifications